ಆಸ್ಟ್ರೇಲಿಯಾ ವಿರುದ್ಧ ಸೋಲು ವಿರಾಟ್ ಕ್ಯಾಪ್ಟನ್ ಶಿಪ್‍ಗೆ ಕುತ್ತು

ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೆಟ್ಟ ಆರಂಭವನ್ನು ಮಾಡುವ ಮೂಲಕ ಮೂರು ಏಕದಿನ ಸರಣಿಯಲ್ಲಿ ಸತತ ಎರಡು ಸೋಲುಗಳ ಮೂಲಕ ಸರಣಿ ಕಳೆದುಕೊಂಡಿದೆ, ಇಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮತ್ತದ್ದೇ ಕೆಟ್ಟ ಬೌಲಿಂಗ್‍ನಿಂದಾಗಿ ಆಸ್ಟ್ರೇಲಿಯಾ 389ರನ್‍ಗಳ ಗುರಿಯನ್ನು ನೀಡಲು ಸಹಾಯ ಮಾಡಿಕೊಟ್ಟಿತು, ಇನ್ನು ದೊಡ್ಡ ಮೊತ್ತವನ್ನು ಬೆನ್ನತ್ತಿದ್ದ ಟೀಂ ಇಂಡಿಯಾಗೆ ಉತ್ತಮ ಆರಂಭ ದೊರೆಯದೆ ವಿಫಲ ಕಾಣುವ ಮೂಲಕ ಕೊಹ್ಲಿ, ಕೆ ಎಲ್ ರಾಹುಲ್ ಹೋರಾಟದ ನಡುವೆ 334ರನ್ ಗಳಿಸುವ ಮೂಲಕ 51ರನ್‍ಗಳ ಸೋಲನ್ನು ಕಂಡಿತು. ಆ ಮೂಲಕ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ವಶಕ್ಕೆ ಪಡೆದುಕೊಂಡಿತು, ಇನ್ನು ಸರಣಿ ಸೋಲಿನ ಬಳಿಕ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮತ್ತೆ ಅಪಸ್ವರಗಳು ಏಳುತ್ತಿದ್ದು, ಟ್ವೀಟರ್‍ನಲ್ಲಿ ಹ್ಯಾಶ್ ಟ್ಯಾಗ್ ಕ್ಯಾಪ್ಟನ್ಸಿ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್‍ನಲ್ಲಿದ್ದು, ಕೊಹ್ಲಿ ಬದಲಾಗಿ ರೋಹಿತ್ ಶರ್ಮಾ ನಾಯಕತ್ವವನ್ನು ವಹಿಸಿಕೊಳ್ಳ ಬೇಕು ಅನ್ನೋ ಕೂಗು ಕೇಳಿ ಬರ್ತಾ ಇದೆ. ಇನ್ನು ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ಹಿರಿಯ ಆಟಗಾರರು ಆಡಿರೋ ಮಾತುಗಳನ್ನು ಇಟ್ಟುಕೊಂಡು ಕ್ರಿಕೆಟ್ ಪ್ರಿಯರು ಪ್ರಶ್ನೆಗಳನ್ನು ಶುರುಮಾಡಿದ್ದಾರೆ.

ಇನ್ನು ಇತ್ತ ಸರಣಿ ಸೋಲಿನಿಂದಾಗಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದರೆ, ಇಂದಿನ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಂದ್ಯದ ಸೋಲಿನ ನಡುವೆಯು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಹೌದು ವಿರಾಟ್ ಕೊಹ್ಲಿ ಅತಿ ವೇಗವಾಗಿ 22ಸಾವಿರ ರನ್ ಗಳಿಸಿದ ಆಟಗಾರ ಅನ್ನೋ ಹೆಗ್ಗಳಿಗೆ ಇವತ್ತಿನ ಪಂದ್ಯದಲ್ಲಿ ಪಾತ್ರರಾಗಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ 22 ಸಾವಿರ ರನ್ ಗಳಿಸಿರೋ ಆಟಗಾರರ ಪಟ್ಟಿಯಲ್ಲಿ ಇದೀಗ ವಿರಾಟ್ ಕೊಹ್ಲಿ ಸ್ಥಾನ ಪಡೆಯುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಮೊದಲ ಸ್ಥಾನದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಇದ್ದು 34 ಸಾವಿರಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಮೊದಲನೇ ಸ್ಥಾನದಲ್ಲಿ ಇದ್ದಾರೆ.

ಇತ್ತ ಭಾರತ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಸೋತರು, ಭಾರತೀಯ ಹುಡುಗನೊಬ್ಬ ಆಸ್ಟ್ರೇಲಿಯಾದ ಯುವತಿಯ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯ ವೀಕ್ಷಿಸಲು ಬಂದಿದ್ದ ಭಾರತ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ಆಸ್ಟ್ರೇಲಿಯಾ ಯುವತಿಗೆ ಪಂದ್ಯ ನಡೆಯುವ ವೇಳೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ಸದ್ಯ ಭಾರತೀಯ ಹುಡುಗ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹುಡುಗ ಹುಡಿಗಿಗೆ ಪ್ರಪೋಸ್ ಮಾಡುತ್ತಿದ್ದಂತೆ ಇತ್ತ ಮೈದಾನದಲ್ಲಿ ಫಿಲ್ಡಿಂಗ್ ಮಾಡುತ್ತಿದ್ದ ಮ್ಯಾಕ್ಸ್‍ವೆಲ್ ಇಬ್ಬರಿಗೂ ಅಭಿನಂದನೆ ಸಲ್ಲಿಸಿದ್ರು, ಇನ್ನು ಸೋಶಿಯಲ್ ಮೀಡಿಯಾದಲ್ಲಿವಿಡಿಯೋ ವೈರಲ್ ಆಗುತ್ತಿದ್ದಂತೆ ಇತ್ತ ಟೀಂ ಇಂಡಿಯಾ ಮ್ಯಾಚ್ ಗೆಲ್ಲದಿದ್ರು, ಇಂಡಿಯಾದ ಹುಡುಗ ಆಸ್ಟ್ರೇಲಿಯಾ ಹುಡುಗಿಯ ಮನಸು ಗೆದ್ದ ಅಂತ ಸಾಕ್ ಗುರು ಅಂತ ಹೇಳುತ್ತಿದ್ದಾರೆ.

ಇವತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ ಹುಡುಗರ ಪ್ರದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top