ಆರ್‌ಸಿಬಿ ಗೆಲುವಿಗಾಗಿ ಕುಂಕುಮಾರ್ಚನೆ ಮಾಡಿಸಿದ್ದ ಭಕ್ತ ಫೋಟೋ ವೈರಲ್‌

ನಿನ್ನೆ ಐಪಿಎಲ್‌ 10 ನೇ ಪಂದ್ಯದಲ್ಲಿ ಮುಂಬೈ ಮತ್ತು ಆರ್‌ಸಿಬಿ ನಡುವೆ ಸಖತ್‌ ಫೈಟ್‌ ನಡೆದಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಆರ್‌ಸಿಬಿ 203 ರನ್‌ಗಳ ಗುರಿಯನ್ನು ನೀಡಿತ್ತು. ಇದನ್ನು ಬೆನ್ನು ಹತ್ತಿದ ಮುಂಬೈತಂಡ ಇನ್ನೇನು ಸೋಲಿಸ ದಡ ಸೇರಿತು ಅನ್ನೋವಾಗ ಪೊಲಾರ್ಡ್‌,ಕಿಶನ್‌ ಆಟದಿಂದ ಪಂದ್ಯ ಟೈ ಆಗಿ ಸೂಪರ್‌ ಓವರ್‌ ವರೆಗೂ ಕರೆದುಕೊಂಡು ಹೋಯ್ತು, ಆದ್ರೆ ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ ತಂಡದ ಅದ್ಭುತ ಬೌಲಿಂಗ್‌,ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿ ಮುಂಬೈ ವಿರುದ್ಧ ಸೂಪರ್‌ ಓವರ್‌ನಲ್ಲಿ ಜಯಭೇರಿ ಬಾರಿಸಿತು, ಆದ್ರೆ ಆರ್‌ಸಿಬಿ ಫ್ಯಾನ್‌ ಒಬ್ಬರು ಪಂದ್ಯಕ್ಕೂ ಮುಂಚೆ ಆರ್‌ಸಿಬಿ ತಂಡ ಈ ಮ್ಯಾಚ್‌ ಗೆಲ್ಲಬೇಕು ಎಂದು ಶೃಂಗೇರಿ ಶಾರಾದಾಂಬ ದೇವಾಲಯದಲ್ಲಿ ಕುಂಕುಮಾರ್ಚನೆ ಮಾಡಿಸಿರೋ ರಶೀದಿಯೊಂದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆರ್‌ಸಿಬಿ ಹೆಸರಿನಲ್ಲಿ ಈ ರಶೀದಿ ಇದ್ದು ಪಂದ್ಯಕ್ಕೂ ಮುಂಚೆ ಪೂಜೆ ಮಾಡಿಸಲಾಗಿದೆ. ಈ ರಶೀದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಈ ಪೂಜೆ ಮಾಡಿಸಿದ್ದರಿಂದಾಗಿ ಆರ್‌ಸಿಬಿ ಮ್ಯಾಚ್‌ಗೆದ್ದಿದೆ ಎಂದು ಕಾಮೆಂಟ್‌ಗಳು ಶುರುವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top