ಇದು ʻಮಂಕಿ ಸೇನಾʼ ಡಾಲಿ ಧನಂಜಯ್‌ನ ಹೊಸ ಐಡಿಯಾ..!

ʻಪಾಪ್‌ ಕಾರ್ನ್‌ ಮಂಕಿ ಟೈಗರ್‌ʼ ಇದೇ ವಾರ ತೆರೆಕಾಣ್ತಾ ಇದ್ದು, ಈಗಾಗಲೇ ಚಿತ್ರದ ಬಗ್ಗೆ ಸಖತ್‌ ಹೈಪ್‌ ಕ್ರಿಯೇಟ್‌ ಆಗಿದೆ. ಸುಕ್ಕಾ ಸೂರಿ ನಿರ್ದೇಶನದ ಡಾಲಿ ಧನಂಜಯ್‌ ಅಭಿನಯದ ಈ ಚಿತ್ರಕ್ಕೆ ಈಗಾಗಲೇ ಸಿನಿರಸಿಕ ವೈಟ್‌ ಮಾಡ್ತಾ ಇದ್ದು,ಈಗಾಗ್ಲೇ ಚಿತ್ರದ ಪ್ರಮೋಷನ್‌ ಡಿಫರೆಂಟ್‌ ಆಗಿ ಮಾಡ್ತಾ ಇದೆ ಚಿತ್ರತಂಡ, ಹಳೇ ಕಾಲದ ಶೈಲಿಯಲ್ಲಿ ʻತಮಟೆʼ ಮೂಲಕ ಚಿತ್ರದ ಪ್ರಚಾರ ಮಾಡ್ತಾ ಇದ್ದು, ಈಗ ನಾಯಕ ಧನಂಜಯ್‌ ಸೋಶಿಯಲ್‌ ಮೀಡಿಯಾದಲ್ಲಿ ಹೊಸ ರೀತಿಯಲ್ಲಿ ಪ್ರಮೋಷನ್‌ ಮಾಡಲು ಶುರುಮಾಡಿದ್ದಾರೆ. ತಮ್ಮ ಟ್ವೀಟರ್‌ ಖಾತೆಯಲ್ಲಿ ಹೆಸರನ್ನು ಬದಲಿಸೋ ಮೂಲಕ ಚಿತ್ರಕ್ಕೆ ಪ್ರಮೋಷನ್‌ ಮಾಡಿಕೊಳ್ತಾ ಇದ್ದಾರೆ.

ಹೌದು ಟ್ವೀಟರ್‌ನಲ್ಲಿ ತಮ್ಮ ಪ್ರೋಫೈಲ್‌ ನೇಮ್‌ ಅನ್ನು ʻಮಂಕಿ ಸೇನಾʼ ಅಂತ ಬದಲಿಸಿಕೊಳ್ಳೋ ಮೂಲಕ ಚಿತ್ರಕ್ಕೆ ಡಿಫರೆಂಟ್‌ ಪ್ರಮೋಷನ್‌ ಮಾಡೋಕೆ ರೆಡಿಯಾಗಿದ್ದಾರೆ. ಒಟ್ಟಿನಲ್ಲಿ ಇದೇ 21ಕ್ಕೆ ʻಪಾಪ್‌ ಕಾರ್ನ್‌ ಮಂಕಿ ಟೈಗರ್‌ʼ ಚಿತ್ರ ರಿಲೀಸ್‌ ಆಗ್ತಾ ಇದ್ದು, ಚಿತ್ರ ಯಾವ ರೀತಿ ಮೋಡಿ ಮಾಡುತ್ತೆ ಕಾದು ನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top