ಈ ಬಾರಿ ದಸರಾಗೆ ಜಂಬೂ ಸವಾರಿ ಇಲ್ಲ..

ಕೊರೋನಾದಿಂದಾಗಿ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧಾರ ಮಾಡಿದೆ. ಈ ಬಾರಿಯ ದಸರಾವನ್ನು ಚಾಮುಂಡಿ ಬೆಟ್ಟ ಮತ್ತು ಅರಮನೆಗೆ ಮಾತ್ರ ಸೀಮಿತ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಇನ್ನು ಜಂಬೂ ಸವಾರಿಯನ್ನು ಕೇವಲ ಅರಮನೆಯಲ್ಲಿ ಮಾತ್ರ ನಡೆಸಲು ನಿರ್ಧಾರಮಾಡಲಾಗಿದೆ. ಇಂದು ನಡೆದ ಸಭೆಯ ಬಳಿಕ ಮಾತನಾಡಿದ ಸಚಿವ ಸಿಟಿ ರವಿ ಈ ಬಾರಿ ಸರಳ ದಸರಾ ಆಚರಿಸಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅರಮನೆ ಒಳಗೆ ಜಂಬೂ ಸವಾರಿ ನಡೆಯಲಿದ್ದು,ಮಕ್ಕಳ ದಸರಾ,ಮಹಿಳಾ ದಸರಾ,ಯುವ ದಸರಾ,ಆಹಾರ ಮೇಲೆ ,ಪಂಜಿನ ಕವಾಯತು ಯಾವುದು ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top