ಇತಿಹಾಸ ಸೃಷ್ಟಿಸಲು ಹೊರಟ `ಬಿಚ್ಚುಗತ್ತಿ’ ಟ್ರೈಲರ್..!

ಸ್ಯಾಂಡಲ್‍ವುಡ್‍ನಲ್ಲಿ ವಿಭಿನ್ನ ಚಿತ್ರಗಳು ಸಖತ್ ಸೌಂಡ್ ಮಾಡ್ತಾ ಇದ್ದು ಜೊತೆಗೆ ಭರವಸೆಯನ್ನು ಸಹ ಮೂಡಿಸುತ್ತಿದೆ. ಆ ಸಾಲಿಗೆ ಈಗ ಬಿಚ್ಚುಗತ್ತಿ' ಸಿನಿಮಾ ಸೇರೋ ಎಲ್ಲಾ ಲಕ್ಷಣಗಳು ಕಾಣಿಸ್ತಾ ಇದೆ. ದುರ್ಗದ ದಳವಾಯಿ ದಂಗೆಯನ್ನು ಸಾರುವ ಬಿಚ್ಚುಗತ್ತಿ ಸಿನಿಮಾ ಸದ್ಯ ಟ್ರೈಲರ್‍ನಿಂದ ಸಖತ್ ಸದ್ದು ಮಾಡ್ತಾ ಇದೆ. ಈಗಾಗಲೇ ಟೀಸರ್ ಮತ್ತು ಸಾಂಗ್ ಮೂಲಕ ಸದ್ದು ಮಾಡಿರೋ ಈ ಚಿತ್ರ, ಸದ್ಯ ರಿಲೀಸ್‍ಗೂ ರೆಡಿಯಾಗಿ ನಿಂತಿದೆ, ಇತ್ತಿಚೆಗೆ ಸ್ಯಾಂಡಲ್‍ವುಡ್‍ನ ಹಲವು ನಿರ್ದೇಶಕರು ಮತ್ತು ನಾಯಕ ನಟರ ಸಮ್ಮುಖದಲ್ಲಿ, ನಾದ ಬ್ರಹ್ಮ ಹಂಸಲೇಖ ಅವರುಬಿಚ್ಚುಗತ್ತಿ’ ಚಾಪ್ಟರ್ 1 ಟ್ರೈಲರ್ ಲಾಂಚ್ ಮಾಡಿದ್ರು, ಕಲ್ಲಿನ ಕೋಟೆ ಚಿತ್ರದುರ್ಗದ ಮಣ್ಣಿನ ಕಥೆಯನ್ನು ಹೇಳುವ ಚಿತ್ರವನ್ನು ನೈಜವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಹರಿಸಂತು, ಚಿತ್ರದ ಟ್ರೈಲರ್‍ನಲ್ಲೇ ಟೆಕ್ನಿಕಲಿ ತುಂಬಾನೇ ಸ್ಟ್ರಾಂಗ್ ಆಗಿ ಕಾಣ್ತಿರೋ ಹಾಗೆ ಇದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ.

ಇನ್ನು ಚಿತ್ರದಲ್ಲಿ ಆರಡಿಯ ನಾಯ ರಾಜ್ ವರ್ಧನ್ ಆಕ್ಟ್ ಮಾಡಿದ್ದು.ಚಿತ್ರದ ಪಾತ್ರಕ್ಕೆ ತಕ್ಕಂತೆ ರಾಜನಂತೆ ಮಿಂಚಿದ್ದಾರೆ.ದಳವಾಯಿ ಅವತಾರದಲ್ಲಿ ಕಾಣಿಸಿಕೊಂಡಿರೋ ರಾಜ್‍ವರ್ಧನ್ ಅವರನ್ನು ಟ್ರೈಲರ್‍ನಲ್ಲಿಯೇ ಭರವಸೆ ಮೂಡಿಸಿದ್ದು,ರಾಜ್‍ವರ್ಧನ್‍ಗೆ ಜೋಡಿಯಾಗಿ ಕ್ಯೂಟ್ ಬ್ಯೂಟಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.ಬಾಹುಬಲಿಯಲ್ಲಿ ಕಾಲಕೇಯನ ಪಾತ್ರ ಮಾಡಿದ್ದ ಪ್ರಭಾಕರ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಆರ್ಭಟಿಸಿದ್ದಾರೆ. ಚಿತ್ರದಲ್ಲಿ ಪ್ರಭಾಕರ್ ಪಾತ್ರವೂ ಹೈಲೈಟ್ ಆಗಿ ಕಾಣ್ತಿದೆ. ಇನ್ನು ಉಳಿದಂತೆ. ಚಿತ್ರದ ತಾರಾಗಣ ದೊಡ್ಡದಾಗಿದ್ದು, ಎಲ್ಲಾ ಹಿರಿಯ ಮತ್ತು ಅನುಭವಸ್ಥ ಕಲಾವಿದ್ರು ಚಿತ್ರದಲ್ಲಿದ್ದಾರೆ. ಟ್ರೈಲರ್ ನಲ್ಲಿ ಎಲ್ಲಾ ಪಾತ್ರಗಳು ನೈಜವಾಗಿ ಕಾಣ್ತಿದ್ದು, ಸಿನಿಮಾದೂದಕ್ಕೂ ಆ ಕಾಲದ ಮೆರಗು ಮೇಳೈಸಿರೋ ಹಾಗಿದೆ. ನಕುಲ್ ಅಭಯಂಕರ್ , ಹಂಸಲೇಖ ಸಂಗೀತ ಸಂಯೋಜನೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರೋ ಹಾಡುಗಳು ಇಂಪ್ರೆಸೀವ್ ಆಗಿವೆ. ಬಿ.ಎಲ್ ವೇಣು ಅವ್ರ ಲೇಖನಿ ಇರೋ ಬಿಚ್ಚುಗತ್ತಿ ಸಿನಿಮಾ ಎಲ್ಲಾ ಆಂಗಲ್ ನಿಂದ್ಲೂ ತುಂಬಾ ಪಾಸಿಟೀವ್ ಆಗಿ ಕಾಣ್ತಿದೆ.

ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣದ ಬಿಚ್ಚುಗತ್ತಿ ಟ್ರೈಲರ್ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿದ್ದು, ಇದೇ ತಿಂಗಳ 28ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top