ಆರ್‌ಸಿಬಿ ಎಂಥ ಟೀಂ ಇದು ಎಂದ ಅನುಷ್ಕಾ ಶರ್ಮಾ..!

ನಿನ್ನೆ ಆರ್‌ಸಿಬಿ ಮತ್ತು ಮುಂಬೈ ನಡುವಿನ ಪಂದ್ಯ ಎಲ್ಲರಿಗೂ ಒಂದು ಬಾರಿ ಎದೆ ಗಟ್ಟಿಇಟ್ಟುಕೊಂಡು ನೋಡುವಂತೆ ಮಾಡಿತ್ತು, ಕೊನೆಯ ಮೂರು ಓವರ್‌ ಎರಡು ತಂಡದ ಅಭಿಮಾನಿಗಳಿಗೆ ಬಾಯಿಗೆ ಬರಿಸಿತ್ತು, ಇನ್ನು ಪಂದ್ಯ ಟೈ ಆಗಿ ಸೂಪರ್‌ ಓವರ್‌ ಆಡುವ ಹಾಗೇ ಆಯ್ತು, ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ ತಂಡ ಗೆದ್ದು ಬೀಗಿತು, ಆದ್ರೀಗ ಈ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸದ್ಯ ಗರ್ಭಿಣಿಯಾಗಿರೋ ಅನುಷ್ಕಾ ಶರ್ಮಾ ಐಪಿಎಲ್‌ ಲೈವ್‌ ಅನ್ನು ಮನೆಯಲ್ಲಿ ಕುಳಿತು ಆರಾಮಗಿ ನೋಡುತ್ತಿದ್ದಾರೆ. ಆದ್ರೆ ನಿನ್ನೆ ಮ್ಯಾಚ್‌ ಬಗ್ಗೆ ಅನುಷ್ಕಾ ಶರ್ಮಾ ಆರ್‌ಸಿಬಿ ಟೀಂ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ʻ ವಾಹ್‌, ಗರ್ಭಿಣಿಗೆ ತುಂಬ ರೋಮಾಂಚನಕಾರಿ ಪಂದ್ಯ. ಎಂಥ ತಂಡವಿದು ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಅನುಷ್ಕಾ ನಿನ್ನೆಯ ಮ್ಯಾಚ್‌ ಅನ್ನು ಸೀಟ್‌ ತುದಿಯಲ್ಲಿ ನೋಡಿ ಆನಂದಿಸಿದ್ದಾರೆ ಅನ್ನೋದನ್ನ ಹಂಚಿಕೊಂಡಿದ್ದಾರೆ. ಇನ್ನು ನಿನ್ನೆ ಪಂದ್ಯವನ್ನು ಎಲ್ಲಾ ಕ್ರಿಕೆಟ್‌ ಅಭಿಮಾನಿಗಳು ಸೀಟ್‌ ತುದಿಯಲ್ಲಿ ನೋಡಿ ಎಂಜಾಯ್‌ ಮಾಡಿದ್ರು, ಇನ್ನು ಕೆಲವ್ರು ಆರ್‌ಸಿಬಿ ಏನ್‌ ಗುರು ಯಾವಾಗ್ಲು ಬಾಯಿಗೆ ಬರೆಸಿ ಗೆಲ್ತಾರೆ ಅಂತ ಕಾಮೆಂಟ್‌ ಕೂಡ ಮಾಡುತ್ತಿದ್ದಾರೆ. ಇದೀಗ ಅನುಷ್ಕಾ ಎಂಥ ತಂಡವಿದು ಅನ್ನೋ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top