ಇನ್ಮುಂದೆ ನೀವು ಗ್ಯಾಸ್ ಸಿಲಿಂಡರ್‍ಗೆ ಹೆಚ್ಚು ದುಡ್ಡು ಕೊಡೋಹಾಗಿಲ್ಲ.

ಜೀವನದಲ್ಲಿ ನಾವು ಕೆಲವೊಮ್ಮೆ ಯಾವುದೇ ಒಂದು ವಸ್ತು ತಗೆದುಕೊಂಡ್ರು ಅದಕ್ಕೆ ಎಕ್ಸ್‍ಟ್ರಾ ದುಡ್ಡು ಕೊಡೋ ಹಾಗೇ ಅನೇಕ ಬಾರಿ ನಮ್ಮ ಜೀವನದಲ್ಲಿ ಆಗುತ್ತೆ, ವಸ್ತುವಿನ ಬೆಲೆಯೇ ಒಂದು ರೀತಿ ಇದ್ರೆ ನಾವೂ ಅದಕ್ಕಿಂತ ಹೆಚ್ಚು ದುಡ್ಡುಕೊಟ್ಟು ಪಡೆದುಕೊಳ್ಳುವಂತಹ ಪರಿಸ್ಥಿತಿ ಉಂಟಾಗಿ ಬಿಡುತ್ತದೆ.

ಅಂತಹದ್ದೇ ಒಂದು ವಸ್ತು ಅಂದ್ರೆ ಅದು ನಾವು ಪ್ರತಿನಿತ್ಯ ಬಳಸುವ ಗ್ಯಾಸ್ ಸಿಲಿಂಡರ್,ಹೌದು ದೈನಂದಿನ ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಕೂಡ ಒಂದು ಅವಿಭಾಜ್ಯ ಅಂಗ, ಪ್ರತಿಯೊಬ್ಬರು ಗ್ಯಾಸ್ ಖಾಲಿಯಾದರೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಎರೆಡೆರಡು ಕನೆಕ್ಷನ್‍ಗಳನ್ನು ಪಡೆದುಕೊಂಡಿರುತ್ತಾರೆ. ಇನ್ನು ಸಿಲಿಂಡರ್ ಖಾಲಿ ಆಯ್ತಾ ಅಂತ ಗೊಣಗುತ್ತಲೆ ಸಿಲಿಂಡರ್ ಬುಕ್ ಮಾಡುತ್ತೇವೆ, ಆದ್ರೆ ನಾವು ಗ್ಯಾಸ್ ಖಾಲಿಯಾದಗ ಗೊಣಗುವುದಕ್ಕಿಂತ ಹೆಚ್ಚಾಗಿ ಸಿಲಿಂಡರ್ ಮನೆಯ ಬಾಗಿಲ ಬಳಿ ಬಂದಾಗ ಹೆಚ್ಚಾಗಿ ಮನಸ್ಸಿನಲ್ಲೇ ಬೈದುಕೊಳ್ಳುತ್ತಾ ಗೊಣಗುತ್ತೇವೆ.

ಯಾಕಂದ್ರೆ ನಾವು ಸಿಲಿಂಡರ್ ಬೆಲೆಯ ಜೊತೆಯಲ್ಲಿ ಡೆಲಿವರಿ ಚಾರ್ಚ್ ಅಂತ ಹೇಳಿ ಡೆಲಿವರಿ ಬಾಯ್‍ಗೆ ಹಣವನ್ನು ನೀಡುವಾಗ ಒಲ್ಲದ ಮನಸ್ಸಿನಿಂದಲೇ ನಾವು ಹಣವನ್ನು ಆತನಿಗೆ ನೀಡಿರುತ್ತವೆ, ಇನ್ನು ಗ್ಯಾಸ್ ಎಂಜೆನ್ಸಿಗಳಲ್ಲಿ ಡೆಲಿವರಿ ಬಾಯ್‍ಗೆ ಎಕ್ಸ್ಟ್ರಾ ಹಣ ನೀಡಬೇಕು ಅನ್ನೋ ನಿಯಮವು ಇಲ್ಲ, ಆದ್ರೆ ಅದು ಗ್ಯಾಸ್ ಡೆಲಿವರಿ ಮಾಡುವವರು ಮಾಡಿಕೊಂಡಿರೋ ಅಲಿಖಿತ ನಿಯಮವಷ್ಟೇ, ಆದ್ರೆ ಇದೀಗ ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ಹಾಕುವ ಡೆಲಿವರಿ ಬಾಯ್‍ಗೆ ಚಾರ್ಜ್ ನೀಡುವ ಅಗತ್ಯವಿಲ್ಲ ಅಂತ ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ ಸ್ಪಷ್ಟಪಡಿಸಿದೆ.

ಗ್ರಾಹಕರೊಬ್ಬರು ತಾವು ಸಿಲಿಂಡರ್ ಬುಕ್ ಮಾಡಿದ ವೇಳೆ ಸಿಲಿಂಡ್ ಬೆಲೆಗಿಂತ ಹೆಚ್ಚು ಹಣವನ್ನು ಡೆಲಿವರಿ ಬಾಯ್ ಕೇಳಿದ ವೇಳೆ, ಡೆಲಿವರಿ ಚಾರ್ಜ್ ನೀಡಬೇಕ ಬೇಡವ ಅನ್ನೋ ಪ್ರಶ್ನೆಯನ್ನು ಗ್ರಾಹಕ ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್‍ಗೆ ಪ್ರಶ್ನೆಯನ್ನು ಕೇಳಿದ್ದು, ನಿಮ್ಮ ನಿಯಮದಲ್ಲಿ ಈ ರೀತಿ ಇದೆಯಾ ಅನ್ನೋ ಪ್ರಶ್ನೆಯನ್ನು ಗ್ರಾಹಕ ಹಾಕಿದ್ದಾನೆ, ಇದಕ್ಕೆ ಉತ್ತರಿಸಿದ ಕಂಪನಿ ಈ ರೀತಿಯ ಯಾವುದೇ ನಿಯಮಗಳು ಇಲ್ಲ, ಗ್ಯಾಸ್ ಎಜೆನ್ಸಿಗಳು ಈ ರೀತಿ ತೆಗೆದುಕೊಳ್ಳದಂತೆ ನಿಯಮವನ್ನು ವಿಧಿಸಿದ್ದೇವೆ ಅನ್ನೋ ಉತ್ತರ ಕೂಡ ಗ್ರಾಹಕರಿಗೆ ಬಂದಿತ್ತು,

ಇನ್ನು ಇದೇ ವಿಚಾರವಾಗಿ ಡೆಲಿವರಿ ಬಾಯ್‍ಗಳು ಹೇಳಿದ್ದು, ನಾವು ಒತ್ತಾಯ ಪೂರ್ವಕವಾಗಿ ಯಾರ ಬಳಿಯು ಕೇಳುವುದಿಲ್ಲ, ಕೆಲವ್ರು ಕೊಡುವುದಿಲ್ಲ, ಇನ್ನು ಕೆಲವ್ರು ಇಷ್ಟ ಪಟ್ಟು ಹಣವನ್ನು ಕೊಡುತ್ತಾರೆ. ದೊಡ್ಡ ದೊಡ್ಡ ಮನೆಗಳಲ್ಲಿ 100 ರೂಪಾಯಿಯವರೆಗೂ ಕೊಟ್ಟಿದ್ದಾರೆ. ನಾವು ಗ್ರಾಹಕರೊಂದಿಗೆ ಜಗಳ ಆಡುವುದಿಲ್ಲ ಅಂತ ಹೇಳಿದ್ದಾರೆ.

ಇನ್ನು ಈ ವಿಚಾರವಾಗಿ ತಮಿಳುನಾಡು ಪೆಟ್ರೋಲಿಯಂ ಗ್ಯಾಸ್ ವರ್ಕಸ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೆ ವಿಜಯನ್ ಮಾತನಾಡಿದ್ದು, ಸಿಲಿಂಡರ್ ವಿತರಕ ಏಜೆನ್ಸಿಗಳು ಡೆಲಿವರಿ ಬಾಯ್ಸ್‍ಗೆ ಒಳ್ಳೇ ಸಂಬಳವನ್ನು ನೀಡುವುದಿಲ್ಲ, ಎ ಗ್ರೇಡ್ ಪಡೆದ ನಗರಗಳಲ್ಲಿ 600 ರೂಪಾಯಿ,ಬಿ ಗ್ರೇಡ್ ಸಿಟಿಗಳಲ್ಲಿ 510 ರೂ, ಗ್ರಾಮೀಣ ಪ್ರದೇಶಲದ್ಲಿ 450 ರೂ ವೇತನ ನೀಡುತ್ತಾರೆ . ಇನ್ನು ಲೋಡಿಂಗ್ ಮತ್ತು ಅನ್‍ಲೋಡಿಂಗ್ ಚಾರ್ಜ್, ಇಂಧನ ಚಾರ್ಜ್ ಕಂಪನಿಯೇ ನೀಡಬೇಕು ಅಂತನೂ ಹೇಳಿದ್ದಾರೆ.

ಒಟ್ಟಿನಲ್ಲಿ ನೀವೂ ಬುಕ್ ಮಾಡೋ ಗ್ಯಾಸ್ ಸಿಲಿಂಡರ್‍ಗೆ ಗ್ಯಾಸ್ ಸಿಲಿಂಡರ್ ಬಿಲ್‍ನಲ್ಲಿ ಏನಿರಲಿದೆಯೋ ಆ ಮೊತ್ತವನ್ನು ನೀಡಬೇಕು ಅನ್ನೋ ನಿಯಮವಿದ್ದು, ಸಿಲಿಂಡರ್ ಡೆಲಿವರಿ ಎಷ್ಟನೇ ಮಹಡಿಯಲ್ಲಿ ಇದ್ದರು ಅನ್ನು ಡೆಲಿವರಿ ಮಾಡೋದು ಡೆಲಿವರಿ ಬಾಯ್ ಜವಬ್ದಾರಿ ಅನ್ನೋದು ಕಂಪನಿಯ ಮಾತು, ಹಾಗಾಗಿ ಇನ್ನು ಮುಂದೆ ನೀವೂ ಸಿಲಿಂಡರ್ ಬೆಲೆಗಿಂತ ಹೆಚ್ಚು ಹಣ ನೀಡುವ ಅವಶ್ಯಕತೆ ಇರುವುದಿಲ್ಲ, ಒಂದು ವೇಳೆ ಮಾನವೀಯ ದೃಷ್ಟಿಯಿಂದ ಹಣವನ್ನು ಕೊಡುವುದು ಬಿಡುವುದು ಅದು ನಿಮ್ಮ ಆಲೋಚನೆಗೆ ಬಿಟ್ಟ ವಿಷಯವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top