ಆರ್‌ಸಿಬಿ ಗೆಲುವಿಗಾಗಿ ದೇವರಿಗೆ ಅಭಿಷೇಕ ಮಾಡಿದ ಅಭಿಮಾನಿ

ಐಪಿಎಲ್‌ 2020ಯಲ್ಲಿ ಸ್ಟೇಡಿಯಂನಲ್ಲಿ ಐಪಿಎಲ್‌ ಮ್ಯಾಚ್‌ ನೋಡೋದನ್ನು ಮಿಸ್‌ ಮಾಡಿಕೊಳ್ತಾ ಇರೋ ಅಭಿಮಾನಿಗಳು ಟಿವಿಯಲ್ಲಿ ಲೈವ್‌ ನೋಡೋ ಮೂಲಕ ತಮ್ಮ ನೆಚ್ಚಿನ ತಂಡವನ್ನು ಚಿಯರ್‌ ಮಾಡೋ ಮೂಲಕ ಖುಷಿ ಪಡುತ್ತಿದ್ದಾರೆ. ಅದರಲ್ಲೂ ನಮ್ಮ ಆರ್‌ಸಿಬಿ ತಂಡದ ಫ್ಯಾನ್ಸ್‌ಗಳಂತು ಈ ಬಾರಿ ಹೆಚ್ಚು ಖುಷಿಯಲ್ಲಿದ್ದು, ಆರ್‌ಸಿಬಿ ಉತ್ತಮ ಪ್ರದರ್ಶನ ನೀಡ್ತಾ ಇದ್ದು, ಈಬಾರಿ ಕಪ್‌ ಪಕ್ಕಾ ಗೆಲ್ಲಲಿದೆ ಅನ್ನೋ ಖುಷಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ ಇದ್ದಾರೆ. ಇನ್ನು ಈ ಬಾರಿ ಆರ್‌ಸಿಬಿ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಅಭಿಮಾನವನ್ನು ತೋರಿಸುತ್ತಿದ್ದಾರೆ. ಪ್ರತಿ ಮ್ಯಾಚ್‌ನಲ್ಲೂ ಆರ್‌ಸಿಬಿ ಗೆಲ್ಲಬೇಕು ಅಂತ ಅಭಿಮಾನಿಗಳು ಹಾರೈಸುತ್ತಿದ್ದು, ಪ್ರತಿ ಪಂದ್ಯದಲ್ಲೂ ಯಾರಾದರೂ ಒಬ್ಬ ಅಭಿಮಾನಿ ದೇವರಿಗೆ ಒಂದು ರೀತಿಯಲ್ಲಿ ಪೂಜೆಯನ್ನು ಮಾಡಿಸೋ ಮೂಲಕ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ಮ್ಯಾಚ್‌ಗಳಲ್ಲಿ ಶೃಂಗೇರಿ ಶಾರಾದ ದೇವಿಗೆ ಆರ್‌ಸಿಬಿ ಅಭಿಮಾನಿಯೊಬ್ಬ ಕುಂಕುಮಾರ್ಚನೆ ಮಾಡಿಸೋ ಮೂಲಕ ಆರ್‌ಸಿಬಿ ಗೆಲುವಿಗಾಗಿ ಪಾರ್ಥನೆ ಮಾಡಿಕೊಂಡಿದ್ದ, ಇದೀಗ ಇಂದು ನಡೆಯಲಿರೋ ಆರ್‌ಸಿಬಿ ಮತ್ತು ಕೆಕೆಆರ್‌ ನಡುವಿನ ಪಂದ್ಯದಲ್ಲಿ ಆರ್‌ಸಿನಿ ಗೆಲುವು ಸಾಧಿಸೋ ಮೂಲಕ ಪ್ಲೇ ಆಫ್‌ ಹಾದಿ ಸುಗಮವಾಗಲಿ ಎಂದು ಅಭಿಮಾನಿಯೊಬ್ಬ ಧಾರವಾಡದ, ಕಿಲ್ಲಾ ಎಂಬಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಅಭಿಷೇಕವನ್ನು ಮಾಡಿಸೋ ಮೂಲಕ ಇಂದಿನ ಪಂದ್ಯ ಆರ್‌ಸಿಬಿ ಗೆಲ್ಲಲಿ ಎಂದು ಪ್ರಾರ್ಥನೆಯನ್ನು ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಆರ್‌ಸಿಬಿ ಕಪ್‌ ಗೆಲ್ಲಲಿ ಬಿಡಲಿ, ಪ್ರತಿ ಐಪಿಎಲ್‌ನಲ್ಲೂ ಅದೇ ಹುಮ್ಮಸಿನಲ್ಲಿ ಟೀಂನ ಸಪೋರ್ಟ್‌ ಮಾಡೋ ಫ್ಯಾನ್ಸ್‌ ಈ ಬಾರಿ ಕೂಡ ಆರ್‌ಸಿಬಿ ಕಪ್‌ ಗೆಲ್ಲಲಿದೆ ಅನ್ನೋ ವಿಶ್ವಾದಲ್ಲಿದ್ದು, ವಿಭಿನ್ನ ರೀತಿಯಲ್ಲಿ ಆರ್‌ಸಿಬಿ ಮೇಲೆ ಅಭಿಮಾನವನ್ನು ತೋರುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top