ಇಂದಿನಿಂದ ಚೀನಾದಲ್ಲಿ ಸೂಪರ್ ಸ್ಟಾರ್ ರಜಿನಿ ಅಬ್ಬರ..!

ಇಂದಿನಿಂದ ಸೂಪರ್ ಸ್ಟಾರ್ ರಜಿನಿಕಾಂತ್ ಚೀನಾದಲ್ಲಿ ಅಬ್ಬರಿಸಲ್ಲಿದ್ದಾರೆ. ಹೌದು ರಜಿನಿಯಾ 2.0 ಚಿತ್ರ ಇಂದಿನಿಂದ ಚೀನಾದಲ್ಲಿ ತೆರೆಕಾಣದಲ್ಲಿದ್ದು ರಜಿನಿ ಚೀನಾದಲ್ಲಿ ಮೋಡಿಮಾಡಲಿದ್ದಾರೆ, ಈಗಾಗ್ಲೇ 2.0 ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗಿ ಹಲವು ದಾಖಲೆಗಳನ್ನು ಸೃಷ್ಟಿಸಿ ಬಾಕ್ಸಾಫಿಸ್‍ನಲ್ಲಿ ದಾಖಲೆ ಬರೆದು ಕೆಲವು ತಿಂಗಳುಗಳೇ ಕಳೆದಿವೆ, ಆದ್ರೆ ಕಾರಣಾಂತರಗಳಿಂದ ಚೀನಾದಲ್ಲಿ ರಿಲೀಸ್ ಆಗಿರಲಿಲ್ಲ, ಅದಾದ ಕೆಲವು ತಿಂಗಳ ನಂತರ ಈಗ ಚೀನಾದಲ್ಲಿ 2.0 ಚಿತ್ರ ರಿಲೀಸ್ ಆಗ್ತಾ ಇದ್ದು ವಿಶ್ವದಾದ್ಯಂತ ಫ್ಯಾನ್ಸ್ ಹೊಂದಿರೋ ರಜಿನಿ ಯಾವರೀತಿ ಚೀನಾದಲ್ಲಿ ಮೋಡಿಮಾಡಲಿದ್ದಾರೆ ನೋಡಬೇಕು, ಜೊತೆಗೆ ಚೀನಾದಲ್ಲಿ ಭಾರತೀಯ ಸಿನಿಮಾಗಳಿಗೆ ಒಳ್ಳೇ ಮಾರುಕಟ್ಟೆ ಇದ್ದು 2.0 ಚಿತ್ರ 1000 ಥಿಯೇಟರ್‍ಗಳಲ್ಲಿ ರಿಲೀಸ್ ಆಗ್ತಾ ಇದೆ, ಅಲ್ಲದೇ ಈ ಹಿಂದೆ ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ ಚೀನಾದಲ್ಲಿ 1000ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿತ್ತು ಈಗ 2.0 ಯಾವ ಮಟ್ಟಕ್ಕೆ ಗಲ್ಲಪೆಟ್ಟಿಗೆಯಲ್ಲಿ ಕಮಾಲ್ ಮಾಡಲಿದೆ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top