ಈ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗರದ್ದೇ ಕಮಾಲ್‌..

ಐಪಿಎಲ್‌ 2020 ಕೊರೋನಾ ನಡುವೆ ಯಶಸ್ವಿಯಾಗಿ ನಡೆಸಿದ್ದು, ಮುಂಬೈ ಈ ಬಾರಿಯ ಐಪಿಎಲ್‌ ಟ್ರೋಫಿ ಗೆಲ್ಲುವ ಮೂಲಕ ನಾನೇ ಐಪಿಎಲ್‌ ಬಾಸ್‌ ಅನ್ನೋದನ್ನ ಹೇಳಿದೆ. ಇನ್ನು ಚೊಚ್ಚಲ ಕಪ್‌ ಗೆಲ್ಲುವ ಕನಸಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್‌ಗೆ ನಿರಾಸೆಯಾಗಿದ್ದು, ಇದೀಗ ಐಪಿಎಲ್‌ನಲ್ಲಿ ಯಾವ ಯಾವ ದಾಖಲೆಗಳು ಹೊರ ಬಂದಿವೆ ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ಕಮಾಲ್‌ ಮಾಡಿದ್ದು ಅಂದ್ರೆ ಅದು ಕನ್ನಡಿಗರು, ಹೌದು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಗಮನವನ್ನು ತಮ್ಮತ್ತ ಸೆಳೆದುಕೊಂಡು ಕನ್ನಡಿಗರು ಯಾವೆಲ್ಲಾ ಪ್ರಶಸ್ತಿಗೆ ಪಡೆದುಕೊಂಡು,ಯಾವೆಲ್ಲಾ ದಾಖಲೆಗಳನ್ನು ಮಾಡಿದ್ರು ಅನ್ನೋದನ್ನ ನೋಡೋಣ

ಚೊಚ್ಚ ಐಪಿಎಲ್‌ ಟೂರ್ನಿಯಲ್ಲಿ 5 ಅರ್ಧ ಶತಕ ಸಿಡಿಸಿ ದಾಖಲೆ ಬರೆದ ಆರ್‌ಸಿಬಿ ತಂಡದ ಆಟಗಾರ ದೇವದತ್‌ ಪಡಿಕಲ್‌ ಈ ಬಾರಿ ಪಾದಾರ್ಪಣೆ ಪಂದ್ಯದಿಂದಲೇ ದಾಖಲೆಗಳನ್ನು ಬರೆದಿದ್ದಾರೆ.ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ಅಲ್ಲದೇ ಕ್ರಿಕೆಟ್‌ ಪಂಡಿತರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಇದೀಗ ಈ ಬಾರಿಯ ಐಪಿಎಲ್‌ನಲ್ಲಿ ಎಮರ್ಜಿಂಗ್‌ ಪ್ರಶಸ್ತಿಯನ್ನು ಪಡೆದು ದಾಖಲೆಯನ್ನು ಬರೆದಿದ್ದಾರೆ.

ಈ ಬಾರಿಯ ಐಪಿಎಲ್‌ ಶುರುವಿನಿಂದ ಆರೇಂಜ್‌ ಕ್ಯಾಪ್‌ ತನ್ನಲ್ಲೇ ಇರಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್‌ ತಂಡದ ನಾಯಕನಾಗಿ, ತಂಡದ ಆರಂಭಿಕ ಆಟಗಾರನಾಗಿ 670ರನ್‌ ಸಿಡಿಸೋ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಆರೇಂಜ್‌ ಕ್ಯಾಪ್‌ ತನ್ನಲ್ಲೆ ಇರಿಸಿಕೊಂಡಿದ್ದಾರೆ. ಇನ್ನು ಇದರ ಜೊತೆಯಲ್ಲಿ ಆರ್‌ಸಿಬಿ 132 ರನ್‌ ಸಿಡಿಸೋ ಮೂಲಕ ಐಪಿಎಲ್‌ ಇತಿಹಾಸದಲ್ಲಿ ತಂಡದ ನಾಯಕನ ವೈಯುಕ್ತಿಕ ಗರಿಷ್ಠ ರನ್‌ ದಾಖಲಿಸೋ ಮೂಲಕ ಹೊಸ ದಾಖಲೆ ಬರೆದ್ರು,

ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಕಮಾಲ್‌ ಮಾಡಿರೋ ಕನ್ನಡಿಗರು ಬ್ಯಾಟಿಂಗ್‌ನಲ್ಲಿ ಸ್ವಲ್ಪ ಹೆಚ್ಚು ಮುಂಚು ಹರಿಸಿದ್ದಾರೆ ಅತಿ ಹೆಚ್ಚು 400ಕ್ಕೂ ಹೆಚ್ಚು ರನ್‌ ಸಿಡಿಸಿದ ಆಟಗಾರರಲ್ಲಿ ಕನ್ನಡಿಗರು 4 ಜನ ಸ್ಥಾನ ಪಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ರಾಹುಲ್‌ 670, ಪಡಿಕಲ್‌ 473, ಮಾಯಂಕ್‌ 424 ಮತ್ತು ಮನೀಶ್‌ ಪಾಂಡೆ 425ರನ್‌ ಗಳನ್ನು ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಜೊತೆಯಾಟದ ದಾಖಲೆ ಕೂಡ ಕನ್ನಡಿಗರ ಹೆಸರಿನಲ್ಲಿ ಇದ್ದು, ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮೊದಲ ವಿಕೆಟ್‌ 183ರನ್‌ಗಳ ಜೊತೆಯಾಟ ಆಡೋ ಮೂಲಕ ರಾಹುಲ್‌ ಮತ್ತು ಮಾಯಾಂಕ್‌ ಈ ಹೊಸ ದಾಖಲೆಯನ್ನು ಬರೆದಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ ಕನ್ನಡಿಗರ ಕಮಾಲ್‌ ಜೋರಾಗಿದ್ದು, ನಿಮ್ಮ ನೆಚ್ಚಿನ ಕನ್ನಡಿಗ ಆಟಗಾರ ಈ ಬಾರಿಯ ಐಪಿಎಲ್‌ನಲ್ಲಿ ಯಾರು..ಯಾರ ಆಟ ನಿಮಗೆ ಹೆಚ್ಚು ಇಷ್ಟವಾಯ್ತು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top