ಆರ್‌ಸಿಬಿ ಈ ಆಟಗಾರ ಬೇಕೇ ಬೇಕು..ನೀವ್‌ ಏನ್‌ ಹೇಳ್ತೀರಾ..?

ಐಪಿಎಲ್‌ 2021ರ ಟೂರ್ನಿಗೆ ಮೆಗಾ ಆಕ್ಷನ್‌ ನಡೆಯಲಿದ್ದು, ಈಗಾಗಲೇ ಎಲ್ಲಾ ಐಪಿಎಲ್‌ ಫ್ರಾಂಚೈಸಿಗಳು ತಮ್ಮ ತಂಡವನ್ನು ಬಲಿಷ್ಠ ಮಾಡಿಕೊಳ್ಳುವ ನಿಟ್ಟಿನಲ್ಲಿ ತಯಾರಿಗಳನ್ನು ನಡೆಸುತ್ತಿವೆ, ಜೊತೆ ಒಂದಿಷ್ಟು ಆಟಗಾರರ ಮೇಲೆ ಕೂಡ ಕಣ್ಣಿಟ್ಟಿದೆ. ಈ ಬಾರಿ ಮೆಗಾ ಆಕ್ಷನ್‌ ನಡೆಯುತ್ತಿರೋದ್ರಿಂದ ಪ್ರತಿ ತಂಡಗಳು ಮೂರು ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ಹರಾಜಿ ಪ್ರಕ್ರಿಯೆಗೆ ಬಿಡಬಹುದಾಗಿದೆ, ಹೀಗಾಗಿ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಈ ಒಬ್ಬ ಆಟಗಾರನ ಮೇಲೆ ಎಲ್ಲಾ ಪ್ರಾಂಚೈಸಿಗಳು ಕಣ್ಣಿಟ್ಟಿದ್ದು, ಆರ್‌ಸಿಬಿ ಕೂಡ ಈ ಆಟಗಾರರನ ಮೇಲೆ ಹೆಚ್ಚಿನ ಕಣ್ಣು ಇಟ್ಟಿದೆ.

ಹೌದು ಇತ್ತಿಚೆಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೊ ಕ್ವೀನ್ಸ್‌ಲ್ಯಾಂಡ್‌ ಪ್ರಿಮಿಯರ್‌ ಲೀಗ್‌ನಲ್ಲಿ ಕೇವಲ 54 ಬಾಲ್‌ಗಳಲ್ಲಿ 20 ಸಿಕ್ಸರ್‌ ಮತ್ತು 5 ಬೌಂಡರಿ ಸಿಡಿಸಿ 155ರನ್‌ಗಳಿಸೋ ಆಸ್ಟ್ರೇಲಿಯಾದ ಆಟಗಾರ ಕ್ರಿಸ್‌ ಲೀನ್‌ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಇದ್ದರು ಒಂದು ಪಂದ್ಯದಲ್ಲೂ ಕಣಕ್ಕೆ ಇಳಿಯದ ಕ್ರಿಸ್‌ ಲೀನ್‌ ಈ ಬಾರಿ ಐಪಿಎಲ್‌ ಆಕ್ಷನ್‌ನಲ್ಲಿ ಬಹು ಬೇಡಿಕೆಯ ಆಟಗಾರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಕ್ವೀನ್ಸ್‌ಲ್ಯಾಂಡ್‌ ಪ್ರೀಮಿಯರ್‌ ಲೀಗ್‌ನಲ್ಲಿ ತಾವು ಭಾರಿಸಿದ 155ರನ್‌ಗಳಲ್ಲಿ 140ರನ್‌ ಬಂದಿರೋದು 20 ಸಿಕ್ಸರ್‌ ಮೂಲಕ ವಾಗಿದೆ. ಪವರ್‌ ಪ್ಲೇನಲ್ಲಿ ಬಿಗ್‌ಹಿಟ್ಟರ್‌ ಆಗಿರೋ ಕ್ರಿಸ್‌ ಲೀನ್‌ ಮುಂದಿನ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕಣಕ್ಕೆ ಇಳಿದ್ರೆ ತಂಡಕ್ಕೆ ಬಲ ತಂದುಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಕಳೆದ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್‌ ಲೀನ್‌ ಮೇಲೆ ಕಣ್ಣಿಟ್ಟಿದ್ದ ಆರ್‌ಸಿಬಿ ಕೊನೆಯ ಗಳಿಗೆಯಲ್ಲಿ ಅರೋನ್‌ ಫಿಂಚ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು, ಈ ಬಾರಿ ಫಿಂಚ್‌ ಅವರನ್ನು ಆರ್‌ಸಿಬಿ ಕೈ ಬಿಡಲಿದ್ದು ಆ ಮೂಲಕ ಕ್ರಿಸ್‌ ಲೀನ್‌ ಅವರನ್ನು ತಂಡಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸಲಿದೆ. ಆ ಮೂಲಕ ತಂಡದ ಓಪನಿಂಗ್‌ ಬ್ಯಾಟಿಂಗ್‌ ಲೈನಪ್‌ ಬಲ ಪಡಿಸಿಕೊಳ್ಳುವ ಪ್ರಯತ್ನ ಮಾಡಲಿದೆ. ಇನ್ನು ಕ್ರಿಸ್‌ ಲೀನ್‌ ಐಪಿಎಲ್‌ನಲ್ಲಿ 41 ಪಂದ್ಯಗಳಲ್ಲಿ 1280ರನ್‌ಗಳನ್ನು ಗಳಿಸಿದ್ದು 93ರನ್‌ ಇವರ ಬೆಸ್ಟ್‌ ರನ್‌ ಆಗಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿಗೆ ಬಿಗ್‌ ಓಪನಿಂಗ್‌ ಬೇಕು ಅಂದ್ರೆ ಬಿಗ್‌ ಹಿಟ್ಟರ್‌ ಬೇಕಾಗಿದ್ದು, ಕ್ರಿಸ್‌ ಲೀನ್‌ ಉತ್ತಮ ಆಯ್ಕೆ ಆಂತಾನೇ ಹೇಳ ಬಹುದು. ಹಾಗಾದ್ರೆ ನಿಮ್ಮ ಪ್ರಕಾರ ಆರ್‌ಸಿಬಿ ಈ ಬಾರಿಯ ಆಕ್ಷನ್‌ನಲ್ಲಿ ಕ್ರಿಸ್‌ ಲೀನ್‌ ಅವರನ್ನು ತೆಗೆದುಕೊಳ್ಳುವ ಮನಸ್ಸು ಮಾಡಬೇಕಾ. ಕ್ರಿಸ್‌ ಲೀನ್‌ ಬದಲು ಆರ್‌ಸಿಬಿ ಓಪನಿಂಗ್‌ ಬ್ಯಾಟಿಂಗ್‌ಗೆ ಯಾರು ಸೂಕ್ತ ಅನಿಸುತ್ತೆ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top