ಊಟದ ಜೊತೆ ಈರುಳ್ಳಿ ದಯವಿಟ್ಟು ಕೇಳಬೇಡಿ ಎಂದ ಹೋಟೆಲ್‌ ಮಾಲೀಕ..!

ಈರುಳ್ಳಿ ಈ ಒಂದು ಹೆಸರು ಕೇಳಿದ್ರೆ ಈಗ ಕಣ್ಣಲ್ಲಿ ನೀರು ಸುರಿಯೋದು ಗ್ಯಾರಂಟಿ. ಈರುಳ್ಳಿ ಹೆಚ್ಚಿದಾಗ ಬರುತ್ತಿದ್ದ ನೀರು ಈಗ ಕೊಂಡುಕೊಳ್ಳುವಾಗಲು ಸಹ ಬರೋ ಹಾಗೆ ಆಗಿದೆ..ಇಷ್ಟು ದಿನ ಈರುಳ್ಳಿ ಬೆಲೆ ಪಾತಾಳಕ್ಕೆ ಇಳಿದಿದೆ ಅಂತ ಹೇಳ್ತಾ ಇದ್ದದ್ದು, ಈಗ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಬೀರಿದ್ರೆ, ಇತ್ತ ಗ್ರಾಹಕರು ಮತ್ತು ಹೋಟೆಲ್‌ ಮಾಲೀಕರ ಕಣ್ಣಲ್ಲಿ ನೀರು ಬರೋ ಹಾಗೆ ಹಾಗಿದೆ. ಹೌದು ಒಂದು ಕೆ.ಜಿ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ 70 ರಿಂದ 90 ರೂಪಾಯಿಯವರೆಗೆ ಹೋಗಿದ್ದು. ದುಬಾರಿ ಈರುಳ್ಳಿಯನ್ನು ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳಿಗೆ ಈರುಳ್ಳಿ ಬಳಸಲು ಹಿಂದೆ ಮುಂದೆ ನೋಡುವ ಹಾಗೆ ಆಗಿದೆ. ಇನ್ನು ಈರುಳ್ಳಿ ದರ ಹೆಚ್ಷಾದ ಕಾರಣ ಹೋಟೆಲ್‌ ಗಳಲ್ಲಿ ಊಟದ ಜೊತೆ ಈರುಳ್ಳಿ ಕೇಳಬೇಡಿ ಎಂದು ಬೋರ್ಡ್‌ಗಳನ್ನು ಹಾಕಿಕೊಂಡಿದ್ದಾರೆ. ಹೇಳಿ ಕೇಳಿ ಉತ್ತರ ಕರ್ನಾಟಕದಲ್ಲಿ ಊಟದ ಜೊತೆ ಈರುಳ್ಳಿಯನ್ನು ಉಪಯೋಗಿಸುವುದು ಸಾಮಾನ್ಯ. ಈಗ ಈರುಳ್ಳಿ ಬೆಲೆ ಏರಿಕೆ ಯಾಗಿರುವುದರಿಂದ ಊಟದ ದರವೂ ಹೆಚ್ಚು ಮಾಡುವ ಅಗತ್ಯತೆ ಹೋಟೆಲ್‌ ಮಾಲೀಕರದ್ದು,

ಆದ್ರೆ ಊಟದ ದರ ಏರಿಕೆ ಮಾಡುವುದರಿಂದ ಗ್ರಾಹಕರ ಮೇಲೆ ಹೊರೆಯಾಗುವುದರ ಜೊತೆ ಗ್ರಾಹಕರ ಬರುವಿಕೆ ಕಮ್ಮಿಯಾಗಬಹದು ಅನ್ನೋ ಕಾರಣಕ್ಕೆ ಉತ್ತರ ಕರ್ನಾಟಕದ ಹಲವು ಹೋಟೆಲ್‌ಗಳಲ್ಲಿ ದಯವಿಟ್ಟು ಊಟದ ಜೊತೆ ಈರುಳ್ಳಿ ಕೇಳಬೇಡಿ ಅನ್ನೋ ಬೋರ್ಡ್‌ಗಳನ್ನು ಹಾಕುವ ಮೂಲಕ ಈರುಳ್ಳಿ ಬೆಲೆಯ ಬಿಸಿಯನ್ನು ತೋರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top