ಈ ಬಾರಿ ಮಿಸ್ಟರ್ ಬಳ್ಳಾರಿ ಯಾರು ಗೊತ್ತಾ..?

ಬಳ್ಳಾರಿಯ ಜಿಲ್ಲೆಯ ಬಳ್ಳಾರಿ ಮೇರಿ ಜಾನ್' ಸಂಸ್ಥೆ ಬಳ್ಳಾರಿಯಲ್ಲಿ ಸದ್ಯ ಸಮಾಜಮುಖಿ ಕೆಲಸಗಳ ಮೂಲಕ ಬಳ್ಳಾರಿಯಲ್ಲಿ ಗುರುತಿಸಿಕೊಂಡಿರೋ ಸಂಸ್ಥೆ, ಬಳ್ಳಾರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಉಂಟಾಗುವ ಸಮಸ್ಯೆ ಮತ್ತು ಕಷ್ಟದಲ್ಲಿರೋ ಜನರಿಗೆ ಸಹಾಯ ಹಸ್ತ ಚಾಚುತ್ತಾ, ಸಾಮಾಜಿಮುಖ ಕಾರ್ಯಕದಲ್ಲಿ ತೊಡಗಿಕೊಂಡಿರೋ ಈ ಸಂಸ್ಥೆ ಇತ್ತೀಚೆಗೆ ಮಿಸ್ಟರ್ ಬಳ್ಳಾರಿ 2020′ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದ್ದು, ಜೊತೆಗೆ ಕೊರೋನಾ ಸಮಯದಲ್ಲಿ ಹೋರಾಡಿದ ಕೊರೋನಾ ವಾರಿಯರ್ಸ್‍ಗೆ `ಬಳ್ಳಾರಿ ಮೇರಿ ಜಾನ್’ ಸಂಸ್ಥೆ ಕಾರ್ಯಕ್ರಮದಲ್ಲಿ ಸನ್ಮಾನಿಸೋ ಮೂಲಕ ಗೌರವ ಸಲ್ಲಿಸಿದ್ರು. ಇನ್ನು ಮಿಸ್ಟರ್ ಬಳ್ಳಾರಿ 2020 ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಬಳ್ಳಾರಿಯ ಕಲ್ಯಾಣ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಜೆಸ್ಕಾಂ ವಿಭಾಗದ ಸಿಪಿಐ ಗಾಯತ್ರಿ ರೊಡ್ಡ, ಬಳ್ಳಾರಿ ಮೇರಿಜಾನ್ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಅಜೀಜ್, ಬೆಸ್ಟ್ ಶಾಲೆಯ ಉಪಾಧ್ಯಕ್ಷರಾದ ಕೊನಂಕಿ ತೀಲಕ್, ಸಿಎಸ್ಆರ್ ಅಸೋಸಿಯೇಷನ್ ನ ಚಾನಾಳ್ ಶೇಖರ್, ತಾರಾನಾಥ ಆಯುರ್ವೇದಿಕ್ ಕಾಲೇಜ್ ನ ವೈದ್ಯರಾದ ಡಾ. ರಾಜೇಶ್ ಸೂಗೂರ್, ಚಿತ್ರಕಲಾವಿದರಾದ ಮೊಹಮ್ಮದ್ ರಫೀಕ್, ಐ ಥಿಂಕ್ ಮಾಲೀಕರಾದ ವಿಕ್ವಾರ್, ನಮ್ಮೂರ ಕಾಫಿ ಮಾಲೀಕರಾದ ಕಾರ್ತಿಕ್, ಗುಲ್ಜಾರ್ ಮಾಲೀಕರಾದ ಸೈಯದ್ ಅಜ್ ಮತ್ ಮತ್ತು ಎಂ ಡಬ್ಲೂ ಫೈಬ್ರೆಂಟ್ ನ ಜಿಯಾ ಅವರು ಮುಖ್ಯ ಅಥಿತಿಗಳಾಗಿ ಭಾಗಿಯಾಗಿದ್ದಾರೆ.

ಬಹುಮಾನ ವಿತರಣೆ.

1- ಮೊಹಮ್ಮದ್ ಉಮರ್,ಮಿಸ್ಟರ್ ಬಳ್ಳಾರಿ ವಿನ್ನರ್.

2- ಮೀನಾ ಕೇತನ್ ರೆಡ್ಡಿ, ಮೊದಲ ರನ್ನರ್ ಅಪ್

3- ವಾಜೀದ್ ಅಲಿ, ಎರಡನೇ ವಿನ್ನರ್ ಅಪ್.

ಕೊರೋನಾ ವಾರಿಯರ್ಸ್ ಗೆ ಸನ್ಮಾನ.

1- ಗಾಯತ್ರಿ ರೊಡ್ಡ, ಜೆಸ್ಕಾಂ ಸಿಪಿಐ, ಬಳ್ಳಾರಿ.

2- ಡಾ‌. ರಾಜೇಶ್ ಸೂಗೂರ್, ತಾರಾನಾಥ ಆರ್ಯುವೇದ ಕಾಲೇಜ್ ಬಳ್ಳಾರಿ.

3- ಕೆ. ನರಸಿಂಹ ಮೂರ್ತಿ, ಸುವರ್ಣ ನ್ಯೂಸ್, ಬಳ್ಳಾರಿ.

4- ಕೆ. ಸುರೇಶ್ ಚೌವ್ಹಾಣ್, ಪ್ರಜಾಟಿವಿ. ಬಳ್ಳಾರಿ.

5- ಮಹಮ್ಮದ್ ಲುಕ್ ಮ್ಯಾನ್, ಪಬ್ಲಿಕ್ ಟಿವಿ ಕ್ಯಾಮೆರಾಮ್ಯಾನ್, ಬಳ್ಳಾರಿ.

6- ಅರುಣ್, ಬಿಪಿ ನ್ಯೂಸ್, ಬಳ್ಳಾರಿ.

7- ವಾಜೀದ್ ಅಲಿ, ತಾರಾನಾಥ್ ಮೆಡಿಕಲ್ ಕಾಲೇಜು ಸಿಬ್ಬಂದಿ.

8- ಸೈಯದ್ ಶಹಾನಾಜ್, ಹೆಲ್ತ್ ಇನ್ಸ್ ಪೇಕ್ಟರ್, ಮಹಾನಗರ ಪಾಲಿಕೆ, ಬಳ್ಳಾರಿ.

9- ಅವಿನಾಶ್,ಬಳ್ಳಾರಿ ರೈಡರ್

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ
Comments