ಈತನ ಬೌಲಿಂಗ್‍ಗೆ ಆಡಲಿಲ್ಲ ಅನ್ನೋದೆ ಖುಷಿ ಎಂದ ಸೆಹ್ವಾಗ್..

ವಿರೇಂದ್ರ ಸೆಹ್ವಾಗ್ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಒಂದೇ ಅವರ ಬ್ಯಾಟಿಂಗ್ , ಎದುರಾಳಿ ಬೌಲರ್ ಯಾರೇ ಇರಲಿ ಅದು ಎಂತಹದ್ದೇ ಬಾಲ್ ಇರಲಿ ಅದನ್ನು ಬೌಂಡರಿ,ಸಿಕ್ಸರ್‍ಗೆ ಕಳುಹಿಸದೇ ಅವರಿಗೆ ಮನಸ್ಸು ಇರೋದಿಲ್ಲ, ಇನ್ನು ವಿರೇಂದ್ರ ಸೆಹ್ವಾಗ್ ಅಂದ್ರೆ ಟೆಸ್ಟ್ ಅಂದ್ರೆ ಒನ್ ಡೇ, ಒನ್ ಡೇ ಅಂದ್ರೆ ಟಿ 20, ಟಿ20 ಅಂದ್ರೆ ಅದು ಸೂಪರ್ ಓವರ್ ಅನ್ನೋ ಲೆಕ್ಕಾಚಾರ ಈ ಡೆಲ್ಲಿ ಡ್ಯಾಶರ್ ವಿರೇಂದ್ರ ಸೆಹ್ವಾಗ್ ಲೆಕ್ಕಾಚಾರ. ಸೆಹ್ವಾಗ್ ಬ್ಯಾಟ್ ಮಾಡ್ತಿದ್ದಾರೆ ಅಂದ್ರೆ ಎದುರಾಳಿ ಬೌಲರ್‍ಗೆ ಒಂದು ಸಾರಿ ನಡುಕ ಉಂಟಾಗೊಂದತು ಗ್ಯಾರಂಟಿ. ಆದ್ರೆ ಇದೀಗ ಘಟಾನುಘಟಿ ಬೌಲರ್‍ಗಳಿಗೆ ಹೆದರದೆ ಹಿಗ್ಗಾ ಮುಗ್ಗಾ ಚಚ್ಚೋ ವೀರು ಇದೀಗ ಈ ಬೌಲರ್ ಎದುರು ಆಡದಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಹೌದು ಐಪಿಎಲ್‍ನಲ್ಲಿ ರಾಜಸ್ತಾನ್ ರಾಯಲ್ಸ್ ಪರವಾಗಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚಾರ್ ಕರಾರುವಾಕ್ಕಾಗಿ ದಾಳಿ ನಡೆಸೋ ಮೂಲಕ ಐಪಿಎಲ್‍ನಲ್ಲಿ ಬೆಸ್ಟ್ ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. ನಿನ್ನೆ ನಡೆದ ಹೈದರಬಾದ್ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಡೆವಿಡ್ ವಾರ್ನರ್ ವಿಕೆಟ್ ಪಡೆದ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರೋ ವೀರೂ ಡೇವಿಡ್ ವಾರ್ನರ್ ಜೋಫ್ರಾ ಆರ್ಚರ್ ಬೌಲಿಂಗ್ ಅನ್ನು ಎದುರಿಸುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ವಾರ್ನರ್ ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ಆಡಬೇಕಿದೆ. ಜೋಫ್ರಾ ಬೌಲಿಂಗ್ ಎದುರಿಸ ಬೇಕಾದ್ರೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದು, ಜೋಫ್ರಾ ಆರ್ಚರ್ ಒಬ್ಬ ಕ್ಲಾಸ್ ಬೌಲರ್ ಎಂದು ಹೊಗಳಿದ್ದಾರೆ.

ಜೋಫ್ರಾ ಆರ್ಚರ್ ಲೈನ್ ಅಂಡ್ ಲೆಂತ್‍ನಲ್ಲಿ ಬೌಲಿಂಗ್ ಮಾಡುವ ಮೂಲಕ ಬ್ಯಾಟ್ಸ್‍ಮನ್‍ಗಳಿಗೆ ತಪ್ಪು ಹೊಡೆತಳಿಗೆ ಪ್ರಚೋದಿಸುವುದು ಮುಖ್ಯವಾದ ಸಂಗತಿ. ಈ ವಿಷಯದಲ್ಲಿ ಆರ್ಚರ್ ನಿಸ್ಸಿಮಾ ಎಂದು ಹೇಳಿದ್ದು, ನಾನು ರಿಟೈರ್ಡ್ ಆಗಿದ್ದು, ಅವರ ಬೌಲಿಂಗ್ ಅನ್ನು ಎದುರಿಸಬೇಕಾಗಿಲ್ಲ ಎಂದು ನಾನು ಸಂತೋಷಪಡುತ್ತಿದ್ದೇನೆ ಎಂದು ಹೇಳುವ ಮೂಲಕ ಆರ್ಚರ್ ಬೌಲಿಂಗ್ ಅನ್ನು ಮನಸಾರೆ ಹೊಗಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top