ಈ ಪುಣ್ಯಾತ್ಮನಿಗೆ ಸುಸು ಮಾಡಲು ಬೇರೆ ಜಾಗವೇ ಸಿಗಲಿಲ್ಲವೇ.!

ಪ್ರಪಂಚದಲ್ಲಿ ಎಂತೆಂತಹ ಜನರು ಇರ್ತಾರೆ ಅನ್ನೋದಕ್ಕೆ ಈ ಒಂದು ಸ್ಟೋರಿಯೇ ಸಾಕ್ಷಿ, ಸಮಾಜದಲ್ಲಿ ಯಾವರೀತಿ ನಡೆದುಕೊಳ್ಳಬೇಕು, ಹೇಗೆ ಇರಬೇಕು ಅನ್ನೋ ಪರಿಜ್ಞಾನವು ಕೆಲವರಿಗೆ ಇರುವುದಿಲ್ಲ ಅಂತಹದ್ದೇ ಒಂದು ಘಟನೆ ಏರ್‌ಪೋರ್ಟ್‌ನಲ್ಲಿ ನಡೆದಿದೆ.. ಏರ್‌ಪೋರ್ಟ್‌ ಟರ್ಮಿನಲ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬ ತಾನು ಕುಳಿತ ಜಾಗದಲ್ಲಿಯೇ ಸುಸು ಮಾಡಿರೋ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಈ ವಿಡಿಯೋವನ್ನು ಅಲ್ಲಿಯೇ ಇದ್ದ ಶೇಮಿಂಗ್‌ ಎಂಬ ವ್ಯಕ್ತಿ ವಿಡಿಯೋ ಮಾಡಿ ಅದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದರು. ಶೇರ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀವ್ಸ್ ಪಡೆಯುವುದರ ಜೊತೆಯಲ್ಲಿ ಸಾವಿರಾರು ಲೈಕ್ಸ್‌ಗಳು ಕೂಡ ಈ ವಿಡಿಯೋಗೆ ಬಂದಿದ್ದು, ಜೊತೆಗೆ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ತರಾಟೆಯನ್ನು ಕಾಮೆಂಟ್‌ ಮೂಲಕ ತೆಗೆದುಕೊಂಡಿದ್ದಾರೆ.

ಏರ್‌ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾದು ಕುಳಿತ್ತಿದ್ದ ವ್ಯಕ್ತಿಯೊಬ್ಬ ತಾನು ಕುಳಿತ ಜಾಗದಲ್ಲಿಯೇ ಏರ್‌ಪೋರ್ಟ್‌ನಲ್ಲಿ ಇದ್ದ ಜನರ ಎದುರೇ ತನ್ನ ಪ್ಯಾಂಟ್‌ ಜಿಪ್‌ ತೆಗೆದು ಅಲ್ಲಿಯೇ ಕುಳಿತುಕೊಂಡು ಸುಸು ಮಾಡಿದ್ದಾನೆ. ಇದನ್ನು ನೋಡಿದ ಕೆಲವ್ರು ಅಸಹ್ಯ ಪಟ್ಟುಕೊಂಡು ದೂರ ಕೂಡ ಸರಿದಿದ್ದಾರೆ. ಇನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಈ ವಿಡಿಯೋ ನೋಡಿದವರು ಕಾಮೆಂಟ್‌ ಮೂಲಕ ಆತ ಸುಸು ಮಾಡುವಾಗ ಯಾಕೆ ಯಾರು ಪ್ರಶ್ನೇ ಮಾಡುತ್ತಿಲ್ಲ ಎಂದು ಕಾಮೆಂಟ್‌ ಮಾಡಿದ್ರೆ, ಇನ್ನು ಕೆಲವರು ನೀವು ನಿಮ್ಮ ಕೆಲಸ ಮಾಡಿಕೊಳ್ಳಿ ಅವನು ಸುಸು ಮಾಡಿ ಆರಾಮಾಗಿದ್ದಾನೆ. ನೀವ್ಯಾಕೆ ಅವನನ್ನು ನೋಡಲು ಹೋಗಿದ್ದೀರಿ ಎಂದು ಕಿಡಿಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top