ಇಂಗ್ಲೀಷ್‌ ಪರೀಕ್ಷೆಗೆ ಇನ್ಮುಂದೆ ಅರ್ಧಗಂಟೆ ಎಕ್ಸ್‌ಟ್ರಾ ಟೈಂ..!

ಇಂಗ್ಲೀಷ್‌ ಪರೀಕ್ಷೆ ಬರೆಯಲು ಇನ್ನು ಮುಂದೆ ಅರ್ಧ ಗಂಟೆ ಹೆಚ್ಚುವರಿ ಟೈಂ ಇನ್ಮುಂದೆ ಸಿಗಲಿದೆಯಂತೆ. ಹೌದು ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಎನ್ನುವುದು ಸ್ವಲ್ಪ ಕಷ್ಟದ ವಿಷಯ ಆಗಿರುವುದರಿಂದ, ಪರೀಕ್ಷೆ ಸಮಯದಲ್ಲಿ ಇಂಗ್ಲೀಷ್‌ನಲ್ಲಿ ಪ್ರಶ್ನೆಯನ್ನು ಓದಿ ಅರ್ಥಮಾಡಿಕೊಂಡು ಬರೆಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಕಾರಣಕ್ಕಾಗಿ ಇಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂಗ್ಲೀಷ್‌ ಪರೀಕ್ಷೆಗೆ ಹೆಚ್ಚುವರಿ ಅರ್ಧಗಂಟೆ ನೀಡಲು ಎಸ್‌ಎಸ್‌ಎಲ್‌ಸಿ ಬೋರ್ಡ್‌ ತೀರ್ಮಾನ ಮಾಡಿದೆ.

ಮುಂದಿನ ಮಾರ್ಚ್‌-ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು. ಇದರಲ್ಲಿ ಇಂಗ್ಲೀಷ್‌ ವಿಷಯದ ಪರೀಕ್ಷೆ ಬರೆಯಲು ಅರ್ಧ ಗಂಟೆ ಹೆಚ್ಚಾಗಿ ಸಮಯ ನೀಡಲು ಬೋರ್ಡ್‌ ತೀರ್ಮಾನವನ್ನು ಕೈಗೊಂಡಿದ್ದು. ಸದ್ಯ ಈಗಿರುವ ಸಮಯದಲ್ಲಿ ಪರೀಕ್ಷೆ ಬರೆಯಲು ಸಮಯ ಸಾಕಾಗುವುದಿಲ್ಲ ಹಾಗಾಗಿ ಸಮಯವನ್ನು ವಿಸ್ತರಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಂದ ಮನವಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್‌ ಅರ್ಧ ಗಂಟೆ ಹೆಚ್ಚುವರಿ ಸಮಯ ವಿದ್ಯಾರ್ಧಿಗಳಿಗೆ ನೀಡಲು ಮಹತ್ವದ ನಿರ್ಧಾರವನ್ನು ಮಾಡಿದೆ. ಈ ಮಹತ್ವದ ನಿರ್ಧಾರದಿಂದಾಗಿ ಇನ್ನು ಮುಂದೆ ಇಂಗ್ಲೀಷ್‌ ವಿಷಯದ ಪರೀಕ್ಷೆಯನ್ನು ಆರಾಮಾಗಿ ಬರೆಯಬಹದುದಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top