ಈ ಬಾರಿ ಮೈಸೂರು ದಸರಾಗೆ ಚೀನಿ ವಸ್ತು ಬ್ಯಾನ್‌..!

ದೇಶದ ಗಡಿಯಲ್ಲಿ ಚೀನಾ ಮತ್ತು ಭಾರತದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದ್ದು, ಇದೇ ವೇಳೆ ಭಾರತ ಸರ್ಕಾರ ಚೀನಿ ಆಪ್‌ಗಳನ್ನು ಬ್ಯಾನ್‌ ಮಾಡುವ ಮೂಲಕ ಚೀನಾಗೆ ಶಾಕ್‌ ನೀಡಿದೆ. ಇದೀಗ ಮೈಸೂರು ದಸರಾದಲ್ಲಿ ದೀಪಾಲಂಕಾರಕ್ಕೆ ಚೀನಿ ಬಲ್ಬ್‌ಗಳನ್ನು ಬಳಸದೆ ಇರಲು ನಿರ್ಧರಿಸಿದ್ದು, ಆಮೂಲಕ ಆತ್ಮ ನಿರ್ಭರ ಭಾರತಕ್ಕೆ ಚಾಲನೆ ನೀಡಲಾಗುತ್ತಿದೆ.

ಈ ಬಾರಿಯ ದಸರಾದಲ್ಲಿ ಮೈಸೂರು ಅರಮನೆ, ಮೈಸೂರು ನಗರ, ಮತ್ತು ಮೈಸೂರಿನ ಅನೇಕ ಸಕ್ರಲ್‌ಗಳು ಪ್ರತಿ ಬಾರಿ ದೀಪಾಲಂಕಾರದಲ್ಲಿ ಕಂಗೊಳಿಸುತ್ತದೆ. ಅದೇ ರೀತಿ ಈ ಬಾರಿಯು ಕಂಗೊಳಿಸಲಿದ್ದು, ಆದ್ರೆ ಈ ಬಾರಿಯ ದೀಪಾಲಂಕಾರಕ್ಕೆ ಚೀನಿ ಬಲ್ಬ್‌ಗಳನ್ನು ಬಳಸದೇ ಇರಲು ನಿರ್ಧರಿಸಲಾಗಿದೆ.ದಸರಾ ಹಬ್ಬಕ್ಕೆ ಇನ್ನು ಕೆಲವು ದಿನಗಳು ಬಾಕಿ ಇದ್ದು, ಈಗಾಗಲೇ ತಯಾರಿಗಳನ್ನು ಜಿಲ್ಲಾಡಳಿತ ಮಾಡುತ್ತಿದ್ದು.

ಅರಮನೆ ಸೇರಿದಂತೆ ಅನೇಕ ಕಡೆ ಬಲ್ಬುಗಳ ಪರಿಶೀಲನೆಯನ್ನು ಸಹ ಮಾಡುತ್ತಿದ್ದಾರೆ. ಇದರಂತೆ ಚೀನಿ ಬಲ್ಬ್‌ ಬ್ಯಾನ್‌ ಮಾಡುವ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಒತ್ತು ನೀಡಲು ಮುಂದಾಗಿದ್ದು, ಮುಂಬೈ,ದೆಹಲಿ,ಕೊಲ್ಕತ್ತಾಗಳಿಂದ ಬಲ್ಬ್‌ ಮತ್ತು ವಿವಿಧ ಬಿಡಿಭಾಗಗಳನ್ನು ತರಿಸಿಕೊಳ್ಳಲಾಗುತ್ತದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ತಿಳಿಸಿದ್ದಾರೆ.

ಇನ್ನು ಕೇವಲ ದೀಪಾಲಂಕರದ ಬಲ್ಬ್‌ ಮಾತ್ರವನ್ನ ಉಳಿದ ಚೀನೀ ಉತ್ಪನ್ನಗಳನ್ನು ಬ್ಯಾನ್‌ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದು, ಈ ನಿರ್ಧಾರ ಉತ್ತಮವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top