
ಆಸ್ಟ್ರೇಲಿಯಾ ವಿರುದ್ಧದ ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಬಿಗ್ ಶಾಕ್ ಆಗಿದೆ. ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಗದೇ ಬೆಂಚ್ ಕಾದಿದ್ದ ಕೆ.ಎಲ್ ರಾಹುಲ್ ಮೂರನೇ ಟೆಸ್ಟ್ ಪಂದ್ಯಕ್ಕೆ ಎಂಟ್ರಿ ಕೊಡಲಿದ್ದಾರೆ ಅಂತಾನೇ ಹೇಳಲಾಗುತ್ತಿತ್ತು,ಮಾಯಾಂಕ್ ಮತ್ತು ಹನುಮ ವಿಹಾರಿಯವರ ಕಳಪೆ ಪ್ರದರ್ಶನದಿಂದ ರೋಹಿತ್ ಶರ್ಮಾ ಜೊತೆಯಲ್ಲಿ ರಾಹುಲ್ ಕೂಡ ತಂಡದ 11 ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತಾನೇ ಹೇಳಲಾಗಿತ್ತು, ಆದ್ರೆ ಇದೀಗ ಕೆಎಲ್ ರಾಹುಲ್ ಟೆಸ್ಟ್ ಸರಣಿಯಿಂದ ಹೊರಗುಳಿಯುತ್ತಿದ್ದಾರೆ, ಹೌದು ಅಭ್ಯಾಸ ನಡೆಸುತ್ತಿದ್ದ ವೇಳೆ ಕೆಎಲ್ ರಾಹುಲ್ ಮೊಣಕೈಗೆ ಏಟು ಮಾಡಿಕೊಂಡಿದ್ದು, ರಾಹುಲ್ ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ. ಮೊದಲ ಎರಡು ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದ ರಾಹುಲ್ ಇದೀಗ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಗುಳಿಯುವ ಮೂಲಕ ಟೆಸ್ಟ್ಗೆ ಮತ್ತೆ ಎಂಟ್ರಿಕೊಡುವ ಕನಸಿನಲ್ಲಿದ್ದ ಕನ್ನಡಿಗನಿಗೆ ನಿರಾಸೆ ಉಂಟಾಗಿದ್ರೆ, ಇತ್ತ ಟೀಂ ಇಂಡಿಯಾಗೆ ಅಘಾತವಾಗಿದೆ
.