ಆರ್‌ಸಿಬಿ ಸೋಲಿಗೆ ಪ್ರಮುಖ ಮೂರು ಕಾರಣಗಳು..

ನಿನ್ನೆ ನಡೆದ ಆರ್‌ಸಿಬಿ ಮತ್ತು ಪಂಜಾಬ್‌ ನಡುವಿನ ಪಂದ್ಯದಲ್ಲಿ ಪಂಜಾಬ್‌ ತಂಡ ಭರ್ಜರಿ ಗೆಲುವನ್ನು ಸಾಧಿಸಿತು. ಟಾಸ್‌ಗೆದ್ದು ಫಿಲ್ಡಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ ತಂಡಕ್ಕೆ ನಾಯಕ ಆಟ ವಾಡಿದ ಕೆಎಲ್‌ ರಾಹುಲ್‌ ಶತಕದ ಮೂಲಕ ದೊಡ್ಡ ಹೊಡೆತವನ್ನೇ ಕೊಟ್ರು. ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಸೋಲಿಗೆ ಕಾರಣಗಳನ್ನು ಹುಡುಕುತ್ತಾ ಹೋದ್ರೆ

ಆರ್‌ಸಿಬಿ ವಿರುದ್ಧಿ ಪಂಜಾಬ್‌ ದೊಡ್ಡ ಮೊತ್ತವನ್ನು ಕಲೆಹಾಕುವ ನಿಟ್ಟಿನಲ್ಲಿ ಮುನ್ನುಗುತ್ತಿದ್ದಾಗ ಕೆ.ಎಲ್‌ ರಾಹುಲ್‌ ನೀಡಿದ ಎರಡು ಕ್ಯಾಚ್‌ಗಳನ್ನು ನಾಯಕ ವಿರಾಟ್‌ ಕೊಹ್ಲಿ ಕೈ ಚೆಲ್ಲಿದ್ದು ಆರ್‌ಸಿಬಿಗೆ ಮೊದಲ ಹೊಡೆತ ಕೊಟ್ಟಿತು, ಮೊದಲ ಕ್ಯಾಚ್‌ ಕೊಹ್ಲಿ ಹಿಡಿದಿದ್ದರೆ ಪಂಜಾಬ್‌ ತಂಡವನ್ನು ೧೮೦ರ ಆಸುಪಾಸಿನಲ್ಲಿ ಕಟ್ಟಿಹಾಕಬಹುದಾಗಿತ್ತು.

ಇನ್ನು ಸರಿಯಾದ ರೀತಿ ಬೌಲಿಂಗ್‌ ವಿಭಾಗವನ್ನು ಬಳಸಿಕೊಳ್ಳುವಲ್ಲಿ ಕೊಹ್ಲಿ ಯಡವಿದ್ರು, ಹೌದು ಮೊದಲ ಪಂದ್ಯದಲ್ಲಿ ಮಿಂಚಿದ್ದ ಚಹಲ್‌ ಮತ್ತು ಸೈನಿಯನ್ನು ಸರಿಯಾದ ರೀತಿ ಬಳಸಿಕೊಳ್ಳುವಲ್ಲಿ ಕೊಹ್ಲಿ ಯಡವಿದ್ರು, ಉತ್ತಮ ಪ್ರದರ್ಶನ ನೀಡ್ತಾ ಇದ್ದ ಬೌಲರ್‌ಗಳನ್ನು ಕೊನೆಯ ಎರಡು ಓವರ್‌ಗಳಿಗೆ ಉಳಿಸುಕೊಳ್ಳುವ ಪ್ಲಾನ್‌ನಲ್ಲಿ ಎಡವಿದ್ದು ಇದರಿಂದಾಗಿ ಕೊನೆಯ ಎರಡು ಓವರ್‌ ದುಬಾರಿಯಾದವು.

ಆರ್‌ಸಿಬಿ ಅತಿ ಹೆಚ್ಚಾಗಿ ನೆಚ್ಚಿಕೊಂಡಿರುವುದು ಬ್ಯಾಟಿಂಗ್‌ ವಿಭಾಗವನ್ನು , ಕೊಹ್ಲಿ, ಫಿಂಚ್‌, ಎಬಿಡಿಯಂತಹ ಬಲಿಷ್ಟ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿದ್ದರು 207 ರನ್‌ ಟಾರ್ಗೆಟ್‌ ಮಾಡುವ ಸಂಧರ್ಭದಲ್ಲಿ ಒತ್ತಡಕ್ಕೆ ಸಿಲುಕಿದ ಓಪನಿಂಗ್‌ ಆಟಗಾರರು ದೊಡ್ಡ ಹೊಡೆತಕ್ಕೆ ಕೈಹಾಕಿದ್ದರಿಂದಾಗಿ ಬಹುಬೇಗ ಮೊದಲ 3 ವಿಕೆಟ್‌ಕಳೆದುಕೊಳ್ಳ ಬೇಕಾಯಿತು. ದೊಡ್ಡ ರನ್‌ ಟಾರ್ಗೆಟ್‌ ಮಾಡುವ ಒತ್ತಡದಲ್ಲಿ ತಂಡಕ್ಕೆ ಇನ್ನಿಂಗ್ಸ್‌ ಕಟ್ಟಲು ಸಾಧ್ಯವಾಗಲಿಲ್ಲ.

ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಬಾದ್‌ ತಂಡದ ವಿರುದ್ಧ ಗೆಲುವು ಸಾಧಿಸಿ ಅತೀ ಹೆಚ್ಚು ಆತ್ಮವಿಶ್ವಾಸದಲಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top