ಈ ಸಲ ಕಪ್‌ ಗೆಲ್ಲೋದು ಆರ್‌ಸಿಬಿನೇ ಎಂದ ಕ್ರಿಕೆಟ್ ಸ್ಟಾರ್‌..

ಐಪಿಎಲ್‌ ಶುರುವಾಗಲು ಇನ್ನು ಕೇವಲ ೧೨ ದಿನಗಳು ಬಾಕಿ ಇದ್ದು, ಈಗಾಗಲೇ ಐಪಿಎಲ್‌ ವೇಳ ಪಟ್ಟಿ ಬಿಡುಗಡೆಯಾಗಿದೆ. ಇನ್ನು ಮೊದಲ ಪಂದ್ಯ ಮುಂಬೈ ಮತ್ತು ಚೆನ್ನೈ ನಡುವೆ ಉದ್ಘಾಟನ ಪಂದ್ಯ ನಡೆಯಲಿದೆ. ಈಗಾಗಲೇ ಐಪಿಎಲ್‌ ಕಪ್‌ ಯಾರು ಗೆಲ್ಲ ಬಹುದು ಅನ್ನೋ ಲೆಕ್ಕಾಚಾರಗಳು ಸಹ ಶುರುವಾಗಿದ್ದು, ಹೀಗಿರುವಾಗಲೇ ಈ ಸಲ ಕಪ್‌ ಆರ್‌ಸಿಬಿಯದ್ದೆ ಅನ್ನೋ ಲೆಕ್ಕಾಚಾರ ಮಾತ್ರ ಜೋರಾಗಿ ಶುರುವಾಗಿದೆ. ಐಪಿಎಲ್‌ ಗೆಲ್ಲುವ ಹಾಟ್‌ಫೇವರಿಟ್‌ ತಂಡಗಳಲ್ಲಿ ಮೊದಲು ಕೇಳಿ ಬರ್ತಾ ಇರೋ ಟೀಂ ಹೆಸರು ಅದು ಆರ್‌ಸಿಬಿ. ಈ ಬಾರಿ ಒಂದು ಪಕ್ಕಾ ಟೀಂನೊಂದಿಗೆ ಆರ್‌ಸಿಬಿ ಕಣಕ್ಕೆ ಇಳಿತಾ ಇದ್ದು, ಇದರಿಂದಾಗಿ ಆರ್‌ಸಿಬಿ ಕಪ್‌ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ.

ಹೀಗಿರುವಾಗಲೇ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಈಗ ಆರ್‌ಸಿಬಿ ಪರ ಬ್ಯಾಟ್‌ ಬೀಸಿದ್ದಾರೆ. ಇತ್ತಿಚೆಗೆ ಐಪಿಎಲ್‌ ವಿಚಾರವಾಗಿ ಇರ್ಫಾನ್‌ ಪಠಾಣ್‌ ಮಾತನಾಡಿದ್ದು, ʻನನ್ನ ದೃಢಮನಸ್ಸು ಹೇಳ್ತಿದೆ ಈ ಬಾರಿ ಕಪ್‌ ಗೆಲ್ಲೋದು ಆರ್‌ಸಿಬಿ ಅಂತ ಹಾಗೂ ನಾನು ಈ ಬಾರಿ ಕುತೂಹಲದಿಂದ ಪಂದ್ಯ ವೀಕ್ಷಿಸುವುದು ಆರ್‌ಸಿಬಿಗಾಗಿ ಎಂದು ಮಾಜಿ ಕ್ರಿಕೆಟರ್‌ ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top