
ಐಪಿಎಲ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ, ಪ್ರತಿ ತಂಡಗಳು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದೆ, ಅದ್ರಲ್ಲೂ ಈ ಬಾರಿ ಐಪಿಎಲ್ ಶುರುವಿನಿಂದ ಉತ್ತಮ ಪ್ರದರ್ಶನ ನೀಡ್ತಾ ಬರ್ತಾ ಇರೋ ಆರ್ಸಿಬಿ ತಂಡ ಸದ್ಯ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಆಡಿದ 5 ಪಂದ್ಯದಲ್ಲಿ ೩ ಪಂದ್ಯಗಳನ್ನು ಗೆದ್ದು ಅಭಿಮಾನಿಗಳಲ್ಲಿ ಒಂದಿಷ್ಟು ಕಪ್ ಗೆಲ್ಲುವ ವಿಶ್ವಾಸವನ್ನು ತುಂಬಿದೆ..ಆದ್ರೆ ಈ ಬಾರಿ ನಾವು ನಿಮಗೆ ಐಪಿಎಲ್ ವಿಚಾರವಾಗಿ ಹೇಳುತ್ತಿಲ್ಲ, ಈ ಬಾರಿ ನಾವು ಐಪಿಎಲ್ನಲ್ಲಿ ಇರೋ ಕೆಲವು ಆಟಗಾರರನ್ನು ಸ್ಯಾಂಡಲ್ವುಡ್ ಸ್ಟಾರ್ಗಳ ಟೈಟಲ್ಗೆ ಹೋಲಿಸೋ ಪ್ರಯತ್ನವನ್ನು ಮಾಡಲಾಗಿದೆ..ಯಾವ ಆಟಗಾರ ಯಾವ ಸ್ಟಾರ್ ಟೈಟಲ್ಗೆ ಹೋಲ ಬಹುದು ಅನ್ನೋ ಒಂದು ಸಣ್ಣ ಪ್ರಯತ್ನವನ್ನು ಮಾಡಲಾಗಿದೆ.ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೋಲಿಕೆಯಾಗಿರೋದನ್ನು ಇಟ್ಟುಕೊಂಡು ಈ ಒಂದು ಪ್ರಯತ್ನವನ್ನು ಮಾಡಲಾಗಿದ್ದು.. ಯಾವ ಆಟಗಾರ ಯಾರಿಗೆ ಹೋಲಿಕೆ ಆಗೋಬಹುದ ಅನ್ನೋದನ್ನ ನೋಡೋ..
ಬ್ಸಾಕ್ಸಾಫಿಸ್ನಲ್ಲಿ ಸುಲ್ತಾನ್ ಡಿಬಾಸ್ ಆದ್ರೆ..ಐಪಿಎಲ್ನಲ್ಲಿ ಸುಲ್ತಾನ್ ಎಬಿ ಡಿ ಬಾಸ್
- ಸ್ಯಾಂಡಲ್ವುಡ್ನಲ್ಲಿ ಸೆಂಚುರಿ ಸ್ಟಾರ್ ಕರುನಾಡ ಚಕ್ರವರ್ತಿ ಶಿವಣ್ಣ.. ಕ್ರಿಕೆಟ್ನಲ್ಲಿ ಸೆಂಚುರಿ ಸ್ಟಾರ್ ಅಂದ್ರೆ ಅದು ವಿರಾಟ್ ಕೊಹ್ಲಿ.
- ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಅಂದ್ರೆ ಅದು ಪುನೀತ್ ರಾಜ್ಕುಮಾರ್.. ಕ್ರಿಕೆಟ್ನ ಪವರ್ ಹಿಟ್ಟರ್ ಅಂದ್ರೆ ಅದು ಅರೋನ್ ಫಿಂಚ್
- ಕಿಚ್ಚ ಸುದೀಪ್ ಚಿತ್ರರಂಗದ ಅಭಿನಯ ಚಕ್ರವರ್ತಿಯಾದ್ರೆ.. ಆರ್ಸಿಬಿ ಟ್ರಂಪ್ಕಾರ್ಡ್ ಯಜುವೇಂದ್ರ ಜಹಲ್ ಸ್ಪಿನ್ಗೆ ಚಕ್ರವರ್ತಿ.
- ನಟನೆಯಲ್ಲಿ ನ್ಯಾಷನಲ್ ಸ್ಟಾರ್ ಯಶ್ ರಾಕಿಂಗ್ ಆದ್ರೆ.. ಆರ್ಸಿಬಿಗೆ ಓಪನರ್ ದೇವದತ್ ಪಡಿಕಲ್ ರಾಕಿಂಗ್ ಸ್ಟಾರ್
- ಸ್ಯಾಂಡಲ್ವುಡ್ನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆದ್ರೆ..ಬೌಲಿಂಗ್ನಲ್ಲಿ ಆಕ್ಷನ್ ಪ್ರಿನ್ಸ್ ನವದೀಪ್ ಶೈನಿ ಅಂತ ಹೇಳಬಹುದು..
ಇದು ಸದ್ಯ ಆರ್ಸಿಬಿಯ ಕೆಲ ಆಟಗಾರರಿಗೆ ಸ್ಯಾಂಡಲ್ವುಡ್ನ ಸ್ಟಾರ್ಗಳ ಟೈಟಲ್ ಹೋಲಿಕೆ ಮಾಡೋ ಪ್ರಯತ್ನ.. ನಿಮ್ಮ ಪ್ರಕಾರ ಆರ್ಸಿಬಿ ತಂಡದ ಯಾವ ಆಟಗಾರರಿಗೆ ಸ್ಯಾಂಡಲ್ವುಡ್ನ ಯಾವ ಸ್ಟಾರ್ ಟೈಟಲ್ ಸೂಟ್ ಆಗುತ್ತೆ ಕಾಮೆಂಟ್ ಮಾಡಿ ತಿಳಿಸಿ.