
ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತ ಗೆದ್ದು ಬೀಗಿದೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಡಿದ ಆಸ್ಟ್ರೇಲಿಯಾ ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿತು, ಮೊದಲ ಇನ್ನಿಂಗ್ಸ್ನಲ್ಲಿ 195ರನ್ಗಳ ಅಲ್ಪ ಮೊತ್ತಕ್ಕೆ ಕುಸಿಯುವ ಮೂಲಕ ಹಿನ್ನಡೆ ಅನುಭವಿಸಿತು, ಇನ್ನು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ನಾಯಕ ರಹಾನೆ ಅದ್ಭುತ ಶತಕದಿಂದ ಇನ್ನಿಂಗ್ಸ್ ಮುನ್ನಡೆಯನ್ನು ಸಾಧಿಸಿವ ಮೂಲಕ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತು, 121ರನ್ಗಳ ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲೂ ಬೌಲಿಂಗ್ನಲ್ಲಿ ಹಿಡಿತ ಸಾಧಿಸುವ ಮೂಲಕ ಆಸ್ಟ್ರೇಲಿಯಾವನ್ನು 200 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಸುಲಭ ಗುರಿಯನ್ನು ತನ್ನದಾಗಿಸಿಕೊಂಡಿತು, ಆಸ್ಟ್ರೇಲಿಯಾ ನೀಡಿದ 70ರನ್ಗಳ ಗುರಿಯನ್ನು ಎರಡು ವಿಕೆಟ್ ಕಳೆದುಕೊಂಡು ಗೆಲ್ಲುವ ಮೂಲಕ ಮೊಟ್ಟ ಮೊದಲ ಬಾರಿಗೆ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವನ್ನು ಸಾಧಿಸಿವ ಮೂಲಕ ಸರಣಿಯನ್ನು ಸಮ ಬಲ ಮಾಡಿಕೊಂಡಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಬೌಲಿಂಗ್ ವಿಭಾಗದ ಪಾಲು ಹೆಚ್ಚಾಗಿದ್ದು, ಆರ್ಸಿಬಿಯ ಆಟಗಾರ ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಪಾದಾರ್ಪಣೆಯ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ತೋರಿ ಎಲ್ಲರ ಗಮನ ಸೆಳೆದ್ರು, ಇನ್ನು ಬ್ಯಾಟಿಂಗ್ ವಿಭಾಗದಲ್ಲೂ ಪಾದಾರ್ಪಣೆಯ ಪಂದ್ಯದಲ್ಲಿ ಶುಬ್ಮಾನ್ ಗಿಲ್ ಉತ್ತಮ ಪ್ರದರ್ಶನ ತೋರಿದ್ದು ಬಿಸಿಸಿಐ ಗಮನ ಸೆಳೆದಿದ್ದಾರೆ. ಇನ್ನು ಪಂದ್ಯದಲ್ಲಿ ಟೀಂ ಇಂಡಿಯಾ ಪರ ಬೂಮ್ರಾ 2 ವಿಕೆಟ್ ಪಡೆದ್ರೆ, ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದು ಗಾಯದ ಸಮಸ್ಯೆಯಿಂದ ಪಂದ್ಯದಿಂದ ಹೊರ ನಡೆದ್ರು, ಇನ್ನು ಅಶ್ವಿನ್ ಮತ್ತು ಜಡೇಜಾ ತಲಾ ಎರಡು ವಿಕೆಟ್ ಪಡೆದ್ರೆ, ಮೊಹಮ್ಮದ್ ಸಿರಾಜ್ ಪಾದಾರ್ಪಣೆಯ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡಿ ಮೂರು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದ್ರು.
ಸದ್ಯ ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆ ಇತ್ತ ನಾಯಕತ್ವದ ವಿಚಾರದಲ್ಲೂ ಮಾತುಗಳು ಸಹ ಕೇಳಿ ಬರ್ತಾ ಇದ್ದು, ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿಗಿಂತ ಅಂಜಿಕ್ಯ ರಹಾನೆಯೇ ಉತ್ತಮ ನಾಯಕ ಅನ್ನೋ ಮಾತುಗಳನ್ನು ಹೇಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಮೆಲ್ಬೋರ್ನ್ ಈ ಟೆಸ್ಟ್ ಅನ್ನೋ ಮಾತುಗಳನ್ನು ಹೇಳಿದ್ದು, ರಹಾನೆಗೆ ಯಾವ ಸಮಯದಲ್ಲಿ ಯಾವ ಬೌಲರ್ ಅನ್ನು ಬೌಲಿಂಗ್ಗೆ ಇಳಿಸಬೇಕು ಅನ್ನೋ ಕಲೆ ಗೊತ್ತಿದ್ದು, ಆತ ಒಬ್ಬ ಬೆಸ್ಟ್ ಟೆಸ್ಟ್ ಕ್ಯಾಪ್ಟನ್ ಅನ್ನೋ ಮಾತುಗಳನ್ನು ಹೇಳುತ್ತಿದ್ದಾರೆ.
ಹಾಗಾದ್ರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹುಡುಗರ ಪ್ರದರ್ಶನದ ಬಗ್ಗೆ ನಿಮ್ಮ ಅನಿಸಿಕೆ ಏನೂ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಾವ ಆಟಗಾರನ ಆಟದ ಬಗ್ಗೆ ನಿಮಗೆ ಅಸಮಾಧಾನವಿದೆ ಕಾಮೆಂಟ್ ಮಾಡಿ ತಿಳಿಸಿ.