ಈ ಬಾರಿ ಬಿಗ್‌ಬಾಸ್‌ ಕನ್ನಡ ನಡೆಯೋದು ಡೌಟ್‌..!

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 8 ಈ ಬಾರಿ ಪ್ರಸಾರವಾಗುವುದಿಲ್ಲ ಅನ್ನೋ ಸುದ್ದಿ ಹೊರಬಿದ್ದಿದೆ. ಕೊರೋನಾದಿಂದಾಗಿ ಇಷ್ಟು ದಿನ ಸಿನಿಮಾ,ಧಾರಾವಾಹಿ,ರಿಯಾಲಿಟಿ ಶೋಗಳ ಶೂಟಿಂಗ್‌ಗೆ ಬ್ರೇಕ್‌ ಬಿದ್ದಿತ್ತು, ಆದ್ರೀಗ ಶೂಟಿಂಗ್‌ಗೆ ಅನುಮತಿ ದೊರೆತಿದ್ದು, ಕೆಲವು ಸೀರಿಯಲ್‌ ಮತ್ತು ರಿಯಾಲಿಟಿ ಶೋಗಳು ಶೂಟಿಂಗ್‌ ಶುರುಮಾಡಿದ್ರೆ ಇನ್ನು ಕೆಲವು ಧಾರಾವಾಹಿಗಳು ನಿಂತು ಹೋಗಿವೆ. ಹೀಗಿರುವಾಗ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕೂಡ ಈ ವರ್ಷ ಪ್ರಸಾರವಾಗುವುದಿಲ್ಲ ಅನ್ನೋ ಸುದ್ದಿ ಇದೀಗ ಹೊರಬಿದ್ದಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್‌ಬಾಸ್‌ ಶುರುವಾಗಿದ್ದು, ಹಿಂದಿಯಲ್ಲಿ ಬಿಗ್‌ಬಾಸ್‌ ಅಕ್ಟೋಬರ್‌ನಿಂದ ಆರಂಭವಾಗಲಿದೆ. ಎಲ್ಲಾ ಸರಿ ಇದ್ದಿದ್ದರೆ ಕನ್ನಡದಲ್ಲಿ ಈ ತಿಂಗಳು ಬಿಗ್‌ಬಾಸ್‌ ಶುರುವಾಗಬೇಕಾಗಿತ್ತು, ಆದ್ರೆ ಕೋವಿಡ್‌ ಎಫೆಕ್ಟ್‌ನಿಂದಾಗಿ ಈ ವರ್ಷ ಬಿಗ್‌ಬಾಸ್‌ ಪ್ರಸಾರವಾಗುವುದು ಡೌಟ್‌ ಎಂದು ಹೇಳಲಾಗುತ್ತಿದೆ.

ಇನ್ನು 6 ತಿಂಗಳು ಕಾಲ ಬಿಗ್‌ಬಾಸ್‌ ಶುರುವಾಗೋದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಅಂದ್ರೆ ಬಿಗ್‌ಬಾಸ್‌ ಸೀಸನ್‌ 8 ಮಾರ್ಚ್‌ ತಿಂಗಳ ಆರಂಭದಲ್ಲಿ ಪ್ರಸಾರ ಮಾಡಲು ಕಲರ್ಸ್‌ ಕನ್ನಡ ಪ್ಲಾನ್‌ ಮಾಡಿಕೊಳ್ತಾ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕೊರೋನಾ ಎಫೆಕ್ಟ್‌ನಿಂದ ಚಿತ್ರದ ಶೂಟಿಂಗ್‌ಗಳು ನಿಂತು ಹೋಗಿತ್ತು, ಇದೀಗ ಚಿತ್ರದ ಶೂಟಿಂಗ್‌ಗಳು ಸಹ ಪ್ರಾರಂಭವಾಗಿದ್ದು, ಬಿಗ್‌ಬಾಸ್‌ ನಿರೂಪಣೆ ಮಾಡುವ ಕಿಚ್ಚ ಸುದೀಪ್‌ ಕೂಡ ಫ್ಯಾಂಟಮ್‌ ಚಿತ್ರಕ್ಕಾಗಿ ಹೈದರಬಾದಿನಲ್ಲಿ ಬ್ಯೂಸಿಯಾಗಿದ್ದಾರೆ. ಅದರ ಜೊತೆಯಲ್ಲಿ ಕೋಟಿಗೊಬ್ಬ 3 ಚಿತ್ರದ ಕೆಲವು ಭಾಗಗಳು ಶೂಟಿಂಗ್‌ ಇರುವುದರಿಂದ ಈ ಎಲ್ಲಾವನ್ನು ಪರಿಗಣಿಸಿ ಈ ಬಾರಿಯ ಬಿಗ್‌ಬಾಸ್‌ ಅನ್ನು ಮುಂದಿನ ವರ್ಷ ಪ್ರಸಾರ ಮಾಡಲು ಚಾನೆಲ್‌ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top