ಈ ಬಾರಿ ಕಪ್‌ ಆಸೆ ಆಸೆಯಾಗೆ ಉಳಿಯಿತು..

ಐಪಿಎಲ್‌ 2020 ಆರ್‌ಸಿಬಿ ಈ ಬಾರಿ ಕಪ್‌ ಗೆದ್ದೆ ಗೆಲ್ಲುತ್ತದೆ ಅನ್ನೋ ವಿಶ್ವಾದಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಮ್ಮ ನಿರಾಸೆಯಾಗಿದೆ, ಪ್ರತಿ ಬಾರಿ ಐಪಿಎಲ್‌ ಶುರುವಾದಾಗಲು ಆರ್‌ಸಿಬಿ ಮತ್ತು ಆರ್‌ಸಿಬಿ ಅಭಿಮಾನಿಗಳು ಕಪ್‌ ಗೆಲ್ಲುವ ವಿಶ್ವಾಸದಲ್ಲೇ ಐಪಿಎಲ್‌ ಶುರುಮಾಡುತ್ತಿದ್ದು, ಪ್ರತಿ ಬಾರಿ ಐಪಿಎಲ್‌ ಕೊನೆ ಹಂತದಲ್ಲಿ ನಿರಾಸೆಯೊಂದಿಗೆ ಐಪಿಎಲ್‌ ಮುಗಿಸೋ ಕೆಲಸ ಸತತ ೧೩ ವರ್ಷಗಳಿಂದ ನಡೆಯುತ್ತಲೇ ಇದೆ.

ಇನ್ನು ಸತತ ಮೂರು ವರ್ಷಗಳ ನಂತರ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇ ಆಫ್‌ಗೆ ತಲುಪಿದ್ದ ಆರ್‌ಸಿಬಿ ಈ ಬಾರಿ ಕಪ್‌ ಗೆದ್ದೆ ಗೆಲ್ಲುತ್ತೇವೆ ಅನ್ನೋ ಉತ್ಸಾಹದಲ್ಲಿ ಇದ್ರು, ಆದ್ರೆ ನಿನ್ನೆ ನಡೆದ ಪಂದ್ಯದಲ್ಲಿ ಆರ್‌ಸಿಬಿಯ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಪ್ರಾರಂಭದಲ್ಲೇ ಸೋಲಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿತು, ಹಾಗಾದ್ರೆ ನಿನ್ನೆಯ ಸೋಲಿಗೆ ಪ್ರಮುಖ ಕಾರಣ ಏನು ಆನ್ನೋದನ್ನ ನೋಡೋದಾದ್ರೆ, ಟಾಸ್‌ ಸೋತ ಆರ್‌ಸಿಬಿ ಮತ್ತೆ ಬ್ಯಾಟಿಂಗ್‌ಗೆ ಇಳಿದಿದ್ದು ಬಹು ಮುಖ್ಯ ಸೋಲಿಗೆ ಕಾರಣವಾಯ್ತು, ಆರ್‌ಸಿಬಿ ಹೇಳಿ ಕೇಳಿ ರನ್‌ ಚೇಸ್‌ ಮಾಡೋದ್ರಲ್ಲಿ ಎತ್ತಿದ ಕೈ ಆದ್ರೆ ಟಾಸ್‌ ವಿನ್ನಿಂಗ್‌ನಲ್ಲಿ ಲಕ್‌ ವಿರಾಟ್‌ ಪಡೆ ಕಡೆ ಇರದೇ ಇರೋದು ಪ್ರಮುಖ ಕಾರಣವಾದ್ರೆ, ನಿನ್ನೆಯ ಪಂದ್ಯದಲ್ಲಿ ಕೆಲವು ಬದಲಾವಣೆಯೊಂದಿಗೆ ಕಣಕ್ಕೆ ಇಳಿದಿದ್ದ ಆರ್‌ಸಿಬಿ ವಿರಾಟ್‌ ಕೊಹ್ಲಿ ಓಪನರ್‌ ಆಗಿ ಬಂದರು ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲವಾಗಿದ್ದು, ಇನ್ನು ಫಿಂಚ್‌ ರನ್‌ ತಂದುಕೊಟ್ಟರು ಉತ್ತಮ ರನ್‌ರೇಟ್‌ನಲ್ಲಿ ರನ್‌ಗಳಿಸದೆ ಇದ್ದದ್ದು ತಂಡ ಕಡಿಮೆ ಮೊತ್ತಕ್ಕೆ ಕುಸಿಯಲು ಕಾರಣ ಅಂತಾನೇ ಹೇಳಬಹುದು.

ತಂಡದಲ್ಲಿ ಆಪತ್ಭಾಂಧವರಾಗಿ ಎಬಿಡಿ ಹೋರಾಟ ನಡೆಸಿದ್ದು ಬಿಟ್ಟರೇ ಉಳಿದ ಆಟಗಾರರು ಪೆವಿಲಿಯನ್‌ ಪೆರೆಡ್‌ ನಡೆಸಿದ್ದು ಒಂದು ಕಡೆ ಯಾದ್ರೆ, ಫ್ರಿ ಹಿಟ್‌ನಲ್ಲಿ ಮೊಯಿನ್‌ ಅಲಿ ರನೌಟ್‌ ಆಗಿದ್ದು ತಂಡದ ಮೊತ್ತ ಕುಸಿಯಲು ಪ್ರಮುಖ ಕಾರಣ ಅಂತಾನೇ ಹೇಳಬಹುದು. ಒಟ್ಟಿನಲ್ಲಿ ನಿನ್ನೆಯ ಪಂದ್ಯದಲ್ಲಿ ಬ್ಯಾಟ್ಸಮನ್‌ಗಳ ಕಳಪೆ ಪ್ರದರ್ಶನ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾದ್ರೆ, ಪಂದ್ಯವನ್ನು ಕೊನೆಯ ವರೆಗೆ ಹೋಗುವಂತೆ ಮಾಡಿದ್ದು ತಂಡದ ಬೌಲರ್‌ಗಳು ವಾಷಿಂಗ್‌ ಟನ್‌ ಸುಂದರ್‌ ಸ್ವಲ್ಪ ದುಬಾರಿಯಾಗಿದ್ದು ಬಿಟ್ಟರೆ ಉಳಿದ ಬೌಲರ್‌ಗಳ ಕರಾರುವಕ್ಕಾದ ಬೌಲಿಂಗ್‌ ದಾಳಿಗೆ ಹೈದರಬಾದ್‌ ತಂಡ ರನ್‌ ಗಳಿಸಲು ಪರದಾಡಬೇಕಾಯಿತು.

ಇದು ಪಂದ್ಯದಲ್ಲಿ ಉತ್ತಮವಾಗಿ ಹೋರಾಟ ನಡೆಸಲು ಸಹಕಾರಿಯಾದ್ರೆ, ಫಿಲ್ಡಿಂಗ್‌ನಲ್ಲಿ ಯಡವಿದ್ದು ತಂಡದಲ್ಲಿ ಕಟ್ಟಿಹಾಕುವಲ್ಲಿ ಸಹಕಾರಿಯಾಗಲಿಲ್ಲ, ಇನ್ನು ಕೊನೆಯ ಗಳಿಗೆಯಲ್ಲಿ ದೇವದತ್‌ ಪಡಿಕಲ್‌ ಕೇನ್‌ ವಿಲಿಯಮ್‌ ಅವರ ಕ್ಯಾಚ್‌ ಹಿಡಿಯುವಲ್ಲಿ ಯಶಸ್ವಿಯಾಗಿದ್ರೆ ಪಂದ್ಯದ ದಿಕ್ಕೆ ಬದಲಾಗುವ ಸಾಧ್ಯತೆ ಇತ್ತು, ಒಟ್ಟಿನಲ್ಲಿ ನಿನ್ನೆ ಆರ್‌ಸಿಬಿ ಆಟಗಾರರ ಎಬಿಡಿ ಹೊರತು ಪಡಿಸಿ ಉಳಿದವರ ಕಳಪೆ ಬ್ಯಾಟಿಂಗ್‌ ಪ್ರದರ್ಶನದ ಜೊತೆ ಉತ್ತಮ ಬೌಲಿಂಗ್‌ ನಿರ್ವಹಣೆ ಮಾಡಿ ಹೋರಾಟ ನಡೆಸಿ ಪಂದ್ಯ ಸೋತಿದ್ದು, ಅಭಿಮಾನಿಗಳ ಕಪ್‌ ಗೆಲ್ಲುವ ಆಸೆ ಆಸೆಯಾಗೆ ಉಳಿದಿದ್ದು ಬೇಸರದ ಸಂಗತಿ, ಸದ್ಯ ಸೋಶಿಯಲ್‌ ಮೀಡಿಯಾಗಲ್ಲಿ ಆರ್‌ಸಿಬಿ ವಿರುದ್ಧ ಒಂದಿಷ್ಟು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ರೆ, ಇತ್ತ ಮ್ಯಾಚ್‌ ಸೋತ ಬಳಿ ನಾಯಕ ವಿರಾಟ್‌ ಕೊಹ್ಲಿ ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬ ಅಭಿಮಾನಿಗಳಿಗೂ ಧನ್ಯವಾದ ಅಂತ ಹೇಳಿದ್ರು, ಇನ್ನು ಲಾಯಲ್‌ ಫ್ಯಾನ್ಸ್‌ ಮಾತ್ರ 13 ವರ್ಷವೇ ಆರ್‌ಸಿಬಿ ಕಪ್‌ ಗೆಲ್ಲದಿದ್ರು ಸಪೋರ್ಟ್‌ ಮಾಡ್ಕೊಂಡ್‌ ಬಂದಿದ್ದೀವಿ, ಈ ಬಾರಿಯು ಮಾಡ್ತೀವಿ ಮುಂದಿನ ಬಾರಿಯು ಸಪೋರ್ಟ್‌ ಮಾಡ್ತೀವಿ, ಈ ಬಾರಿ ಕಪ್‌ ಇಲ್ಲ ಅಂದ್ರೆ ಏನಂತೆ ಮುಂದಿನ ಬಾರಿ ಕಪ್‌ ನಮ್ದೆ ಅನ್ನೋ ಮೂಲಕ ಆರ್‌ಸಿಬಿಗೆ ಸಪೋರ್ಟ್‌ ಮಾಡ್ತಿದ್ದಾರೆ.

ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲದ ಇರೋ ಬಗ್ಗೆ ನೀವ್‌ ಏನ್‌ ಹೇಳ್ತೀರಾ, ನೀವು ಕೂಡ ಆರ್‌ಸಿಬಿಯ ಲಾಯಲ್‌ ಫ್ಯಾನ್‌ ಆಗಿದ್ರೆ ಕಪ್‌ ವಿಚಾರದಲ್ಲಿ ನಿಮ್ಮ ಕಾಮೆಂಟ್‌ ಏನು ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top