ಆ ವಿಡಿಯೋದಿಂದ ವಿವಾದಕ್ಕೆ ಗುರಿಯಾದ RCBಆಟಗಾರ..

ಶನಿವಾರ ಆರ್‍ಸಿಬಿ ರಾಜಸ್ತಾನ್ ರಾಯಲ್ಸ್ ಎದುರು ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಟಾಪ್ 3ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಎಬಿಡಿಯವರ ಅದ್ಭುತ ಆಟದಿಂದಾಗಿ 178ರನ್‍ಗಳ ಗುರಿಯನ್ನು ಬೆನ್ನತಿದ್ದ ಆರ್‍ಸಿಬಿ ಎಬಿಡಿಯ ಸಿಕ್ಸರ್‍ಗಳ ಸುರಿಮಳೆಯಿಂದ ಗೆಲುವು ಸಾಧಿಸಿತು. ಆದ್ರೆ ನಿನ್ನೆಯ ಮ್ಯಾಚ್ ವೇಳೆ ಡಗೌಟ್‍ನಲ್ಲಿ ಕಾಣಿಸಿಕೊಂಡ ವಿಡಿಯೋ ಒಂದು ಇದೀಗ ವೈರಲ್ ಆಗಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹೌದು ಆರ್‍ಸಿಬಿ ತಂಡದ ಓಪನರ್ ಆರೋನ್ ಫಿಂಚ್ ಅವರು ಇ-ಸಿಗರೇಟ್ ಸೇದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆರ್‍ಸಿಬಿ ಬ್ಯಾಟಿಂಗ್ ವೇಳೆ ಫಿಂಚ್ ಔಟ್ ಆದ ನಂತರ ಪೆವಿಲಿಯನ್‍ನಲ್ಲಿ ಇ ಸಿಗರೇಟ್ ಸೇದಿ ಹೊಗೆ ಬಿಟ್ಟಿರುವ ವಿಡಿಯೋ ಈಗ ಟ್ವೀಟರ್‍ನಲ್ಲಿ ಸಖತ್ ಸುದ್ದು ಮಾಡುತ್ತಿದೆ. 14 ರನ್ ಗಳಿಸಿದ ಫಿಂಚ್ ಔಟ್ ಆಗಿ ಡ್ರೆಸಿಂಗ್ ರೂಮ್ ಸೇರಿದ ನಂತರ, ಈ ವೇಳೆ ಇ ಸಿಗರೇಟ್ ಸೇದುತ್ತಿರೋದನ್ನ ಲೈವ್‍ನಲ್ಲಿ ಕ್ಯಾಮರಾ ಮನ್ ಪಂಚ್ ಮಾಡಿದ್ದು, ಇದು ವಿಶ್ವದಾದ್ಯಂತ ಲೈವ್ ಟೆಲಿಕಾಸ್ಟ್ ಕೂಡ ಆಗಿತ್ತು, ಇನ್ನು ಈ ಸಿಗರೇಟ್ ಭಾರತ ಮತ್ತು ಯುಎಇಯಲ್ಲಿ ಬ್ಯಾನ್ ಆಗಿದ್ದು, ಕೆಲ ದೇಶಗಳಲ್ಲಿ ಇ ಸಿಗರೇಟ್ ಸೇದಲು ಅವಕಾಶವಿದೆ. ಆದ್ರೆ ಇದೀಗ ಫಿಂಚ್ ಸೇದಿರೋ ಇ ಸಿಗರೇಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವಿವಾದಕ್ಕೂ ಕೂಡ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಫಿಂಚ್ ಈ ವಿಚಾರವಾಗಿ ಸಮಸ್ಯೆ ಎದುರಿಸುತ್ತಾರಾ ಕಾದು ನೋಡಬೇಕು.

ಈ ವಿಚಾರವಾಗಿ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top