ಇಂದಿನಿಂದ ಲೋಕಲ್ ಕ್ರಿಕೆಟ್..ಐಪಿಎಲ್ ಗೆ ಇದೇ ಮಹತ್ವದ ಟೂರ್ನಿ..

ಇಂದಿನಿಂದ ಸಯದ್ ಮಷ್ತಾಕ್ ಅಲಿ ಟ್ರೋಫಿ ಶುರುವಾಗಲಿದೆ. ಟೂರ್ನಿಯಲ್ಲಿ ನಾಲ್ಕು ಗುಂಪುಗಳಾಗಿ ಮಾಡಿದ್ದು,ಮೊದಲ ಗುಂಪಿನಲ್ಲಿ ಕರ್ನಾಟಕ ಇದ್ದು ಇಂದು ಹಾಲಿ ಚಾಂಪಿಯನ್ ಕರ್ನಾಟಕಕ್ಕೆ ಜಮ್ಮು ಕಾಶ್ಮೀರ ತಂಡ ಸವಾಲೆಸಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನೆಡೆಸುತ್ತಿದ್ದು, ಉಪನಾಯಕ‌ ಸ್ಥಾನವನ್ನು ಪವನ್ ದೇಶಪಾಂಡೆ ವಹಿಸಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೆ ಎಲ್ ರಾಹುಲ್,ಮಾಯಾಂಕ್ ಆಗರ್ ವಾಲ್ ಮತ್ತು ಮನೀಷ್ ಪಾಂಡೆ ಅನುಪಸ್ಥಿತಿಯಲ್ಲಿ ಕರ್ನಾಟಕ ತಂಡ ಕಣಕ್ಕಿಳಿಯಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಕಳೆದ ಬಾರಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ದೇವದತ್ ಪಡಿಕಲ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಇನ್ನು ಈ ಬಾರೀಯ ದೇಸೀ ಟೂರ್ನಿ ಮೇಲೆ ಬಿಸಿಸಿಐ ಕಣ್ಣಿಟ್ಟಿದ್ದು, ಐಪಿಎಲ್ ಮಿನಿ ಹರಾಜಿಗೂ ಮುನ್ನ ದೇಸೀ ಟೂರ್ನಿ ನಡೆಸುವ ಮೂಲಕ ದೇಸೀ ಪ್ರತಿಭೆಗಳನ್ನು ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚು ಒತ್ತುಕೊಡಲು ಐಪಿಎಲ್ ತಂಡಗಳ ಪ್ರಾಂಚೈಸಿಗಳು ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಇಂದಿನಿಂದ ನಡೆಯುತ್ತಿರೋ ದೇಸಿ ಟೂರ್ನಿ ಈ ಬಾರಿ ಆಟಗಾರಿಗೆ ಅದೃಷ್ಟದ ಬಾಗಿಲು ತೆರೆಯೋದಂತು ನಿಜ,ಇನ್ನು ಬಿಸಿಸಿಐ ಕೂಡ ಈ ಟೂರ್ನಿ ಮೂಲಕ ಭವಿಷ್ಯದ ಆಟಗಾರರನ್ನು ಗುರುತಿಸಿ ತಯಾರಿ ನಡೆಸೋ ಪ್ಲಾನ್ ನಲ್ಲೂ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top