ಈ ಪಬ್‍ಗೆ ಹೋಗ್ಬೇಕಂದ್ರೆ ನೀವೂ ಬೆತ್ತಲಾಗಬೇಕು..!

ಪ್ರಪಂಚದಲ್ಲಿ ನಾನಾ ಬಗೆಯ ವಸ್ತುಗಳನ್ನು ನಾನಾ ರೀತಿಯಲ್ಲಿ ಮಾರಾಟ ಮಾಡಲು ಗ್ರಾಹಕರನ್ನು ಆಕರ್ಷಿಸುತ್ತಾರೆ. ಅದರಲ್ಲೂ ಕೆಲವು ಹೋಟೆಲ್ ಮತ್ತು ಬಾರ್ ಗಳು ತಮ್ಮ ಸ್ಥಳಕ್ಕೆ ಗ್ರಾಹಕರನ್ನು ಸೆಳೆಯೋ ನಿಟ್ಟಿನಲ್ಲಿ ಅನೇಕ ರೀತಿಯಲ್ಲಿ ಕಸರತ್ತುಗಳನ್ನು ನಡೆಸುತ್ತವೆ. ಗ್ರಾಹಕರನ್ ತಮ್ಮತ್ತ ಸೆಳೆಯೋ ನಿಟ್ಟಿನಲ್ಲಿ ಅನೇಕ ಆಫರ್‍ಗಳನ್ನು ಸಹ ನೀಡುತ್ತವೆ, ಆದ್ರೆ ಇಲ್ಲೊಂದು ಪಬ್ ತನ್ನ ಗ್ರಾಹಕರನ್ನು ತನ್ನತ್ತ ಸೆಳೆಯೋ ನಿಟ್ಟಿನಲ್ಲಿ ಒಂದು ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಹೌದು ಈ ಪಬ್ ಒಳಗೆ ಹೋಗಬೇಕು ಅಂದ್ರೆ ನೀವೂ ಸಂಪೂರ್ಣ ಬೆತ್ತಲಾಗ ಬೇಕು. ನೀವೇನಾದ್ರು ಈ ಪಬ್ ಒಳಗೆ ಹೋಗಿ ಒಂದು ಪೆಗ್ ಹಾಕಬೇಕು ಅಂದ್ರೆ ನೀವೂ ಪಬ್ ಹೊರಗಡೆ ನಿಮ್ಮ ಬಟ್ಟೆಗಳನ್ನೇಲ್ಲ ಕಳಚಿ ಆ ನಂತರವಷ್ಟೇ ಒಳಗೆ ಹೋಗಲು ಅವಕಾಶ ಲಭ್ಯವಾಗಲಿದೆ.ಲಂಡನ್‍ನಲ್ಲಿ ಇರೋ ಕೋಚ್ ಆ್ಯಂಡ್ ಹಾರ್ಸಸ್' ಅನ್ನೋ ಪಬ್‍ನಲ್ಲಿ ನೀವು ಹೋಗಿ ಎಣ್ಣೆ ಹೊಡಿಬೇಕು, ಸಿಗರೇಟ್ ಸೇದಬೇಕು ಅಥವಾ ಊಟ ಮಾಡಬೇಕು ಅಂದ್ರೆ ಇಲ್ಲಿ ನೀವೂ ಬೆತ್ತಲಾಗಿ ಹೋಗ ಬೇಕು. ಇನ್ನು ಈಕೋಚ್ ಆ್ಯಂಡ್ ಹಾರ್ಸಸ್’ ಪಬ್ ಶುರುವಾಗಿದ್ದು 1847ರಲ್ಲಿ ಇನ್ನು ಈ ಪಬ್‍ಗೆ ಬರುವ ಸಲುವಾಗಿ ಅಲ್ಲಿನ ಮಾಲೀಕ ವಿಭಿನ್ನ ರೀತಿಯಲ್ಲಿ ಸೇವೆಗಳನ್ನು ನೀಡುತ್ತಾ ಎಲ್ಲರನ್ನು ತನ್ನತ್ತ ಸೆಳೆದುಕೊಳ್ತಾ ಇದ್ದ. ಹೀಗಿರುವಾಗ ಆಡಳಿತ ಮಂಡಳಿಗೆ ಹೊಸದೊಂದು ಐಡಿಯಾ ಬಂದಿದ್ದು, ಆ ಪ್ರಕಾರ ಪಬ್ ಒಳಗೆ ಬರಬೇಕಾದರೆ ತಾವು ತೊಟ್ಟ ಬಟ್ಟೆಗಳನೆಲ್ಲ ಕಳಚಿ ಹೊರಗೆ ಇಟ್ಟು ಬರಬೇಕು ಆ ನಂತರವೇ ಪಬ್ ಒಳಗೆ ಪ್ರವೇಶ ಅನ್ನೊ ಹೊಸ ನಿಯಮವನ್ನು ಸಹ ಇದು ಹಾಕಿಕೊಂಡಿದೆ. ಆಡಳಿತ ಮಂಡಳಿ ಹೇಳೋ ಪ್ರಕಾರ ಪಬ್‍ಗೆ ಬಂದ ಗ್ರಾಹಕರು ತಾವು ಬೆತ್ತಲೆಯಾಗಿ ಡ್ರಿಂಕ್ಸ್ ಮಾಡುತ್ತ ಡ್ಯಾನ್ಸ್ ಮಾಡಬೇಕು ಅನ್ನೊ ಆಸೆಯನ್ನು ಇಟ್ಟುಕೊಂಡಿರುತ್ತಾರೆ, ಹಾಗಾಗಿ ಗ್ರಾಹಕರ ಮನಸ್ತಿತಿ ಅರಿತು ಈ ರೀತಿಯ ಹೊಸ ಯೋಚನೆಯನ್ನು ಹಾಕಿಕೊಂಡಿದ್ದೇವೆ ಎಂದು ಆಡಳಿತ ಮಂಡಳಿ ಹೇಳಿಕೊಂಡಿದ್ದು, ಈ ರೀತಿ ಬೆತ್ತಲಾಗಿ ಪಬ್‍ನಲ್ಲಿ ಇರಲು ಅಲ್ಲಿನ ಸರ್ಕಾರ `ಕೋಚ್ ಅ್ಯಂಡ್ ಹಾರ್ಸಸ್’ ಪಬ್‍ಗೆ ಪರವಾನಿಗೆಯನ್ನು ಸಹ ನೀಡಿದೆ. ಇನ್ನು ಈ ಪಬ್ ಈ ರೀತಿಯ ಹೊಸ ರೂಲ್ಸ್ ಹಾಕಿಕೊಂಡ ನಂತರ ಪಬ್‍ಗೆ ಬೇಟಿ ನೀಡುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆಯಂತೆ. ಸದ್ಯ ಕೊರೊನಾಎಫೆಕ್ಟ್ ನಿಂದಾಗಿ ಈ ಪಬ್ ಲಾಕ್‍ಡೌನ್ ಆಗಿದ್ದು, ಸದ್ಯದರಲ್ಲೇ ಪಬ್ ಮತ್ತೆ ಆರಂಭವಾಗಲಿದೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top