ಈ ಊರಿನಲ್ಲಿ ವರನನ್ನು ಮೂಸಿದ ಮೇಲೆ ತಾಳಿ ಕಟ್ಟೋಕೆ ಪರ್ಮಿಶನ್..!

ಒಂದು ಮದುವೆ ನಡಿಯುತ್ತೆ ಅಂದ್ರೆ ಅಲ್ಲಿ ವರನ ಕಡೆಯವರು ವಧುವಿನ ಕಡೆಯವರನ್ನು ವಧುವಿನ ಕಡೆಯವರು ವರನ ಕಡೆಯವರನ್ನು ವಿಚಾರಿಸೋದು ಅವರ ಮನೆತನವನ್ನು ವಿಚಾರಿಸಿ ಆ ಮನೆಗೆ ಹೆಣ್ಣು ಕೊಡ ಬಹುದು, ಇಲ್ಲಾ ಆ ಮನೆತನದಿಂದ ಹೆಣ್ಣು ತರಬಹುದು ಅನ್ನೋ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ, ಇನ್ನು ಎರಡು ಕಡೆ ಒಪ್ಪಿಗೆಯಾದ ಮೇಲೆ ಮದುವೆ ಕಾರ್ಯಕ್ರಮ ಗುರು ಹಿರಿಯರ ಸಮ್ಮುಖದಲ್ಲಿ ನೆರವೇರುತ್ತದೆ.

ಆದ್ರೆ ಈ ಒಂದು ಊರಿನಲ್ಲಿ ಈ ಎಲ್ಲಾ ನಿಯಮಗಳು ಪದ್ಧತಿಗಳು ಮುಗಿದ್ರು ಮದುವೆ ದಿನ ತಾಳಿ ಕಟ್ಟೋ ಟೈಮಿನಲ್ಲಿ ವರ ಈ ಪರೀಕ್ಷೆಯಲ್ಲಿ ಪಾಸ್ ಆಗದಿದ್ರೆ ಮದುವೆಯೇ ನಿಂತು ಹೋಗುತ್ತದೆ, ಜೊತೆಗೆ ವರನ ಕಡೆಯವರು ವಧುವಿನ ಕಡೆಯವರಿಗೆ ಒಂದು ಲಕ್ಷ ದಂಡ ಕಟ್ಟಬೇಕಾಗುತ್ತದೆ. ಹೌದು ಈ ರೀತಿಯ ವಿಚಿತ್ರ ಘಟನೆ ನಡಿಯೋದು ಬೇರೆ ಯಾವುದೋ ದೇಶದಲ್ಲೂ ಅಲ್ಲ, ನಮ್ಮ ದೇಶದ ಗುಜರಾತ್ ನಲ್ಲಿ ಹೌದು ಗುಜರಾತಿನ ಗಾಂಧಿನಗರದ ಪಿಯಾಬ್ ಗ್ರಾಮದಲ್ಲಿ ಮದುವೆಯ ದಿನ ವರನನ್ನು ಮೂಸುವ ಪದ್ಧತಿ ಇದ್ದು, ಈ ಪರೀಕ್ಷೆಯಲ್ಲಿ ವರ ಪಾಸಾದ್ರೆ ಮಾತ್ರ ತಾಳಿ ಕಟ್ಟಲು ಅನುಮತಿ ಸಿಗುತ್ತದೆ, ಇದಕ್ಕಾಗಿ ಮದುವೆಯ ದಿ‌ನ 25ಜನರ ತಂಡವನ್ನು ಸಹ ರಚನೆ ಮಾಡಲಾಗಿರುತ್ತದೆ.ಮದುವೆ ದಿನ ವರ ಮತ್ತು ಆತನ ಸಂಬಂಧಿಕರು ,ಸ್ನೇಹಿತರು ಮದ್ಯಪಾನ ಮಾಡಿದ್ದಾರ ಅಂತ ತಿಳಿದುಕೊಳ್ಳಲು ಈ ಒಂದು ಮೂಸುವ ಪರೀಕ್ಷೆಯನ್ನು ಈ ಊರಿನಲ್ಲಿ 4ವರ್ಷದಿಂದ ನಡೆಸುಕೊಂಡು ಬರಲಾಗುತ್ತಿದೆಯಂತೆ, ಮದ್ಯಪಾನದ ವ್ಯಸನಕ್ಕೆ ಬಿದ್ದು 20ವರ್ಷದ ಯುವಕರು ಸುಮಾರು 15ಜನ ಸಾವನಪ್ಪಿದ್ದರಿಂದ ಈ ಊರಿನ ಹಿರಯರಾದ ರಮೇಶ್ ಜಿ ಠಾಕೂರ್ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ವರ ಅಥವಾ ವರನ ಕಡೆಯವರು ಮದ್ಯಪಾನ ಮಾಡಿರೋದು ಗೊತ್ತಾದರೆ ಮದುವೆಯನ್ನು ಕ್ಯಾನ್ಸಲ್ ಮಾಡಿ ವರನ ಕಡೆಯವರಿಗೆ 1ಲಕ್ಷ ದಂಡ ವಿಧಿಸಲಾಗುತ್ತದೆ, ಈ ರೀತಿ ನಿಯಮ ಮಾಡುವುದರಿಂದ ನಮ್ಮ ಊರಿನ ಮಹಿಳೆ ಜೀವನ ಸುಖಕರವಾಗಿರುತ್ತದೆ ಅನ್ನೋದು ಅಲ್ಲಿನ ಗ್ರಾಮಸ್ಥರ ನಂಬಿಕೆ. ನೀವೇನಾದ್ರೂ ಈ ಗ್ರಾಮದಿಂದ ವಧುವನ್ನು ಮದುವೆಯಾಗುತ್ತಿರಾ ಅಂದರೆ ಒಂದ್ ಸಾರಿ ಯೋಚಿಸಿ ಮದ್ಯಪಾನ ಮಾಡೋದನ್ನ ಬಿಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top