ಉಪನಾಯಕನಾಗಿದ್ದು ಖುಷಿ ಕೊಟ್ಟಿದೆ – KL Rahul

Kl ರಾಹುಲ್ ಸದ್ಯ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿ ಇದ್ದು,ಐಪಿಎಲ್ ನ ಟಾಪ್ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ತೊಟ್ಟು ಆಡ್ತಾ ಇದ್ದಾರೆ. ಪಂಜಾಬ್ ತಂಡ ಮುನ್ನೆಡೆಸುತ್ತಿರೋ ಕೆಎಲ್,ಸದ್ಯ ಐಪಿಎಲ್ ನಲ್ಲಿ ಸತತ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ ಗೆ ಸಖತ್ ಪೈಪೋಟಿ ನೀಡ್ತಾ ಇದ್ದಾರೆ.ಈಗಾಗಲೇ ತಾನೋಬ್ಬ ಸಮರ್ಥ ಆಟಗಾರ ಜೊತೆ ಸಮರ್ಥವಾಗಿ ತಂಡವನ್ನು ಮುನ್ನಡೆಸಲಬಲ್ಲ ನಾಯಕ ಅನ್ನೋದನ್ನ ಸಾಭೀತು ಮಾಡಿರೋ ರಾಹುಲ್ ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ಮೂರು ಫಾರ್ಮೆಟ್ ಗೂ ಆಯ್ಕೆಯಾಗುವುದರ ಜೊತೆಯಲ್ಲಿ ಟಿ 20 ಮತ್ತು‌ ಏಕದಿನ ಪಂದ್ಯಕ್ಕೆ ಉಪನಾಯನಾಗೋ‌ ಮೂಲಕ ಬಡ್ತಿ ಪಡೆದುಕೊಂಡಿದ್ದಾರೆ.ಈಗಾಗಲೇ ಕೆಎಲ್ ರಾಹುಲ್ ಭವಿಷ್ಯದ ಟೀಂ ಇಂಡಿಯಾದ ಕ್ಯಾಪ್ಟನ್ ಅಂತಾನೇ ಬಿಂಬಿತವಾಗ್ತಾ ಇದ್ದು,ಇದೀಗ ಉಪನಾಯಕನಾಗಿರೋದು ಮತ್ತಷ್ಟು ಬಲತಂದುಕೊಟ್ಟಿದೆ.ಇನ್ನು ಕೆಎಲ್ ರಾಹುಲ್ ಉಪನಾಯನಾಗಿರೋ ಬಗ್ಗೆ ಒಂದಿಷ್ಟು ಪರ ವಿರೋಧಗಳು ಸಹ ಕೇಳಿ ಬರ್ತಾ ಇದೆ. ಅದರ ನಡುವೆಯು ರಾಹುಲ್ ಉತ್ತಮವಾಗಿ ತಮ್ಮ ಜವಬ್ದಾರಿಯನ್ನು ನಿಭಾಯಿಸುತ್ತಾರೆ ಅಂತ ಕೆಲ ಕ್ರಿಕೆಟ್ ತಜ್ಞರು ಹೇಳ್ತಿದ್ದಾರೆ.ಇದೀಗ ಟೀಂ ಇಂಡಿಯಾದ ಉಪನಾಯನಾದ ಮೇಲೆ ಮೊದಲಬಾರಿಗೆ ಕೆಎಲ್ ರಾಹುಲ್ ಮಾತನಾಡಿದ್ದು ,ಉಪನಾಯಕನ ಪಟ್ಟ ಅನಿರೀಕ್ಷಿತ ,ಇದು ಸಂತೋಷದ ಜೊತೆಯಲ್ಲಿ ಹೆಮ್ಮೆಯ ವಿಷಯ ,ಹೊಸ ಜವಬ್ದಾರಿಗೆ ಮತ್ರು ಸವಾಲಿಗೆ ಸಿದ್ದವಾಗಿದ್ದೇನೆ.ಉತ್ತಮ ಪ್ರದರ್ಶನ ನೀಡು ಪ್ರಯತ್ನ ಯಾವಾಗಲು ಇದ್ದೇ ಇರಲಿದೆ ಅಂತ ಉಪನಾಯಕನಾಗಿರೋ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದಾರೆ.ಒಟ್ಟಿನಲ್ಲಿ ಟೀಂ ಇಂಡಿಯಾದ ಉಪನಾಯಕನಾಗಿ ಹೊಸ ಜವಬ್ದಾರಿ ಹೊತ್ತಿದ್ದು ಯಾವ ರೀತಿ ನಿಭಾಯಿಸುತ್ತಾರೆ ಕಾದುನೋಡಬೇಕು.

ಇನ್ನು ಇಂದು ಪಂಜಾಬ್ ಮತ್ತು ಆರ್ ಆರ್ ಸೆಣೆಸಾಡುತ್ತಿದ್ದು ಇಂದಿನ ಯಾರು ಗೆಲ್ಲುತ್ತಾರೆ ಅನ್ನೋ ಕುತೂಹಲ‌ಕೂಡ ಹೆಚ್ಚಾಗಿದೆ

ನಿಮ್ಮ ಪ್ರಕಾರ ಇಂದಿನ ಪಂದ್ಯ ಯಾರು ಗೆಲ್ಲುತ್ತಾರೆ.ಟೀಂ ಇಂಡಿಯಾದ ಉಪನಾಯಕನಾಗಿರೋ ಕೆಎಲ್ ರಾಹುಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top