ಇಡಿ ಸಮನ್ಸ್ ಗೆ ಕಂಗಾಲಾದ ‘ಟ್ರಬಲ್‍ಶೂಟರ್’

ಇನ್ನೇನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಆಲಂಕರಿಸುವ ಕಾಲ ಸನ್ನಿಹಿತವಾಗುತ್ತಿದ್ದ ಸಂದೆರ್ಭದಲ್ಲಿಯೇ ಬೆಂಗಳೂರು ಮತ್ತು ದೆಹಲಿಯ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದ ಸಂಬಂಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಸಮನ್ಸ್‍ಗೆ ತಡೆ ನೀಡಬೇಕೆಂದು ಕೋರಿ ಮಾಜಿ ಜಲಸಂಪನ್ಮೂಲ ಸಚಿವರು, ಹಾಲಿ ಶಾಸಕರಾದ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸಲ್ಲಿಸಿದ್ದರು. ಹೈಕೋಟ್ ನ್ಯಾಯಮೂರ್ತಿ ಅರವಿಂದ್‍ಕುಮಾರ್ ಅವರಿದ್ದ, ನ್ಯಾಯಪೀಠ, ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗ್ರೀನ್ ಸಿಗ್ನಲ್ ನೀಡಿ ಆದೇಶ ನೀಡಿದ್ದಾರೆ. ಇದರಿಂದ ಡಿಕೆಶಿಯವರು ಕಾನೂನು ಚಕ್ರವ್ಯೂಹದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದಿಲ್ಲಿಯ ಪ್ಲಾಟ್ ಹಾಗೂ ಮನೆಯಲ್ಲಿ ದೊರೆತ 8.59 ಕೋಟಿ. ರೂ.ಅಕ್ರಮ ಹಣ ಸಂಗ್ರಹ ಮತ್ತು ಕ್ರಿಮಿನಲ್ ಒಳ ಸಂಚುಗಳ ಆರೋಪದಡಿ ಆದಾಯ ತೆರಿಗೆ ಕಾಯಿದೆ 1961ರ ಕಲಂ 277, 278 ಹಾಗೂ ಭಾರತೀ ದಂಡ ಸಂಹಿತೆಯ ಕಲಂ 120 ಬಿ, 193 ಹಾಗೂ 199ರ ಅಡಿಯಲ್ಲಿ ಶಿವಕುಮಾರ್, ಸಚಿನ್ ನಾರಾಯಣ್, ಸುನಿಲ್‍ಕುಮಾರ್ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಹೈಕೋರ್ಟ್ ತೀರ್ಪಿನಲ್ಲಿ ಡಿಕೆಸಿ ವಿರುದ್ಧದ ಈ ಪ್ರಕರಣ ವಿಚಾರಣೆಗೆ ಯೋಗ್ಯ, ಪ್ಲಾಟ್‍ನಲ್ಲಿ ಹಣ ಸಿಕ್ಕಿರುವುದು ಅಕ್ಷಮ್ಯ ಮತ್ತು ಶಿಕ್ಷಾರ್ಹ, ಇಂತಹ ಹಣವನ್ನು ಆರ್ಥಿಕತೆಯಲ್ಲಿ ತೊಡಗಿಸಿಕೊಳ್ಳುವುದು ಕೂಡ ಶಿಕ್ಷಾರ್ಹವಾದುದು, ಅವರಾಧದಿಂದ ಬಂದ ಹಣದ ಬಗ್ಗೆ ಇಡಿ ವಿಚಾರಣೆ ನಡೆಸಬಹುದು. ಆದಕಾರಣ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಇಡಿ ಸಮನ್ಸ್ ನೀಡಿರುವುದು ಸರಿಯಾಗಿದೆ ಎಂಬ ಅಂಶಗಳನ್ನು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಜಾರಿ ನಿರ್ದೇಶನಾಲಯದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್‍ನ ಟ್ರಬಲ್ ಶೂಟರ್ ಯಾವ ಯಾವ ತಂತ್ರ ಬಳಸಿಕೊಳ್ಳುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇಂತಹ ಅಪಾದನೆ ಬಂದಾಗ ಇಡಿ ವಿಚಾರಣೆ ಮಾಡೋದು ತಪ್ಪಲ್ಲ, ಅವರು ಕೂಡ ವಿಚಾರಣೆಗೆ ಹಾಜರಾಗಬೇಕು. ಸತ್ಯ ಹೊರಬರಲೇಬೇಕು. ವಿಚಾರಣೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಯಾವದೋ ಕಾರಣಕ್ಕೆ, ಯಾರನ್ನೋ ಬಲಿಪಶು ಮಾಡವುಂತಾಗಬಾರದು.
ಡಿಕೆಶಿ ಮುಂದಿರುವ ಆಯ್ಕೆಗಳೇನು?

  1. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬಹುದು.
  2. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಜಾಮೀನು ಮಂಜೂರಾದರೆ ಬಂಧನ ಭೀತಿಯಿಂದ ಡಿಕೆಶಿ ಪಾರಾಗಬಹುದು.
  3. ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಸಮನ್ಸ್ ಪಡೆದು ವಿಚಾರಣೆಗೆ ಹಾಜರಾಗಬಹದು.
  4. ವಿಚಾರಣೆಗೆ ಹಾಜರಾಗಿ ಪಿಎಂಎಲ್‍ಎ ಅಡಿ ದಾಖಲೆ ಸಲ್ಲಿಸಬಹುದು.
  5. ದೆಹಲಿಯ ನಿವಾಸದಲ್ಲಿ ದೊರೆತಿರುವ ಹಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ರೀತಿಯ ಅಪರಾಧವೆಸಗಿಲ್ಲ ಎಂದು ಇಡಿ ಮುಂದು ವಾದ ಮಂಡನೆ ಮಾಡಬಹುದು.

ಕೋರ್ಟ್‍ನಲ್ಲಿ ಅರ್ಜಿ ವಜಾವಾದ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೆಶನಾಲಯದ ಅಧಿಕಾರಿಗಳು ಡಿಕೆಸಿಗೆ ಸಮನ್ಸ್ ನೀಡಿದ್ದಾರೆ. ಅಧಿಕಾರಿಗಳು ದಿಲ್ಲಿಗೆ ಕರೆದರೂ ಹೋಗುತ್ತೇನೆ. ಎಲ್ಲಿಗೆ ಕರೆದರೂ ಹೋಗುತ್ತೇನೆ ಮತ್ತು ತನಿಖೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಡಿ.ಕೆ.ಶಿವಕುಮಾರ್‍ರವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಡಿಕೆಶಿ ಬಂಧಿಸುವುದು ಬಿಡುವುದು ಇಡಿಗೆ ಬಿಟ್ಟ ವಿಚಾರ.
ಕೇಂದ್ರ ಕಾಂಗ್ರೆಸ್ ಮುಖಂಡರುಗಳು ರಾಜ್ಯದಲ್ಲಿ ಕೆಪಿಸಿಸಿಯ ಅಧ್ಯಕ್ಷ ಸ್ಥಾನ ಅಥವ ಪ್ರತಿಪಕ್ಷ ಸ್ಥಾನ ಯಾವುದಾದರೊಂದು ಮಹತ್ತರ ಜವಾಬ್ದಾರಿ ನೀಡಿ ಯಾವ ಸಂದರ್ಭದಲ್ಲಾದರೂ ಉಪಚುನಾವಣೆ ಎದುರಾದರೆ, ಅದನ್ನು ಎದುರಿಸಲು ಡಿಕೆಶಿಯವರೇ ಸೂಕ್ತ ವ್ಯಕ್ತಿ ಎಂದು ಯೋಚಿಸುತ್ತಿರುವಾಗಲೇ, ಈ ಪ್ರಕರಣ ಅಡ್ಡಿ ಬಂದು ಬಿಟ್ಟಿದೆ. ಈ ಪ್ರಕರಣ ಪಕ್ಷಕ್ಕೆ ಅದರಲ್ಲಿಯೂ ವೈಯಕ್ತಿಕವಾಗಿ ಡಿಕೆಶಿ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹಿನ್ನಡೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಕರ್ನಾಟಕದ ಕಾಂಗ್ರೆಸ್ಸಿಗೆ ‘ಚಾಣುಕ್ಯ’ ರಾಗಿರುವ ಡಿಕೆಸಿ ಕಾನೂನಿನ ಚಕ್ರವ್ಯೂಹದಿಂದ ಹೇಗೇ ಹೊರ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top