ಇದು ದಶಕಂಠ ರಾವಣನ ಸ್ಟೋರಿ..!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಇಂದು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಯಾರು ಕೂಡ ಹಾರ,ಕೇಕ್‌ ತರದೇ ಆದೇ ಹಣದಲ್ಲಿ ಬಡವರಿಗೆ,ಅಸಹಾಯಕರಿಗೆ ಸಹಾಯವಾಗುವ ವಸ್ತುವನ್ನು ತಂದು ಕೊಡಿ ಎಂದು ಹೇಳುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಇನ್ನು ಡಿ ಬಾಸ್‌ ಅಭಿಮಾನಿಗಳು ತಮ್ಮ ಬಾಸ್‌ ಆಜ್ಙೆಯನ್ನು ಪಾಲಿಸಿದ್ದು, ಬಾಸ್‌ ಹೇಳಿದಂತೆ,ಬಾಸ್‌ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ಇನ್ನು ಸೂಪರ್‌ ಸ್ಟಾರ್‌ ಬರ್ತ್‌ಡೇ ಅಂದರೆ ಅಂದು ಅವರ ಚಿತ್ರದ ಪೋಸ್ಟರ್‌, ಟೀಸರ್‌ ಟ್ರೈಲರ್‌ಗಳನ್ನು ರಿಲೀಸ್‌ ಮಾಡೋದು ಪ್ರತೀತಿ..ಅದೇ ರೀತಿ ದರ್ಶನ್‌ ಅವರ ಹುಟ್ಟುಹಬ್ಬಕ್ಕೆ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರದ ಟೀಸರ್‌ ಒಂದು ಮಧ್ಯರಾತ್ರಿ 12ಗಂಟೆಗೆ ರಿಲೀಸ್‌ ಮಾಡಿದ್ದು, ಟೀಸರ್‌ ಸಖತ್‌ ಸೌಂಡ್‌ ಕೂಡ ಮಾಡ್ತಿದೆ. ಇದುವರೆಗೂ ಬರೀ ಪೋಸ್ಟರ್‌ ಮೂಲಕ ಸೌಂಡ್‌ ಮಾಡಿದ್ದ ರಾಬರ್ಟ್‌ ಟೀಸರ್‌, ಈಗ ಡೈಲಾಗ್‌ ಮೂಲಕ ಡಿ ಬಾಸ್‌ ಅಭಿಮಾನಿಗಳಿಗೆ ಸಖತ್‌ ಥ್ರಿಲ್‌ ಕೊಟ್ಟಿದ್ದಾರೆ.


ಈ ಹಿಂದೆ ಹುನುಮನ ಅವತಾರದಲ್ಲಿ ಕಾಣಿಸಿಕೊಂಡಿದ್ದ ಪೋಸ್ಟರ್‌ ರಿಲೀಸ್‌ ಮಾಡಿದ್ದ ರಾಬರ್ಟ್‌ ಚಿತ್ರತಂಡ, ಡಿಬಾಸ್‌ ಹುಟ್ಟುಹಬ್ಬಕ್ಕೆ ಡಿಫರೆಂಟ್‌ ಆಗಿ ಕಾಣಸಿಕೊಂಡಿದ್ದಾರೆ.ರಾಮ ಮತ್ತು ರಾವಣನ ಬಗ್ಗೆ ಡೈಲಾಗ್‌ ಹೇಳುವ ಮೂಲಕ ರಾಬರ್ಟ್‌ ಚಿತ್ರದ ಬಗ್ಗೆ ಸಖತ್‌ ಕ್ಯೂರ್ಯಾಸಿಟಿ ಹುಟ್ಟಿಸಿದ್ದಾರೆ. ʻಅವನು ತಾಳ್ಮೆಯಲ್ಲಿ ಶ್ರೀ ರಾಮ,ಮಾತು ಕೊಟ್ರೆ ದಶರತ ರಾಮ,ಪ್ರೀತಿಯಿಂದ ಬಂದ್ರೆ ಜಾನಕಿ ರಾಮ,ತಿರುಗಿ ಬಿದ್ರೆ
ದಶಕಂಠ ರಾವಣ ಅನ್ನೋ ಡೈಲಾಗ್‌ ಈಗ ಡಿ ಬಾಸ್‌ ಅಭಿಮಾನಿಗಳಿಗೆ ಸಖತ್‌ ಥ್ರಿಲ್‌ ಕೊಟ್ಟಿದ್ದು, ಟೀಸರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವಿವ್ಯೂ ಪಡೆಯೋ ಮೂಲಕ ದಾಖಲೆ ನಿರ್ಮಿಸ್ತಾ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top