ಎಕ್ಸಾಂ ಬರೆಯದೇ ಇದ್ದರು ಪದವಿ ವಿದ್ಯಾರ್ಥಿಗಳು ಪಾಸ್?!

ಕೊರೊನಾ ಆರ್ಭಟದಿಂದಾಗಿ ಇಡೀ ದೇಶ ಲಾಕ್ ಡೌನ್ ಆದ ಹಿನ್ನೆಲೆ, ಶೈಕ್ಷಣಿಕ ಕ್ಷೇತ್ರದ ಮೇಲೂ ದೊಡ್ಡ ಪರಿಣಾಮವನ್ನೇ ಬೀರಿದೆ, ಈಗಾಗಲೇ SSLC ಹೊರತು ಪಡಿಸಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಎಕ್ಸಾಂ ನೀಡದೆ ತೆರ್ಗಡೆ‌ ಮಾಡಲು ನಿರ್ಧರಿಸಲಾಗಿದೆ. CBSC SSLC ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ರೆ.ಈಗ ಪದವಿ‌ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೆರ್ಗಡೆ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ಮಾಡಿದೆ. ಪದವಿ ಓದುತ್ತಿರೋ ಮೊದಲ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತೆರ್ಗಡೆ ಮಾಡಿ ಅಂತಿಮ‌ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ‌ ನಡೆಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವ ಉದಯ್ ಸಾವಂತ್ ಘೋಷಿಸಿದ್ದಾರೆ. ಈ ನಿರ್ಧಾರ ಸದ್ಯ ನಮ್ಮ ರಾಜ್ಯದಲ್ಲೂ ಘೋಷಣೆಯಾಗ ಬಹುದಾ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top