ಆರ್‌ಸಿಬಿ ಹುಡುಗ್ರು ಮಾಡಿದ್ರು 10 ದಾಖಲೆ..ಇಲ್ಲಿದೆ ನೋಡಿ ರಿಪೋರ್ಟ್‌

ಐಪಿಎಲ್‌ 2020 ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಕೆಕೆಆರ್‌ ವಿರುದ್ಧ ದೊಡ್ಡ ಗೆಲುವನ್ನು ಸಾಧಿಸುವ ಮೂಲಕ ಐಪಿಎಲ್‌ 2020ಯಲ್ಲಿ ದಾಖಲೆ ಮೇಲೆ ದಾಖಲೆಯನ್ನು ಬರೆದಿದೆ. ಮ್ಯಾಚ್‌ ನಂಬರ್‌ 39 ಆರ್‌ಸಿಬಿ ಮತ್ತು ಕೆಕೆಆರ್‌ ನಡುವಿನ ಪಂದ್ಯದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ತಂಡಕ್ಕೆ ಆರಂಭದಿಂದಲೇ ಆಘಾತ ಶುರುವಾಯ್ತು, ಮೊಹಮ್ಮದ್‌ ಸಿರಾಜ್‌ ಯಾರು ಊಹಿಸಲಾಗದ ಪ್ರದರ್ಶನ ನೀಡೋ ಮೂಲಕ ಕೆಕೆಆರ್‌ ತಂಡಕ್ಕೆ ದೊಡ್ಡ ಹೊಡೆತವನ್ನು ಕೊಟ್ರು, ಆರ್‌ಸಿಬಿ ಮತ್ತು ಕೆಕೆಆರ್‌ ನಡುವಿನ ಪಂದ್ಯದಲ್ಲಿ ಐಪಿಎಲ್‌ ಇತಿಹಾಸದಲ್ಲೇ ಹೊಸ ಹೊಸ ದಾಖಲೆಗಳಿಗೆ ಸಾಕ್ಷಿಯಾಯ್ತ, ಹೌದು ಕೆಕೆಆರ್‌ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಆರ್‌ಸಿಬಿ ಕೆಕೆಆರ್‌ ತಂಡವನ್ನು 84ರನ್‌ಗೆ ಕಟ್ಟಿಹಾಕುವ ಮೂಲಕ ಈ ಐಪಿಎಲ್‌ನಲ್ಲಿ ಒಂದೇ ಬಾರಿಗೆ ಎರಡು ದಾಖಲೆಯನ್ನು ಸೃಷ್ಟಿಮಾಡಿದೆ.

ಈ ಐಪಿಎಲ್‌ ಸೀಸನ್‌ನಲ್ಲಿ ಅತಿ ಕಡಿಮೆ ಸ್ಕೋರ್‌ಗೆ ಕಟ್ಟಿಹಾಕುವ ಮೂಲಕ ಈ ಸೀಸನ್‌ನ ಆರ್‌ಆರ್‌ ತಂಡದ ದಾಖಲೆಯನ್ನು ಮುರಿದಿದ್ರೆ, ಐಪಿಎಲ್‌ ಇತಿಹಾಸದಲ್ಲಿ 20 ಓವರ್‌ಗಳನ್ನು ಪೂರ್ಣವಾಗಿ ಅಡಿ ಕೇವಲ 84ರನ್‌ ಮಾತ್ರ ನೀಡುವ ಮೂಲಕ ಆರ್‌ಸಿಬಿ ಮತ್ತೊಂದು ದಾಖಲೆಯನ್ನ ನಿರ್ಮಿಸಿದೆ. ಇದು ತಂಡದ ದಾಖಲೆಯಾದ್ರೆ, ನಿನ್ನೆಯ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡೋ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಯಾರು ಮಾಡಲು ಸಾಧ್ಯವಾಗದ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಹೌದು ಮೊಹಮ್ಮದ್‌ ಸಿರಾಜ್‌ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ 4 ಓವರ್‌ನಲ್ಲಿ ಕೇವಲ 8ರನ್‌ ನೀಡಿದ್ದು ಈ ಐಪಿಎಲ್‌ನ ಬೆಸ್ಟ್‌ ಎಕನಾಮಿಕ್‌ ಬೌಲರ್‌ ಅನ್ನೋ ದಾಖಲೆಯನ್ನ ಬರೆದಿದ್ರೆ, ಇದುವರೆಗೂ ಯಾರು ಐಪಿಎಲ್‌ನಲ್ಲಿ ಸಾಧಿಸಲು ಸಾಧ್ಯವಾಗ ದಾಖಲೆ ಅಂದರೆ 4 ಓವರ್‌ನಲ್ಲಿ 2 ಓವರ್‌ ಮೇಡನ್‌ ಮಾಡುವ ಮೂಲಕ ಮೇಡನ್‌ ವಿಕೆಟ್‌ ಪಡೆದು ಐಪಿಎಲ್‌ ಮತ್ತು ಟಿ೨೦ ಇತಿಹಾಸದಲ್ಲೇ ಯಾರು ಮಾಡದ ಹೊಸ ದಾಖಲೆಯನ್ನು ಮೊಹಮ್ಮದ್‌ ಸಿರಾಜ್‌ ಮಾಡಿದ್ದಾರೆ.

ಇದರ ಜೊತೆಯಲ್ಲಿ ಒಂದು ಪಂದ್ಯದಲ್ಲಿ 20 ಓವರ್‌ನಲ್ಲಿ 4 ಮೇಡನ್‌ ಓವರ್‌ ಮಾಡೋ ಮೂಲಕ ಆರ್‌ಸಿಬಿ ಹುಡುಗರು ಮೊತ್ತೊಂದು ದಾಖಲೆಗೆ ಸಾಕ್ಷಿಯಾಗಿದ್ದಾರೆ. ಮೊಹಮ್ಮದ್‌ ಸಿರಾಜ್‌ 2 ಓವರ್‌, ಕಿಸ್‌ ಮಾರಿಸ್‌ 1 ಓವರ್‌, ವಾಷಿಂಗ್‌ಟನ್‌ ಸುಂದರ್‌ 1 ಓವರ್‌ ಮೇಡನ್‌ ಮಾಡುವ ಮೂಲಕ ಒಂದೇ ಪಂದ್ಯದಲ್ಲಿ 4 ಮೇಡನ್‌ ಓವರ್‌ ಮಾಡುವ ಮೂಲಕ ಒಂದೇ ಪಂದ್ಯದಲ್ಲಿ 10 ದಾಖಲೆಗಳನ್ನು ನಿರ್ಮಿಸೋ ಮೂಲಕ ಹೊಸ ದಾಖಲೆಗೆ ಆರ್‌ಸಿನಿ ಹುಡುಗ್ರು ಸಾಕ್ಷಿಯಾದ್ರು,ಇನ್ನು ಮೊಹಮ್ಮದ್‌ ಸಿರಾಜ್‌ ಪವರ್‌ ಪ್ಲೇನಲ್ಲಿ ಮೂರು ಓವರ್‌ಗೆ ಕೇವಲ ೨ರನ್‌ ನೀಡುವ ಮೂಲಕ ಬೆಸ್ಟ್‌ ಎಕನಾಮಿಕ್‌ ಬೌಲರ್‌ ಆಗಿದ್ದಾರೆ.

ಆ ಮೂಲಕ ನಿನ್ನೆಯ ಪಂದ್ಯದಲ್ಲಿ ಮ್ಯಾಚ್‌ ಚೇಂಜರ್‌ ಆಟಗಾರರಾಗಿ ಸಿರಾಜ್‌ ಹೊರಹೊಮ್ಮಿದ್ದ, 84ರನ್‌ಗಳ ಸುಲಭ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ 2ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಪ್ಲೇ ಆಫ್‌ ಹಾದಿಗೆ ಎಂಟ್ರಿ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಅತಿ ಕಡಿಮೆ ರನ್‌ಗೆ ಕಟ್ಟಿಹಾಕುವ ಮೂಲಕ ಹೊಸ ದಾಖಲೆ ಬರೆದ್ದರೆ, ಇತ್ತ ಮೊಹಮ್ಮದ್‌ ಸಿರಾಜ್‌ 2 ಮೇಡನ್‌ ಓವರ್‌ ಜೊತೆಯಲ್ಲಿ 3 ಮೇಡನ್‌ ವಿಕೆಟ್‌ಗಳಿಸುವ ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದ್ರು. ಇನ್ನು ಐಪಿಎಲ್‌ನಲ್ಲಿ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗಿದ್ದ ಸಿರಾಜ್‌ ಈ ಒಂದು ಅದ್ಭುತ ಪ್ರದರ್ಶನದಿಂದ ಎಲ್ಲರ ಬಾಯಿ ಮುಚ್ಚಿಸಿದ್ರೆ, ಇತ್ತ ಸಿರಾಜ್‌ ಮೇಲೆ ವಿರಾಟ್‌ ಯಾಕೆ ಇಷ್ಟು ಒಲವು, ಯಾಕಿಷ್ಟು ಚಾನ್ಸ್‌ ನೀಡ್ತಾರೆ ಅಂತ ಟೀಕೆ ಮಾಡುತ್ತಿದ್ದ ಟೀಕಾರರ ಬಾಯಿಯನ್ನು ಮುಚ್ಚಿಸೋ ಮೂಲಕ ತಾನೊಬ್ಬ ಅದ್ಭುತ ಬೌಲರ್‌ ಅನ್ನೋದನ್ನ ಸಾಭೀತು ಮಾಡಿದ್ರು.

ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಹುಡುಗರ ಪ್ರದರ್ಶನದ ಬಗ್ಗೆ ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top