ಉದ್ಯಮಿ ಕಿಡ್ನಾಪ್‌ ಪ್ರಕರಣ ಸುನಾಮಿ ಕಿಟ್ಟಿ ಹೆಸರು..!

ಉದ್ಯಮಿಯೊಬ್ಬರ ಅಪಹರಣಕ್ಕೆ ಸಂಬಂಧಿಸಿದಂತೆ 7 ಮಂದಿ ಅಪಹರಣಕಾರರನ್ನು ತಿಲಕ್‌ ನಗರ ಪೊಲೀಸರು ಬಂಧಿಸಿದ್ದಾಋಎ.

ಫೈನಾನ್ಸ್‌ ವವ್ಯಹಾರ ನಡೆಸುತ್ತಿದ್ದ ನವೀನ್‌ ಎಂಬಾತನನ್ನು ಅಪಹರಣ ಮಾಡಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು ಮಹೇಶ್‌,ಮೋಹನ್‌,ನವ್ಯಂತ್‌,ಜೋಸೆಫ್‌,ರವಿಕಿರಣ್‌ ಹಾಗೂ ರಾಜು ಆರೋಪಿಗಳನ್ನು ತಿಲಕ್‌ ನಗರ ಪೊಲೀಸರು ಬಂಧಿಸಿದ್ದಾರೆ.ವಾಹನಗಳಿಗೆ ಸಾಲ ಕೊಡುವ ವ್ಯವಹಾರ ಮಾಡುತ್ತಿದ್ದ ನವೀನ್‌ನ್ನು ಅಪಹರಣಕಾರರ ಗುಂಪು ಸ್ಕೋಡಾ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿ, ನಾಗಮಂಗಲದಲ್ಲಿ ಮನೆಯೊಂದರಲ್ಲಿ ಕೂಡಿ ಹಾಕಿದ್ದರು.ಅಲ್ಲಿಂದ ನವೀತ್‌ ತಪ್ಪಿಸಿಕೊಂಡು ಬಂದು ತಿಲಕರ್‌ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇನ್ನು ಈ ಅಪಹರಣ ಪ್ರಕರಣದಲ್ಲಿ ಬಿಗ್‌ಬಾಸ್‌ ಖ್ಯಾತಿಯ ಸುನಾಮಿ ಕಿಟ್ಟಿ ಹೆಸರು ಉಲ್ಲೇಖವಾಗಿದೆ. ಸದ್ಯ ಸುನಾಮಿ ಕಿಟ್ಟಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಈ ಹಿಂದೆ ಅಪಹರಣ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಬಂಧಿಯಾಗಿದ್ದ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top