ಈ ಬೆಕ್ಕಿನ ತೂಕ ಬರೋಬ್ಬರಿ 11ಕೆಜಿ, ಸೋಶಿಯಲ್ ಮೀಡಿಯಾದಲ್ಲಿ ಈ ಬೆಕ್ಕೆ ಟ್ರೆಂಡ್..!

ಸಾಕು ಪ್ರಾಣಿಗಳಲ್ಲಿ ತುಂಬಾ ಪ್ರೀತಿ ಪಾತ್ರವಾದ ಪ್ರಾಣಿ ಅಂದ್ರೆ ಅದು ಬೆಕ್ಕು, ಇನ್ನು ಬೆಕ್ಕು ಸಾಮಾನ್ಯವಾಗಿ ಒಂದರಿಂದ, ಎರಡು ಕೆಜಿ ಇರುತ್ತದೆ, ಆದ್ರೆ ಅಮೆರಿಕಾದ ಫಿಲಾಡೆಲ್ಫಿಯಾ ಊರಲ್ಲಿ ಟ್ಯಾಬಿ ಅನ್ನೋ ಜಾತಿಗೆ ಸೇರಿದ `ಬೀಜೆ’ ಅನ್ನೋ ಹೆಸರಿನ ಬೆಕ್ಕು ಸುಮಾರು 11 ಕೆಜಿ ತೂಕ ತೂಗುತ್ತದೆ, ಇನ್ನು ಈ ಬೆಕ್ಕನ್ನು ಯಾರದ್ರು ದತ್ತು ಪಡೆಯ ಬೇಕೆನಿಸಿದ್ರೆ ಪಡೆಯಬಹುದು ಎಂದು ಮೋರಿಸ್ ಅನಿಮಲ್ ರೆಫ್ಯೂಜಿ ಸೆಂಟರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು.

ಪೋಸ್ಟ್ ಮಾಡಿದ ಕೆಲವೇ ಗಂಟೆಯಲ್ಲಿ ಈ ಬೆಕ್ಕಿನ ತೂಕದ ಬಗ್ಗೆ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೋಗಿತ್ತು, ಇನ್ನು ಈ ಬೆಕ್ಕನ್ನು ಯಾರು ಕೂಡ ದತ್ತು ಪಡೆಯಲು ಮುಂದೆ ಬಂದಿಲ್ಲವಾದರೂ, ಈ ಬೆಕ್ಕು ಮಾತ್ರ ಸೋಶಿಯಲ್ ಮೀಡಿಯಾಲ್ಲಿ ಭಾರೀ ಸದ್ದು ಮಾಡ್ತಾ ಇದೆ, ಅದ್ಯಾವ ಮಟ್ಟಿಗೆ ಅಂದ್ರೆ ಮೋರಿಸ್ ಅನಿಮಲ್ ರೆಫ್ಯೂಜಿ ಸೆಂಟರ್ ನ ವೆಬ್‍ಸೈಟ್ ಕೂಡ ಕ್ರ್ಯಾಶ್ ಆಗಿ ಹೋಗಿದೆಯಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top