ಇಂದು ಯಾರು ಭೂಮಿಯನ್ನು ಅಗಿಯಲು ಹೋಗ ಬೇಡಿ..ಕಾರಣ ಏನು ಗೊತ್ತಾ..?

ಇಂದು ಯಾವ ಕಾರಣಕ್ಕೂ ಭೂಮಿತಾಯಿಯನ್ನು ಗುದ್ದಲಿ, ಪಿಕಾಸಿಯಿಂದ ಅಗೆಯಬೇಡಿ.. ಕಾರಣ ಕೇಳಿದ್ರೆ ನೀವೂ ಶಾಕ್‌ ಆಗ್ತೀರಾ.!

ಹೌದು ನಿನ್ನೆ ನೀವೆಲ್ಲ ಸಂಭ್ರಮದಿಂದ‌ ಗಣೇಶ ಚತುರ್ಥಿಯನ್ನು‌ ಆಚರಿಸಿ ,ಗಣೇಶನನ್ನು ನಿಮ್ಮೂರಿನ ಬೀದಿ ಬೀದಿಗಳಲ್ಲಿ ಪ್ರತಿಷ್ಟಾಪಿಸಿ ಸಂಭ್ರಮದಿಂದ‌ ಊರಿಗೆ ಊರೇ ಹಬ್ಬವನ್ನು‌ ಆಚರಿಸಿದ್ದೀರಿ ಆದ್ರೆ ಇವತ್ತು ಯಾವ ಕಾರಣಕ್ಕೂ ಈ ಒಂದು ಕೆಲಸವನ್ನು ನೀವೂ ಮಾಡೋದಕ್ಕೆ ಹೋಗಬೇಡಿ ,ಈ‌ ಕೆಲಸ ಮಾಡಿದ್ರೆ ನೀವೂ ಸಮಸ್ಯೆ‌ ಅನುಭವಿಸುವುದು ಗ್ಯಾರಂಟಿ.

ಹೌದು ಗಣೇಶ ಹಬ್ಬ ಆಚರಿಸಿದ ಮರುದಿನ ಭೂಮಿಯನ್ನು ಅಗೆದರೆ ಗಣೇಶನ ವಾಹನ ಮೂಶಿಕ ವಾಹನನ ಹಾವಳಿ‌ ಜಾಸ್ತಿ ಆಗಲಿದೆ ಅನ್ನೊ ನಂಬಿಕೆ ನಮ್ಮ ಹಿರಿಯರ ಕಾಲದಿಂದಲೂ ಬಂದಿದೆ, ಗಣೇಶ ಹಬ್ಬವಾದ ಮರುದಿನ ಭೂಮಿ‌ ಅಗೆದಷ್ಟು ಇಲಿಯ ಕಾಟ ಜಾಸ್ತಿ ಆಗಿ ನಾವು ಬೆಳೆದ ದವಸ ಧಾನ್ಯಗಳನ್ನು ಹಾಳುಮಾಡಿ ಬಿಡುತ್ತವೆ ಅನ್ನೋ‌ ನಂಬಿಕೆ‌ ನಮ್ಮ ಹಿರಿಯರಲ್ಲಿ ಹಾಗಾಗಿ ಗಣೇಶ ಹಬ್ಬವಾದ ಮರುದಿನ ಯಾವ ಕಾರಣಕ್ಕೂ ಭೂಮಿಯನ್ನು ಅಗೆಯಬಾರದು ಅಂತ ಮನೆಯಲ್ಲಿ ಇರೋ ಹಿರಿಯರು ಹೇಳುತ್ತಿರುತ್ತಾರೆ.. ಏನೇ ಆದ್ರೂ ನಮ್ಮ ಪೂರ್ವಜರು ನಡೆಸಿಕೊಂಡು ಬಂದ‌ ಕೆಲವೊಂದು ಪದ್ಧತಿಗಳು‌ ಅದೆಷ್ಟೋ ಕಾರಣಗಳಿಗೆ ಉಪಯುಕ್ತವಾಗಿವೆ,ಆದ್ರೆ ತಂತ್ರಜ್ಞಾನ ಮುಂದುವರೆದಂತೆ ಈಗಿನ ಪೀಳಿಗೆಯ ಜನ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಪದ್ಧತಿಯನ್ನು ಮೂಢನಂಬಿಕೆ ಅಂತ ಹೇಳ್ತಾರೆ,ಅದೇನೆ ಇದ್ರೂ ಗಣೇಶ ಹಬ್ಬದ ಮರುದಿನ‌ ಈ‌ರೀತಿ‌ ಮಾಡಬೇಡಿ ಅನ್ನೋದಕ್ಕೂ ಒಂದು ಕಾರಣವಿರುತ್ತದೆ ಆ ನಂಬಿಕೆಯನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಷಯ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top