ಇಲ್ಲಿ ಕಾಫಿ ಟಿ ಕುಡಿದ ಮೇಲೆ ಕಪ್‌ ಬಿಸಾಕೋ ಹಾಗಿಲ್ಲ ತಿನ್ನ ಬೇಕು..

ನೀವೂ ಸಾಮಾನ್ಯವಾಗಿ ಯಾವುದಾದರು ಟೀ ಅಂಗಡಿಗೆ ಹೋದ್ರೆ ಅಲ್ಲಿ ನಿಮಗೆ ಟೀ ಮತ್ತು ಕಾಫಿಯನ್ನ ಪೇಪರ್‌ ಕಪ್‌ನಲ್ಲಿ ಹಾಕಿ ಕೊಡ್ತಾರೆ , ಇತ್ತಿಚೆಗೆ ಮಣ್ಣಿನ ಕಪ್‌ ಕೂಡ ಬಂದಿದ್ದು, ಅದರಲ್ಲಿ ಬಿಸಿಬಿಸಿ ಟೀ ಅಥವಾ ಕಾಫಿ ಕುಡಿದು ಆ ಲೋಟವನ್ನು ಡೆಸ್ಟ್‌ ಬಿನ್‌ಗೆ ಎಸೆಯುತ್ತೇವೆ, ಆದ್ರೆ ಈ ಊರಲ್ಲಿ ಇರೋ ಒಂದು ಟೀ ಅಂಗಡಿಯಲ್ಲಿ ಟೀ ಅಥವಾ ಕಾಫಿ ಕುಡಿದ ಮೇಲೆ ಆ ಕಪ್‌ ಅನ್ನು ನೀವೂ ಬಿಸಾಕೋ ಹಾಗಿಲ್ಲ ಬದಲಿಗೆ ತಿನ್ನಬೇಕು. ಅರೇ ಇದೇನಿದು ಕುಡಿದ ಟೀ ಕಪ್‌ ಅನ್ನು ತಿನ್ನೋದ ಅಂತ ಯೋಚ್ನೇ ಮಾಡ್ತಿದ್ದೀರಾ..ಹೌದು ನೀವೂ ಈ ಅಂಗಡಿಯಲ್ಲಿ ಟೀ ಅಥವಾ ಕಾಫಿ ಕುಡಿಯೋದು ಪೇಪರ್‌ ಕಪ್‌ ಅಥವಾ ಇನ್ಯಾವುದೋ ಯೂಸ್‌ ಅಂಡ್‌ ಥ್ರೋ ಕಪ್‌ನಲ್ಲಿ ಅಲ್ಲ ಬದಲಿಗೆ ಬಿಸ್ಕೆಟ್‌ ಕಪ್‌ನಲ್ಲಿ. ನೀವೂ ಟೀ ಕುಡಿದ ನಂತರ ಆ ಕಪ್‌ನ ಬಿಸಾಡುವ ಬದಲು ತಿಂದು ಇನ್ನಷ್ಟು ಟೇಸ್ಟ್‌ ಸವಿಯಬಹುದು. ಹೌದು ಸಾಮಾನ್ಯವಾಗಿ ನೀವೂ ಐಸ್‌ಕ್ರಿಮ್‌ ಪಾರ್ಲರ್‌ಗೆ ಹೋದ್ರೆ ಅಲ್ಲಿ ನಿಮಗೆ ಸಿಗೋ ಕೋನ್‌ ಐಸ್‌ ಅಥವಾ ಬಿಸ್ಕೆಟ್‌ ಐಕ್ರೀಮ್‌ಗಳನ್ನು ನೀವೂ ಕ್ರೀಮ್‌ ತಿಂದ ಮೇಲೆ ಅದರ ಕೋನ್‌ ಅನ್ನು ತಿನ್ನುತ್ತೀರಾ ಅದೇ ರೀತಿ ಇದು ಕೂಡ ಬಿಸ್ಕೆಟ್‌ ಕಪ್‌ ಟೀ ಅಥವಾ ಕಾಫಿ ಶಾಪ್‌, ಹೌದು ಈ ರೀತಿ ಸ್ಪೆಷಲ್‌ ಟೀ ಅಂಗಡಿ ಇರೋದು ಕೇರಳದ ತ್ರಿಶೂರ್‌ ಪಟ್ಟಣದ ಬೇಕರಿಯೊಂದರಲ್ಲಿ ಈ ರೀತಿಯ ಬಿಸ್ಕತ್‌ ಲೋಟದಲ್ಲಿ ಟೀ ನೀಡಲಾಗುತ್ತದೆ. ರಾಧಾ ಕೃಷ್ಣ ಬೇಕರಿಯಲ್ಲಿ ಈ ರೀತಿಯ ಬಿಸ್ಕತ್‌ ಟಿ ಕಪ್‌ ಸಿಗಲಿದ್ದು ಇಲ್ಲಿ ಬರುವ ಪ್ರವಾಸಿಗರಿಂದ ಹಿಡಿದು ಸ್ಥಳೀಯರು ಕೂಡ ಈ ಬಿಸ್ಕತ್‌ ಕಪ್‌ ಟೀಗೆ ಮಾರು ಹೋಗಿದ್ದಾರೆ. ಇನ್ನು ಈ ಬಿಸ್ಕತ್‌ ಟೀ ಕಪ್‌ನಲ್ಲಿ 20 ನಿಮಿಷಗಳ ಕಾಲ ಟೀ ಅಥವಾ ಕಾಫಿ ಇದ್ದರು ಕಪ್‌ ಕರಗೋದಿಲ್ಲ.

ಇದರ ಬಗ್ಗೆ ಮಾತನಾಡಿರೋ ಮಾಲೀಕರು ನಾವು ಪ್ರಾಯೋಗಿಕವಾಗಿ ಈ ರೀತಿ ಬಿಸ್ಕತ್‌ ಕಪ್‌ ಟೀ ಮಾರಲು ಶುರುಮಾಡಿದೆವು ಜನರ ರೆಸ್ಪಾನ್ಸ್‌ ತುಂಬಾನೇ ಚೆನ್ನಾಗಿ ಸಿಕ್ಕಿತ್ತು, ಅದನ್ನು ಮುಂದುವರೆಸಿದೆವು, ಈ ಪ್ಲಾಸ್ಟಿಕ್‌ ಕಪ್‌ಗಳ ಹಾವಳಿ ಹೆಚ್ಚಾಗಿದ್ದು ಈ ರೀತಿ ಮಾಡೋದ್ರಿಂದ ಪ್ಲಾಸ್ಟಿಕ್‌ ಬಳಕೆಯು ಕಡಿಮೆಯಾಗಲಿದೆ ಅಂತ ಹೇಳಿದ್ದಾರೆ. ಸದ್ಯ ರುಚಿ ಇಲ್ಲದ ಬಿಸ್ಕತ್‌ ಕಪ್‌ ಉಪಯೋಗಿಸುತ್ತಿದ್ದು ಮುಂದಿನ ದಿನಗಳಲ್ಲಿ ವೆನಿಲಾ ಮತ್ತು ಚಾಕ್ಲೆಟ್‌ ಬಿಸ್ಕತ್‌ ಕಪ್‌ ಟೀ ಪರಿಚಯಿಸಲು ಯೋಜನೆಯನ್ನು ಹಾಕಿಕೊಂಡಿದ್ದೇವೆ ಅಂತ ಹೇಳುತ್ತಾರೆ.

ಸದ್ಯ ಕೇರಳದ ತ್ರಿಶೂರ್‌ನ ರಾಧಾ ಕೃಷ್ಣ ಬೇಕರಿಯಲ್ಲಿ ಈ ಬಿಸ್ಕತ್‌ ಕಪ್‌ ಟೀ ಫೇಮಸ್‌ ಆಗಿದ್ದು ಇದರ ಬೆಲೆ ಕೇವಲ 20 ರೂಪಾಯಿ ನೀವೇನಾದ್ರು ಕೇರಳದ ತ್ರಿಶೂರ್‌ಗೆ ಭೇಟಿ ನೀಡಿದ್ರೆ ಒಮ್ಮೆ ರಾಧಾ ಕೃಷ್ಣ ಬೇಕರಿಯಲ್ಲಿ ಬಿಸ್ಕತ್‌ ಕಪ್‌ ಟೀ ಸವಿದು ಬರೋದನ್ನ ಮಾತ್ರ ಮರೆಯಬೇಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top