ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿಕೊಡಲು ಪ್ರಮುಖ ಕಾರಣಗಳು

ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಡೆಲ್ಲಿ ವಿರುದ್ಧ ಸೋತರು ನೆಟ್‌ ರನ್‌ರೇಟ್‌ ಮೂಲಕ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಹೀಗಿರುವಾಗ ಆರ್‌ಸಿಬಿ ನಿನ್ನೆಯ ಪಂದ್ಯದಲ್ಲಿ ಸೋತರು ಪ್ಲೇ ಆಫ್‌ಗೆ ಎಂಟ್ರಿಕೊಡಲು ಕಾರಣವಾದ ಪ್ರಮುಖ ಕಾರಣಗಳನ್ನು ಇವತ್ತು ನಾವ್‌ ನೋಡೋಣ.

ಮೊದಲನೇ ಕಾರಣ ನೋಡೋದಾದ್ರೆ, ಟಾಸ್‌ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿದ್ದು, ತಂಡದಲ್ಲಿ ಎರಡು ಬದಲಾವಣೆಯೊಂದಿಗೆ ಕಣಕ್ಕೆ ಇಳಿದಿತ್ತು, ತಂಡದಲ್ಲಿ ಗುರುಕಿರತ್‌ ಬದಲಿಗೆ ಶಿವಂದುಬೆ ಮತ್ತು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನವದೀಪ್‌ ಸೈನಿ ಬದಲಿಗೆ ಶಹಬಾಸ್‌ ಅಹಮದ್‌ ಅವರನ್ನು ಆಯ್ಕೆ ಮಾಡಿದ್ದು ತಂಡಕ್ಕೆ ಪ್ರಮುಖವಾಗಿ ವರವಾಯ್ತು.

ಇನ್ನು ಎರಡನೇ ಕಾರಣ ನೋಡೋದಾದ್ರೆ, ನಿನ್ನೆಯ ಪಂದ್ಯದಲ್ಲಿ ಮೂರು ಜನ ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸಿದ್ದು ಪ್ಲೇ ಆಫ್‌ ಹಂತಕ್ಕೆ ತಲುಪಲು ಸಹಕಾರಿಯಾಯ್ತು, ಹೌದು ಸುಲಭವಾಗಿ ಡೆಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಠಿಣವಾಗಿ ಮಾಡಿದ್ದು ಈ ಮೂವರು ಸ್ಪಿನ್ನರ್‌ಗಳು ಈ ಮೂಲಕ ಆರ್‌ಸಿಬಿ ರನ್‌ರೇಟ್‌ನಲ್ಲಿ ಉತ್ತಮವಾಗಲು ಸಹಕಾರಿಯಾದ್ರು, ಈ ಮೂವರು ಬೌಲರ್‌ಗಳು 72 ಬಾಲ್‌ ಮಾಡಿ ಕೇವಲ 79ರನ್‌ ನೀಡಿದ್ದು, ಆ ಮೂಲಕ ಡೆಲ್ಲಿಗೆ ಸುಲಭವಾಗಬೇಕಾಗಿದ್ದ ಪಂದ್ಯವನ್ನು ಒಂದಿಷ್ಟು ಕಠಿಣವಾಗುತ್ತೆ ಮಾಡಿದ್ರು.

ಮೂರನೇ ಕಾರಣವಂದ್ರೆ ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಂಡು ಶಹಬಾಸ್‌ ಅಹಮ್ಮದ್‌ ತಂಡಕ್ಕೆ ಆಸರೆಯಾಗಿದ್ದು, ಹೌದು ಶಹಬಾಸ್‌ ಅಹಮ್ಮದ್‌ 4 ಓವರ್‌ಗಳಲ್ಲಿ 26ರನ್‌ ನೀಡಿ ಪ್ರಮುಖ ಎರಡು ವಿಕೆಟ್‌ ಪಡೆದಿದ್ದು ಆರ್‌ಸಿಬಿಗೆ ವರವಾಯ್ತು, ಅರ್ಧ ಶತಕ ಸಿಡಿಸಿ ಉತ್ತಮವಾಗಿ ಆಟವಾಡುತ್ತಿದ್ದ ಶಿಖರ್‌ ಧವನ್‌ ಮತ್ತು ನಾಯಕ ಶ್ರೇಯಸ್‌ ಅಯ್ಯರ್‌ ವಿಕೆಟ್‌ ಪಡೆದು ತಂಡಕ್ಕೆ ಆಸರೆಯಾದ್ರು,

ನಾಲ್ಕನೇ ಕಾರಣ ಅಂದ್ರೆ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಾಗ ದೇವದತ್‌ ಪಡಿಕಲ್‌ ಆಸೆಯಾಗಿ 50ರನ್‌ಗಳನ್ನು ಸಿಡಿಸೋ ಮೂಲಕ ಆರ್‌ಸಿಬಿ ಅಲ್ಪ ಮೊತ್ತಕ್ಕೆ ಕುಸಿಯೋದನ್ನು ತಡೆಯೋ ಮೂಲಕ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡುವಲ್ಲಿ ಪಡಿಕಲ್‌ ಸಹಕಾರ ನೀಡಿದ್ರು.

ಇದು ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಸೋತರು ಪ್ಲೇ ಆಫ್‌ಗೆ ಎಂಟ್ರಿಕೊಡಲು ಸಹಕಾರಿಯಾದ ಪ್ರಮುಖ ಅಂಶಗಳು.

ನಿಮ್ಮ ಪ್ರಕಾರ ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿಕೊಡಲು ನಿನ್ನೆಯ ಪಂದ್ಯದಲ್ಲಿ ಇನ್ನು ಯಾವೆಲ್ಲಾ ಅಂಶಗಳು ಪ್ರಮುಖ ಕಾರಣವಾಯ್ತು, ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಇನ್ನು ಯಾವೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕು. ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top