ಊಟಕ್ಕೆ ಮಟನ್‌ ಕಮ್ಮಿ ಹಾಕಿದಳೆಂದು ಪತ್ನಿಯನ್ನೇ ಸುಟ್ಟ ಪಾಪಿ ಪತಿರಾಯ..!

ಗಂಡ ಹೆಂಡತಿಯನ್ನು ಹಿಂಸಿಸಲು ಏನೆಲ್ಲಾ ಕಾರಣಗಳನ್ನು ಹುಟ್ಟಿಸಿಕೊಳ್ತಾನೆ ಅನ್ನೋ ಅನುಮಾನಗಳು ಇತ್ತೀಚಿನ ದಿನಗಳಲ್ಲಿ ಕೇಳೋ ಸುದ್ದಿಗಳಿಂದ ಸೃಷ್ಟಿಯಾಗುತ್ತವೆ. ಅಂತಹದ್ದೇ ಒಂದು ಸಣ್ಣ ಕಾರಣಕ್ಕೆ ಅಮಾನವೀಯ ಕೃತ್ಯ ನಡೆಸಿರೋ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಊಟದ ವೇಳೆ ತನ್ನ ಪತ್ನಿ ತನಗೆ ಕಮ್ಮಿ ಮಟನ್‌ ಹಾಕಿದ್ದಾಳೆ ಎಂದು ಸಿಟ್ಟಾದ ಪತಿರಾಯ ಪತ್ನಿಯನ್ನು ಸೀಮೆ ಎಣ್ಣೆಯಿಂದ ಸುಟ್ಟ ಘಟನೆ ಮುಂಬೈನ ಜೂಯಿ ಕಾಮೋಥೆಯಲ್ಲಿ ನಡೆದಿದೆ. ಇನ್ನು ತನ್ನ ಪತಿಯ ಸಿಟ್ಟಿಗೆ ಗುರಿಯಾದವಳು 37ವರ್ಷದ ಪಲ್ಲವಿ ಸರೋಡ್‌ ಆಗಿದ್ದು ಪಾಪ ಕೃತ್ಯವೆಸಗಿದವನು ಮಾರುತಿ ಸುರೋಡ್‌ ಆಗಿದ್ದಾನೆ. ದಿನಗೂಲಿ ಕಾರ್ಮಿಕನಾಗಿದ್ದು, ಕುಡಿದ ಮತ್ತಿನಲ್ಲಿ ಊಟಮಾಡುವಾಗ ನಿನ್ನೆ ರಾತ್ರಿ ಊಟಕ್ಕೆ ಕಡಿಮೆ ಮಟನ್‌ ಬಡಿಸಿದ್ದಾಳೆ ಎಂದು ಸಿಟ್ಟಿಗೆದ್ದ ಮಾರುತಿ ತನ್ನ ಪತ್ನಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದಾನೆ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಪಲ್ಲವಿಯನ್ನು ಹತ್ತಿರದ ಸಿಯೋನ್‌ ಆಸ್ಪತ್ರೆ ಕರೆದುಕೊಂಡು ಹೋದ್ರು ಆಕೆ ಬದುಕುಳಿಯಲಿಲ್ಲ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top