ಆಸ್ಟ್ರೇಲಿಯಾ ತಂಡಕ್ಕೆ ಶುರುವಾಯ್ತು ಕನ್ನಡಿಗ ಕೆಎಲ್ ರಾಹುಲ್ ಭಯ

ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, 27ರಿಂದ ಮೊದಲ ಏಕದಿನ ಪಂದ್ಯ ಶುರುವಾಗಲಿದ್ದು, ಇದೀಗ ಆಸ್ಟ್ರೇಲಿಯಾಗೆ ಈ ಟೀಂ ಇಂಡಿಯಾ ಆಟಗಾರನಿಂದ ತಲೆನೋವು ಶುರುವಾಗಿದೆ. ಆಸ್ಟ್ರೇಲಿಯಾಗೆ ಇದೀಗ ವಿರಾಟ್, ಅಥವಾ ಶಿಖರ್ ಧವನ್ ಸೇರಿದಂತೆ ಯಾರ ತಲೆನೋವು ಅಷ್ಟೇನೂ ಪರಿಣಮಿಸಿಲ್ಲ, ಆದ್ರೆ ಈ ಆಸ್ಟ್ರೇಲಿಯಾ ಆಟಗಾರ ಹೇಳುವ ರೀತಿ ನಮ್ಮ ತಂಡಕ್ಕೆ ಕೆ ಎಲ್ ರಾಹುಲ್ ತಲೆನೋವಾಗಿ ಪರಿಣಮಿಸಲಿದೆ ಅಂತ ಹೇಳಿದ್ದಾರೆ.

ಹೌದು ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಒಟ್ಟಿಗೆ ಆಟವಾಡಿದ್ದ ಗೇಲ್ ಮ್ಯಾಕ್ಸ್‍ವೆಲ್ ಇದೀಗ ರಾಹುಲ್ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾದಲ್ಲಿ ಸದ್ಯ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಿಂದ ಲಾಭವಾಗಬಹುದು ಆದರೆ ಟೀಂ ಇಂಡಿಯಾದಲ್ಲಿ ಅಪಾಯಕಾರಿ ದಾಂಡಿಗ ಇದ್ದು ಆತನ ಸಾಮಥ್ರ್ಯದ ಬಗ್ಗೆ ನಾನು ಚೆನ್ನಾಗಿ ಗೊತ್ತು, ಹಾಗಾಗಿ ನಾವು ರಾಹುಲ್‍ರನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಅವರು ಮೂರು ಫಾರ್ಮೆಟ್‍ನಲ್ಲೂ ಆಸ್ಟ್ರೇಲಿಯಾಗೆ ಅಪಾಯಕಾರಿ ಆಗಲಿದ್ದಾರೆ ಅಂತ ಹೇಳಿದ್ದಾರೆ. ಇನ್ನು ಐಪಿಎಲ್‍ನಲ್ಲಿ ಉತ್ತಮ ಫಾರ್ಮ್‍ನೊಂದಿಗೆ ಟಾಪ್ ಸ್ಕೋರರ್ ಆಗಿರೋ ರಾಹುಲ್ ಅದೇ ಫಾರ್ಮ್ ಅನ್ನು ಇಲ್ಲಿಯು ಮುಂದುವರೆಸಲಿದ್ದು, ಅವರನ್ನು ನಿಯಂತ್ರಿಸ ಬೇಕಾದರೆ ಏನು ಮಾಡಬೇಕು ಅಂತ ಕೂಡ ಮ್ಯಾಕ್ಸ್‍ವೆಲ್ ತಮ್ಮ ತಂಡದ ಸದಸ್ಯರಿಗೆ ಸಲಹೆ ನೀಡಿದ್ದಾರೆ.

ಕೆಎಲ್ ರಾಹುಲ್ ಜೊತೆ ಆಟವಾಡುವಾಗ ಅವರನ್ನು ನಿಯಂತ್ರಿಸ ಬೇಕಾದ್ರೆ ಅವರನ್ನು ಓಡಿಸಿ ರನೌಟ್ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದೆ. ನಾವು ಇದೀಗ ಸರಣಿಯುದ್ದಕ್ಕೂ ಅವರನ್ನು ನಿಯಂತ್ರಿಸಬೇಕಾದರೆ. ಅವರನ್ನು ಓಡಿಸಿ ರನೌಟ್ ಮಾಡಿಸ ಬೇಕು ಅಂತ ಮ್ಯಾಕ್ಸ್‍ವೆಲ್ ಹೇಳಿದ್ದಾರೆ. ಇನ್ನು ರಾಹುಲ್ ಒಬ್ಬ ಅದ್ಭುತ ಆಟಗಾರ ಅವರು ಒತ್ತಡದ ಸನ್ನಿವೇಶಗಳಲ್ಲಿ ಜಬಾಬ್ದಾರಿಯನ್ನು ಒಬ್ಬರೇ ನಿರ್ವಹಿಸುತ್ತಾರೆ ಅಂತ ಮ್ಯಾಕ್ಸ್‍ವೆಲ್ ಹೇಳಿದ್ದಾರೆ.

ನಿಮ್ಮ ಪ್ರಕಾರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಪರಿಣಾಮಕಾರಿಯಾಲಿದ್ದಾರ. ನಿಮ್ಮ ಅಭಿಪ್ರಾಯವೇನು ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top