ಇದು ಆಸ್ಪತ್ರೆ ಲಾಡ್ಜ್‌ ಅಲ್ಲಾ..! ಸರ್ಕಾರಿ ವೈದ್ಯನ ದವಲತ್‌..!

ಬೆಂಗಳೂರಿನಲ್ಲಿ ವೈದ್ಯನೊಬ್ಬ ಬೇಜವಾಬ್ದಾರಿಯಾಗಿ ವರ್ತಿಸಿರೋ ವಿಡಿಯೋ ಒಂದು ವೈರಲ್‌ ಆಗಿದ್ದು ಈಗ ಭಾರೀ ಸುದ್ದಿಗೆ ಗ್ರಾಸವಾಗಿದೆ, ಯಲಹಂಕ ಸರ್ಕಾರಿ ಆಸ್ಪತ್ರೆಯ ವೈದ್ಯ ಚೇತನ್‌ ಈ ರೀತಿ ಧೋರಣೆ ಮಾಡುತ್ತಿರುವ ವೈದ್ಯ, ಆಸ್ಪತ್ರೆಗೆ ಬಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ರೋಗಿಗಳ ಜೊತೆ ಬೇಕಾಬಿಟ್ಟಿ ಮಾತನಾಡಿ ಬೇಜವಾಬ್ದಾರಿ ತನ ಮೆರೆದಿದ್ದಾನೆ. ಅಲ್ಲದೇ ಚಿಕಿತ್ಸೆಗೆ ಎಂದು ಬಂದ ಮಹಿಳೆಗೆ ಬಂದ ಬಂದವರನೆಲ್ಲಾ ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳಲು ಇದೇನೂ ಲಾಡ್ಜ್‌ ಅಲ್ಲ, ಕ್ಲಬ್ಬು ಅಲ್ಲ ಅನ್ನೋ ಮೂಲಕ ಬೇಜವಾಬ್ದಾರಿಯಾಗಿ ವರ್ತಿಸಿದ್ದಾನೆ, ಅಷ್ಟೇ ಅಲ್ಲದೇ ಈತ ಸರ್ಕಾರಿ ವೈದ್ಯನಾದ್ರು ಸಹ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೇಳೆ ಯೂನಿಫಾರ್ಮ್‌ ಹಾಕಿಕೊಳ್ಳದೆ ದರ್ಪದಿಂದಲೇ ರೋಗಿಗಳ ಬಳಿ ವರ್ತಿಸುತ್ತಿರುವ ವಿಡಿಯೋ ಈಗ ವೈರಲ್‌ ಆಗಿದ್ದು ಸದ್ಯ ಎಲ್ಲರಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top