ಈತ ಟ್ವೀಟರ್‍ನಲ್ಲಿ ಐಪಿಎಲ್ ಬಗ್ಗೆ ಹೇಳಿದ ಭವಿಷ್ಯ ನಿಜವಾಗಿದ್ದು, ಕಪ್‍ಯಾರು ಗೆಲ್ತಾರೆ ಗೊತ್ತಾ..?

ಐಪಿಎಲ್ 2020 ಪ್ಲೇ ಆಫ್ ಹಂತಕ್ಕೆ ತಲುಪಿದ್ದು ಈ ಬಾರಿ ಐಪಿಎಲ್ ಕಪ್ ಯಾರು ಗೆಲ್ಲುತ್ತಾರೆ ಅನ್ನೋ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಹೆಚ್ಚಾಗಿದೆ. ಹೀಗಿರುವಾಗಲೇ ಇದೀಗ ಐಪಿಎಲ್ ಬಗ್ಗೆ ವ್ಯಕ್ತಿಯೊಬ್ಬ ಭವಿಷ್ಯ ನುಡಿದಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹೌದು ಐಪಿಎಲ್ ಶುರುವಾಗುವ ಮುನ್ನವೇ ವ್ಯಕ್ತಿಯೊಬ್ಬ ಭವಿಷ್ಯ ನುಡಿದಿದ್ದು, ಆತನ ಭವಿಷ್ಯದಂತೆ ಎಲ್ಲವೂ ನಡೀತಾ ಇರೋ ಅಚ್ಚರಿಗೆ ಕಾರಣವಾಗಿದೆ.

ಮಿತುಲ್ ಎಂಬ ವ್ಯಕ್ತಿ ತನ್ನ ಟ್ವೀಟರ್‍ನಲ್ಲಿ ಜುಲೈ 27ರಂದು ಐಪಿಎಲ್ ಬಗೆಗಿನ ಭವಿಷ್ಯ ನುಡಿದಿದ್ದು, ಆತನು ಹೇಳಿದಂತೆ ಐಪಿಎಲ್ ರಿಸಲ್ಟ್ ಕೂಡ ಬಂದಿದೆ. ಹೌದು ಆತ ಹೇಳಿದಂತೆ ಐಪಿಎಲ್‍ನಲ್ಲಿ ಈಬಾರಿ ಆರ್‍ಆರ್ ಕೊನೆಯ ಸ್ಥಾನವನ್ನು ಗಳಿಸಲಿದ್ದು, ಚೆನ್ನೈ ಪ್ಲೇ ಆಫ್ ಹಂತಕ್ಕೆ ಹೋಗೋದಿಲ್ಲ ಅಂತ ತನ್ನ ಟ್ವೀಟರ್‍ನಲ್ಲಿ ತಿಳಿಸಿದ್ದ, ಇನ್ನು ಪಂಜಾಬ್ ತಂಡಕ್ಕೆ ಪ್ಲೇ ಆಫ್ ಅವಕಾಶ ಸಿಗೋದಿಲ್ಲ ಅಂತಾನೂ ಹೇಳಿದ್ದ ಅದರಂತೆ ಪಂಜಾಬ್ 4ನೇ ಸ್ಥಾನದಲ್ಲಿದ್ದ ವೇಳೆ ಸತತ ಎರಡು ಪಂದ್ಯ ಸೋತು ಪ್ಲೇ ಆಫ್‍ನಿಂತ ಹೊರ ಹೋಗಿತ್ತು, ಇನ್ನು ವಿರಾಟ್ ಈ ಬಾರಿ ಸ್ಟ್ರೈಕ್ ರೇಟ್ ಕಮ್ಮಿ ಇರಲಿದೆ ಅಂತನೂ ಹೇಳಿದ್ದು ಅದರಂತೆ ವಿರಾಟ್ ಬ್ಯಾಟ್‍ನಿಂದ ಉತ್ತಮ ರನ್ ಕೂಡ ಬಂದಿಲ್ಲ ಜೊತೆಗೆ ಆರ್‍ಸಿಬಿ ಪ್ಲೇ ಆಫ್‍ಗೆ ಎಂಟ್ರಿಕೊಡಲಿದ್ದು, ಇದರ ಜೊತೆಯಲ್ಲಿ ಮುಂಬೈ ಮತ್ತು ಡೆಲ್ಲಿ ಕೂಡ ಪ್ಲೇ ಆಫ್ ಎಂಟ್ರಿ ಕೊಡಲಿದೆ ಅಂತಾನೂ ತನ್ನ ಟ್ವೀಟರ್‍ನಲ್ಲಿ ಭವಿಷ್ಯ ನುಡಿದಿದ್ದ ಅದರಂತೆ ಐಪಿಎಲ್‍ನಲ್ಲಿ ಆತ ಹೇಳಿದ ಎಲ್ಲಾ ಭವಿಷ್ಯವೂ ನಿಜವಾಗಿದ್ದು, ಇದೀಗ ಆತ ಹೇಳಿದಂತೆ ಐಪಿಎಲ್ ಕಪ್ ಆ ತಂಡವೇ ಗೆಲ್ಲಲಿದೆ ಅನ್ನೋ ನಂಬಿಕೆಯಲ್ಲಿ ಅನೇಕರು ಇದ್ದಾರೆ.

ಹೌದು ಮಿತುಲ್ ತನ್ನ ಟ್ವೀಟರ್‍ನಲ್ಲಿ ಹೇಳಿದ ಭವಿಷ್ಯದ ಪ್ರಕಾರ ಚೆನ್ನೈ ನಿಂದ ಹಿಡಿದು ಎಲ್ಲಾ ರಿಸೆಲ್ಟ್‍ಗಳು ನಿಜವಾಗಿದ್ದು ಕಪ್ ಗೆಲ್ಲುವ ವಿಚಾರದಲ್ಲೂ ಇದು ನಿಜವಾಗಲಿದ್ಯಾ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಹೌದು ಮಿತುಲ್ ಹೇಳಿದಂತೆ ಈ ಬಾರಿ ಐಪಿಎಲ್ ಕಪ್ ಮುಂಬೈ 5 ಬಾರಿ ಅಲ್ಲ, ಡೆಲ್ಲಿ ಆರ್‍ಸಿಬಿ ಚೊಚ್ಚಲ ಕಪ್ ಗೆಲ್ಲೋಲ್ಲ ಬದಲಿಗೆ ಸನ್‍ರೈಸರ್ಸ್ ಹೈದರಬಾದ್ ತಂಡ ಕಪ್ ಗೆಲ್ಲಲಿದೆ ಅಂತ ತನ್ನ ಟ್ವೀಟರ್‍ನಲ್ಲಿ ಭವಿಷ್ಯ ನುಡಿದಿದ್ದಾನೆ. ಅದರಂತೆ ಇದೀಗ ಮಿತುಲ್ ಹೇಳಿದ ಟ್ವೀಟರ್ ಭವಿಷ್ಯ ನಿಜವಾಗಿದ್ದು, ಕಪ್ ಗೆಲ್ಲುವ ವಿಚಾರದಲ್ಲೂ ನಿಜವಾಗಲಿದೆ ಅನ್ನೋ ವಾದ ವಿವಾದಗಳು ಇದೀಗ ಟ್ವೀಟರ್‍ನಲ್ಲಿ ಶುರುವಾಗಿದೆ.

ಹಾಗಾದ್ರೆ ನಿಮ್ಮ ಪ್ರಕಾರ ಮಿತುಲ್ ಹೇಳಿದ ಟ್ವೀಟರ್ ಭವಿಷ್ಯ ಇದುವರೆಗೂ ನಿಜವಾಗಿದ್ದು ಕಪ್ ಗೆಲ್ಲುವ ವಿಚಾರದಲ್ಲೂ ಟ್ವೀಟರ್ ಭವಿಷ್ಯ ನಿಜವಾಗಲಿದ್ಯಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top