
ಭಾರತ,ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 66ರನ್ಗಳ ಸೋಲನ್ನು ಕಂಡಿತು, ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 374ರನ್ಗಳ ಬೃಹತ್ ಗುರಿಯನ್ನು ನೀಡಿತ್ತು, ಇನ್ನು ಈ ದೊಡ್ಡ ಮೊತ್ತವನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭಿಕವಾಗಿ ಧವನ್ ಮಾಯಾಂಕ್ ಜೋಡಿ ಉತ್ತಮ ಓಪನಿಂಗ್ ತಂದರು, ನಂತರ ಟೀಂ ಇಂಡಿಯಾದ ವಿಕೆಟ್ಗಳು ಬ್ಯಾಕ್ ಟು ಬ್ಯಾಕ್ ಉದುರಲು ಪ್ರಾರಂಭವಾಯ್ತು ನಂತರ ಶಿಖರ್ ಧವನ್ 74ರನ್ ಮತ್ತು ಹಾರ್ಧಿಕ್ ಪಾಂಡ್ಯ ಅವರ 90 ರನ್ಗಳ ನೆರವಿನಿಂದ 50 ಓವರ್ನಲ್ಲಿ 308ರನ್ಗಳಿಸುವಲ್ಲಿ ಶಕ್ತವಾಗುವ ಮೂಲಕ ಮೊದಲ ಏಕದಿನ ಪಂದ್ಯವನ್ನು ಸೋಲಬೇಕಾಯಿತು, ಇನ್ನು ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯ ಸೋತರು, ಹಾರ್ದಿಕ್ ಪಾಂಡ್ಯ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಹೌದು ಹಾರ್ಧಿಕ್ ಪಾಂಡ್ಯ ಕಡಿಮೆ ಬಾಲ್ನಲ್ಲಿ ಅತಿ ವೇಗವಾಗಿ ಸಾವಿರ ರನ್ ಹೊಡೆದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 43 ರನ್ಗಳಿಸುತ್ತಿದ್ದಂತೆ ಅತಿ ಕಡಿಮೆ ಬಾಲ್ನಲ್ಲಿ 1 ಸಾವಿರ ಹೊಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಪಾಂಡ್ಯ 857 ಬಾಲ್ಗಳಲ್ಲಿ ಒಂದು ಸಾವಿರ ರನ್ ಗಳಿಸುವ ಮೂಲಕ ಮೊದಲ ಭಾರತೀಯ ಆಟಗಾರನಾದರೆ ವಿಶ್ವದಲ್ಲಿ 5ನೇ ಆಟಗಾರನಾಗಿದ್ದಾರೆ. ಇನ್ನು ಮೊದಲ ಸ್ಥಾನವನ್ನು ಆಂಡ್ರೋ ರಸಲ್ ಅಲಂಕರಿಸಿದ್ದಾರೆ. ಆ ಮೂಲಕ ಪಾಂಡ್ಯ ಹೊಸ ದಾಖಲೆ ಬರೆದಿದ್ರೆ, ಇತ್ತ ಯಜುವೇಂದ್ರ ಚಹಲ್ ಯಾರಿಗೂ ಬೇಡವಾದ ಒಂದು ದಾಖಲೆಯನ್ನು ಬರೆಯುವ ಮೂಲಕ ಚಹಲ್ ತಮ್ಮದೇ ದಾಖಲೆಯನ್ನು ತಾವೇ ಮುರಿದುಕೊಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ಚಹಲ್ 10 ಓವರ್ನಲ್ಲಿ 89ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ರೆ, ಈ ಹಿಂದೆ ಇಂಗ್ಲೆಂಡ್ ವಿರುದ್ಧ ಅವರದ್ದೇ ಇದ್ದ ಕೆಟ್ಟ ದಾಖಲೆ 10 ಓವರ್ನಲ್ಲಿ 88ರನ್ಗಳನ್ನು ನೀಡಿದ್ದ ದಾಖಲೆಯನ್ನು ತಾವೇ ಮುರಿದುಕೊಳ್ಳುವ ಮೂಲಕ ಯಾರಿಗೂ ಬೇಡವಾದ ದಾಖಲೆಗಯನ್ನು ತಾವೇ ಬರೆದಿಕೊಂಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸೋತರು ಪಾಂಡ್ಯ ಹೊಸ ದಾಖಲೆಯನ್ನು ಬರೆದರೆ ಇತ್ತ ಚಹೆಲ್ ಯಾರಿಗೂ ಬೇಡವಾದ ದಾಖಲೆಯನ್ನು ಬರೆದಿದ್ದಾರೆ. ಇನ್ನು ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಹೊಡಿ ಬಡಿ ಆಟಕ್ಕೆ ಮುಂದಾಗುವ ಮೂಲಕ ಬಹುಬೇಗನೇ ವಿಕೆಟ್ ಕಳೆದುಕೊಳ್ಳುವ ಮೂಲಕ ತಾವಿನ್ನು ಐಪಿಎಲ್ ಗುಂಗಿನಿಂದ ಹೊರ ಬಂದಿಲ್ಲ ಅನ್ನೋದನ್ನು ಸಹ ತೋರಿಸಿದ್ದಾರೆ.
ನಿಮ್ಮ ಪ್ರಕಾರ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು, ಟೀಂ ಇಂಡಿಯಾದ ಹುಡುಗರು ಇನ್ನು ಐಪಿಎಲ್ ಮೂಡ್ನಿಂದ ಹೊರ ಬಂದಿಲ್ವ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.