ಇನ್ನು ಏನೇನ್ ನೋಡ್ಬೇಕೋ! ಫುಲ್ ವೈರಲ್ ಆಗ್ತಿದೆ ಈತನ ಸ್ಟೈಲ್!

ಟ್ಯಾಲೆಂಟ್‌ ಇದು ಯಾರಿಗೆ ಯಾವ ರೀತಿ ಇರುತ್ತೆ ಅನ್ನೊದು ಯಾರಿಗೂ ಗೊತ್ತಾಗೊದಿಲ್ಲ, ಪ್ರತಿಯೊಬ್ಬ ವ್ಯಕ್ತಿಯಿಂದ ಟ್ಯಾಲೆಂಟ್ ಹೊರ ಬಂದಾಗಲೇ ಅವರ ಟ್ಯಾಲೆಂಟ್ ಗೊತ್ತಾಗೋದು, ಅದೇ ರೀತಿ ಈ ಲಾಕ್ ಡೌನ್ ಟೈಂನಲ್ಲೂ ಹಲವಾರು ಟ್ಯಾಲೆಂಟ್ ಗಳು ಹೊರ ಬರ್ತಾನೆ ಇವೆ,ಈಗ ಅಂತಹದ್ದೆ ಒಂದು ಟ್ಯಾಲೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಯರ್ರಾ ಬಿರ್ರಿ ವೈರಲ್ ಆಗಿದೆ,ಹೌದು ಸದ್ಯ ಕೊರೊನಾದಿಂದಾಗಿ ದೇಶದ ಜನತೆ ಮುಖಕ್ಕೆ ಮಾಸ್ಕ್ ಮತ್ತು ಕೈಗೆ ಗ್ಲೌಸ್ ಹಾಕಿಕೊಂಡು ಓಡಾಡ್ತಾ ಇದ್ರೆ ಇಲ್ಲೊಬ್ಬ ವ್ಯಕ್ತಿ‌ ನಾನೇ ಬೇರೆ ನನ್ ಸ್ಟೈಲೆ ಬೇರೆ ಅಂತ ಓಡಾಡುತ್ತಿದ್ದಾರೆ.ಇನ್ನು ಈತನ ಕ್ರಿಯೆಟಿವಿಟಿ ನೋಡಿದ್ರೆ ನೀವೂ ಕೂಡ ಆತನಿಗೆ ಫಿದಾ ಆಗೋದು ಗ್ಯಾರಂಟಿ, ಹೌದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರೋ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತಮ್ಮ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದಾನೆ,ಆದ್ರೆ ಇದು ಅಂತಿಂತಾ ಮಾಸ್ಕ್ ಅಲ್ಲ,ಈ ಮಾಸ್ಕ್ ಹಾಕೊಂಡು ಸಿಗರೇಟ್ ಕೂಡ ಸೇದ ಬಹುದು,ಹೌದು ಟೈಯರ್ ಟ್ಯೂಬ್ ನಿಂದ ಮಾಸ್ಕ್ ತಯಾರಿಸಿಕೊಂಡು ,ಆ ಮೂಲಕ ಟೈಯರ್ ಟ್ಯೂಬ್ ನಲ್ಲಿ ಗಾಳಿ ತುಂಬಿಸಲು ಬಳಸುವ ಜಾಗದಲ್ಲಿ ಸಿಗರೇಟ್ ಸಿಕ್ಕಿಸಿಕೊಂಡು ನಾನೇ ಬೇರೆ ನನ್ ಸ್ಟೈಲೇ ಬೇರೆ ಅಂತಿದ್ದಾನೆ,

ಇನ್ನು ಈ ಫೋಟೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಏನ್ ಗುರು ನಿನ್ ಐಡಿಯಾ ತಲೆ ಅಂದ್ರೆ ತಲೆ ಅಂತ ಹೇಳ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top