ಈಶ್ವರಪ್ಪ ಮನೆಯಲ್ಲಿ ಅಗ್ನಿ‌ಅವಘಡ ಅಪಾಯದಿಂದ‌ ಪಾರಾದ ಸಚಿವರು.!

ಸಚಿವ ಕೆಎಸ್ ಈಶ್ವರಪ್ಪ ಅವರ ಸರ್ಕಾರಿ ನಿವಾದಲ್ಲಿ ಬೆಂಕಿ ಅವಘಢ ಸಂಭವಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ..ಸಚಿವ ಈಶ್ವರಪ್ಪ ಅವರ ಸರ್ಕಾರಿ ನಿವಾಸದ ಬೆಡ್ ರೂಪ್ ನಲ್ಲಿ ಬೆಂಕಿ ಅವಘಢವಾಗಿದ್ದು ಬೆಡ್ ರೂಂನ ಎಸಿ ಸ್ವಿಚ್ ಹಾಕಿದಾಗ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ..ಬೆಂಕಿ ಹೆಚ್ಚಾದ ಕಾರಣ ಟಿವಿ,ವಾರ್ಡ್ ರೋಬ್ ಮತ್ತು ಕೆಲವು ದಾಖಲೆ ಪತ್ರಗಳು ಸುಟ್ಟು ಹೋಗಿವೆ.ಇನ್ನು ಅವಘಢದಿಂದ ಈಶ್ವರಪ್ಪ ಮತ್ತು ಪತ್ನಿ ಜಯಲಕ್ಷ್ಮಿ ಪಾರಾಗಿದ್ದು,ಘಟನೆ ಸಂಭವಿಸುತ್ತಿದ್ದಂತೆ ಅಳಿಯ ಅಗ್ನಿಶಾಮಕ ದಳಕ್ಕೆ ಕರೆಮಾಡಿ ಮಾಹಿತಿ ನೀಡಿದ್ದಾರೆ.ಬೆಂಕಿ ಕಾಣಿಸಿಕೊಂಡ ಹಿನ್ನಲೆ ಈಶ್ವರಪ್ಪ ಕುಟುಂಬ ಪಕ್ಕದಲ್ಲೇ ಇದ್ದ ತಮ್ಮ ಸ್ವಂತ ಮನೆಯಲ್ಲಿ ರಾತ್ರಿ‌ ತಂಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top