ಇಂದಿನಿಂದ ಐಪಿಎಲ್‌ ಹಬ್ಬ ಇದೆಲ್ಲಾ ಮಿಸ್‌ ಮಾಡಿಕೊಳ್ತಾರೆ ಅಭಿಮಾನಿಗಳು..

ಐಪಿಎಲ್‌ 2020 ಹಬ್ಬ ಇಂದಿನಿಂದ ಶುರುವಾಗ್ತಾ ಇದ್ದು, ಕ್ರಿಕೆಟ್‌ ಪ್ರಿಯರು ಕಾತುರದಿಂದ ಕಾಯ್ತಾ ಇದ್ದಾರೆ. ಇಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ನಡುವೆ ಉದ್ಘಾಟನ ಪಂದ್ಯ ನಡೀತಾ ಇದ್ದು ಐಪಿಎಲ್‌ ಹಬ್ಬದಲ್ಲಿ ಈ ಬಾರಿ ಕ್ರಿಕೆಟ್‌ ಪ್ರಿಯರು ಈ ಎಲ್ಲಾ ಕ್ಷಣಗಳನ್ನು ಮಿಸ್‌ ಮಾಡಿಕೊಳ್ತಾ ಇದ್ದಾರೆ. ಹಾಗಾದ್ರೆ ಯಾವ ಯಾವ ಕ್ಷಣಗಳನ್ನು ಮಿಸ್‌ ಮಾಡಿಕೊಳ್ತಾರೆ ಕ್ರಿಕೆಟ್‌ ಪ್ರಿಯರು ನೋಡೋಣ.

1.ಐಪಿಎಲ್‌ನಲ್ಲಿ ಅದ್ಧೂರಿ ಉದ್ಘಾಟನೆ ಈ ಬಾರಿ ಇಲ್ಲ.

ಪ್ರತಿ ಬಾರಿ ಐಪಿಎಲ್‌ ಶುರುವಾಗುವ ಮುನ್ನ ಅದ್ಧೂರಿಯಾದ ಕಾರ್ಯಕ್ರಮ ನಡೀತಾ ಇತ್ತು, ಬಾಲಿವುಡ್‌ ಸೆಲೆಬ್ರಿಟಿಗಳಿಂದ ಅದ್ಧೂರಿ ಮನೋರಂಜನ ಕಾರ್ಯಕ್ರಮಗಳು ನೆರವೇರುತ್ತಿತ್ತು, ಆದ್ರೆ ಈ ಬಾರಿ ಅದ್ಧೂರಿಯಾಗಿ ಐಪಿಎಲ್‌ಗೆ ಚಾಲನೆ ನೀಡಲು ಬಿಸಿಸಿಐ ಬ್ರೇಕ್‌ ಹಾಕಿದೆ.

  1. ಸ್ಟೇಡಿಯಂನಲ್ಲಿ ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡೋಹಾಗಿಲ್ಲ.

ಹೌದು ಕರೋನಾ ಎಫೆಕ್ಟ್‌ನಿಂದಾಗಿ ಈಗಾಗಲೇ ಐಪಿಎಲ್‌ ದುಬೈನಲ್ಲಿ ನಡೀತಾ ಇದ್ದು, ದುಬೈ ನ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಈ ಬಾರಿ ಪ್ರೇಕ್ಷಕರಿಲ್ಲದ ಐಪಿಎಲ್‌ ನಡೀಸ್ತಾ ಇದ್ದು, ಕ್ರಿಕೆಟ್‌ ಪ್ರಿಯರು ಈ ಬಾರಿ ಐಪಿಎಲ್ ಅನ್ನು ಸ್ಟೇಡಿಯಂನಲ್ಲಿ ನೋಡಿ ಎಂಜಾಯ್‌ ಮಾಡೋದನ್ನ ಮಿಸ್‌ ಮಾಡಕೊಳ್ತಾ ಇದ್ದಾರೆ.

3.ಚಿಯರ್ಸ್‌ ಲೀಡರ್‌ ಇರೋದಿಲ್ಲ.

ಐಪಿಎಲ್‌ನಲ್ಲಿ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಅಂದ್ರೆ ಅದು ಚಿಯರ್ಸ್‌ ಲೀಡರ್‌, ಪ್ರತಿಬಾರಿ ತಂಡಗಳು ಬೌಂಡರಿ,ಸಿಕ್ಸರ್‌ ಬಾರಿಸಾಗಲು ಚಿಯರ್ಸ್‌ ಲೀಡರ್‌ ಚಿಯರ್‌ ಮಾಡ್ತಾ ಇದ್ರು, ಇನ್ನು ಪಂದ್ಯ ವೀಕ್ಷಿಸುತ್ತಿರುವವರಿಗೆ ಆನಂದ ನೀಡ್ತಾ ಇತ್ತು, ಆದ್ರೆ ಈ ಬಾರಿ ಐಪಿಎಲ್‌ನಲ್ಲಿ ಚಿಯರ್ಸ್‌ ಲೀಡರ್‌ಗಳಿಗೂ ಕೂಡ ಬಿಸಿಸಿಐ ಬ್ರೇಕ್‌ ಹಾಕಿದೆ.

  1. ಸ್ಟಾರ್‌ ಸ್ಪೋಟ್ಸ್‌ನಲ್ಲಿ ಮಯಾಂತಿ ಆ್ಯಂಕರಿಂಗ್‌ ಮಿಸ್‌..

ಇನ್ನು ಐಪಿಎಲ್‌ ನೇರ ಪ್ರಸಾರ ಸ್ಟಾರ್‌ ಸ್ಪೋಟ್ಸ್‌ನಲ್ಲಿ ಪ್ರಸಾರವಾಗುತ್ತಿದ್ದು, ಐಪಿಎಲ್‌ ಶುರುವಾಗುವ ಮುನ್ನ ಮತ್ತು ಮುಗಿದ ಮೇಲೆ ಥರ್ಡ್‌ ಅಂಪೈರ್‌ ಕಾರ್ಯಕ್ರಮವನ್ನು ನಿರೂಪಕಿ ಮಯಾಂತಿ ನಡೆಸಿಕೊಡ್ತಾ ಇದ್ರು ಆದ್ರೆ ಈ ಬಾರಿಯ ಐಪಿಎಲ್‌ನಲ್ಲಿ ಮಯಾಂತಿ ಅಲಭ್ಯವಿರುವುದು ಅಭಿಮಾನಿಗಳಿಗೆ ಕೊಂಚ ಬೇಸರ ತರಸಿದೆ. ಇನ್ನು ಮಯಾಂತಿ ಅಲಭ್ಯವಾಗಿರಲು ಕಾರಣವನ್ನು ತಿಳಿಸಿದ್ದು, ಸದ್ಯ ಮಯಾಂತಿ ತಾಯಿಯಾಗಿದ್ದು, ಆರು ತಿಂಗಳ ಬಳಿಕ ಈ ವಿಷಯವನ್ನು ರಿವೀಲ್‌ ಮಾಡಿದ್ದಾರೆ. ಈ ಕಾರಣಕ್ಕಾಗಿ ಈ ಬಾರಿ ಸ್ಟಾರ್‌ ಸ್ಪೋಟ್ಸ್‌ನಲ್ಲಿ ಅವರ ನಿರೂಪಣೆಯನ್ನು ಅಭಿಮಾನಿಗಳು ಮಿಸ್‌ ಮಾಡಿಕೊಳ್ತಾರೆ.

5.ಸಿಕ್ಸ್‌, ಬೌಂಡರಿಗೆ ಹೊಡೆದಾಗ ಆಟಗಾರರೆ ಬಾಲ್‌ ತರಬೇಕು.

ಈ ಬಾರಿ ಐಪಿಎಲ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದು, ಅದರಲ್ಲಿ ಪ್ರಮುಖವಾದದ್ದು ಅಂದ್ರೆ ಬೌಲರ್‌ ಬಾಲ್‌ಗೆ ಎಂಜಲು ಹಚ್ಚುವ ಆಗಿಲ್ಲ, ಇನ್ನು ಬ್ಯಾಟ್ಸ್‌ಮನ್‌ ಸಿಕ್ಸರ್‌, ಬೌಂಡರಿ ಹೊಡೆದಾಗ ಎದುರಾಳಿ ತಂಡದ ಆಟಗಾರರೇ ಬಾಲ್‌ ತೆಗೆದುಕೊಂಡು ಬರಬೇಕು, ಇದು ಆಟಗಾರರಿಗೆ ಸ್ವಲ್ಪ ಸಮಸ್ಯೆಯಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top