ಉಗುಳ ಬೇಡ ಎಂದಿದಕ್ಕೆ 11 ಪಾರಿವಾಳಗಳನ್ನು ಕೊಂದ ಯುವಕ

ಪಕ್ಕದ ಮನೆಯವರು ಉಗುಳ ಬೇಡ, ಕೊರೋನಾ ಇರೋದ್ರಿಂದ ಇದು ಒಳ್ಳೆಯದಲ್ಲ ಎಂದು ಹೇಳಿದಕ್ಕೆ ಅವಮಾನಗೊಂಡ ಯುವಕ ಪಕ್ಕದ ಮನೆಯವರಿಗೆ ಸೇರಿದ 11 ಪಾರಿವಾಳಗಳನ್ನು ಕಲ್ಲಿನಿಂದ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಭಾಗಪತ್‌ನಲ್ಲಿ ನಡೆದಿದೆ.


ರಾಹುಲ್‌ ಸಿಂಗ್‌ ಪಾರಿವಾಳಗಳನ್ನು ಕೊಂದ ಯುವಕ, ಈತನಿಗೆ ಪಕ್ಕದ ಮನೆಯ ನಿವಾಸಿ ಧರಂಪಾಲ್‌ ಸಿಂಗ್‌ ಎಂಬುವವರು ಮನೆಯ ಮುಂದೆ ಉಗುಳ ಬೇಡ, ಕೊರೋನಾ ಎಫೆಕ್ಟ್‌ನಿಂದ ಎಲ್ಲೆಂದರಲ್ಲಿ ಉಗುಳುವುದು ನಿಷೇಧಿಸಲಾಗಿದೆ ಎಂದು ಹೇಳಿದ್ದಕ್ಕೆ ಯುವಕ ಅವಮಾನಗೊಂಡು ಧರಂಪಾಲ್‌ ಸಿಂಗ್‌ ಮೇಲ್ಛಾವಣಿಯಲ್ಲಿ ಇದ್ದ ಪಾರಿವಾಳಗಳನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾನೆ.

ಇನ್ನು ಸತ್ತ ಪಾರಿವಾಳಗಳ ವಿಡಿಯೋವನ್ನು ಮಾಡಿಕೊಂಡಿದ್ದ ಧರಂಪಾಲ್‌ ಸಿಂಗ್‌ ರಾಹುಲ್‌ ಸಿಂಗ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನು ದೂರು ದಾಖಲಾಗುತ್ತಿದ್ದಂತೆ ರಾಹುಲ್‌ ಪರಾರಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದೇವೆ. ಶೀಘ್ರದಲ್ಲೇ ನಾವು ಯುವಕನನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top