ಈ ರಾಜಕಾರಣಿಗೆ ನೀವೂ ಸೆಲ್ಯೂಟ್ ಹೊಡಿಲೇ ಬೇಕು.!

ಹೌದು ಲಾಕ್ ಡೌನ್ ಆಗಿ ಇಡೀ ದೇಶವೇ ಸ್ಥಬ್ಧವಾಗಿ ಹೋಗಿದೆ..ಇನ್ನು ಹಲವು ಜನ‌ ತಮ್ಮ ತಮ್ಮ ಕೈಲಾದ ಸಹಾಯವನ್ನು ಮಾಡ್ತಾನೆ ಇದ್ದಾರೆ,ಆದ್ರೆ ಇಲ್ಲೊಬ್ಬ ರಾಜಕಾರಣಿ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಅನ್ನೋ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡುದ್ದು, ಈ ನಿರ್ಧಾರಕ್ಕೆ ಈಗ ಜನತೆ ಫಿದಾ ಆಗಿದ್ದಾರೆ. ಹೌದು ಸದ್ಯ ಲಾಕ್ ಡೌನ್ ನಿಂದಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದಿಲ್ಲ, ಈ ಹಿನ್ನಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ಚಿಂತೆಗೆ ಈಡಾಗಿದ್ದಾರೆ. ಕಾರಣ ಲಾಕ್‌ಡೌನ್ ನಿಂದಾಗಿ ಶಾಲೆಗಳು ತೆರೆಯುತ್ತಿಲ್ಲ ಜೊತೆಗೆ ಪಾಠವನ್ನು ಹೇಳಿಕೊಡಲು ಆಗುತ್ತಿಲ್ಲ, ಹೀಗಿರುವಾಗ ಮಾಜಿ‌ ಶಾಸಕ ವೈ.ಎಸ್.ವಿ ದತ್ತಾ ಈಗ‌ SSLC ಮಕ್ಕಳಿಗಾಗಿ ವಿಶೇಷ ಗಣಿತ ತರಗತಿಯಲ್ಲಿ ಫೇಸ್ ಬುಕ್ ಲೈವ್ ಮೂಲಕ ಹೇಳಿಕೊಡುತ್ತಿದ್ದಾರೆ.

10th mathematics 2nd class

Posted by Ysv Datta on Wednesday, 6 May 2020

ಈ ಮೂಲಕ SSLC ಮಕ್ಕಳಿಗೆ ಅನುಕೂಲವಾಗಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಈಗಾಗಲೇ ಮಕ್ಕಳಿಗಾಗಿ ಪಾಠ ಶುರುಮಾಡಿದ್ದು ಈವರೆಗೆ ಎರಡು ತರಗತಿಗಳನ್ನು ನಡೆಸಿದ್ದಾರೆ. ಈ ಮೂಲಕ SSLC ಮಕ್ಕಳಿ ಅನುಕೂಲವಾಗಿದ್ದು ದತ್ತ ಅವರ ಈ ಕೆಲಸಕ್ಕೆ ಎಲ್ಲಾ ಕಡೆಯಿಂದಲೂ‌ ಮೆಚ್ಚುಗೆ‌ ವ್ಯಕ್ತವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top