ಆರ್‌ಸಿಬಿ ಆಟಗಾರರು ಇವತ್ತಿನ ಮ್ಯಾಚ್‌ ಚೆರ್ಸಿಯಲ್ಲಿ ಇರೋಲ್ಲ ಆಟಗಾರರ ಹೆಸರು..

ಇಂದು ಆರ್‌ಸಿಬಿ ಮತ್ತು ಸನ್‌ರೈರ್ಸಸ್‌ ಹೈದರಬಾದ್‌ ತಂಡದ ನಡುವೆ ಮೂರನೇ ಪಂದ್ಯ ನಡೀತಾ ಇದ್ದು, ಇಂದು ನಡೆಯೋ ಪಂದ್ಯದಲ್ಲಿ ಆರ್‌ಸಿಬಿ ತಂಡದ ಆಟಗಾರರು ತಮ್ಮ ಜಿರ್ಸಿಯಲ್ಲಿ ತಮ್ಮ ಹೆಸರಿಗೆ ಬದಲಾಗಿ ಬೇರೆ ಹೆಸರನ್ನು ಹಾಕಿಕೊಳ್ಳು ಪ್ರಾಂಚೈಸಿ ನಿರ್ಧಾರ ಮಾಡಿದೆ. ಅದರಂತೆ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ತಮ್ಮ ಜೆರ್ಸಿಯಲ್ಲಿ ತಮ್ಮ ಹೆಸರಿಗೆ ಬದಲಾಗಿದೆ, ಪ್ರಪಂಚದಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳ ಹೆಸರನ್ನು ಜೆರ್ಸಿ ಮೇಲೆ ಹಾಕಿಕೊಳ್ಳುವ ಮೂಲಕ ಕೊರೋನಾ ವಾರಿಯರ್ಸ್‌ಗಳಿಗೆ ಟ್ರಿಬ್ಯೂಟ್‌ ಕೊಡಲು ನಿರ್ಧರಿಸಿದ್ದಾರೆ.

ಹಾಗಾಗಿ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ಕೊರೋನಾ ವಾರಿಯರ್ಸ್‌ನ ಹೆಸರಿನ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದ್ದಾರೆ.

ಇನ್ನು ಟ್ವೀಟರ್‌ನಲ್ಲೂ ತಮ್ಮ ಅಕೌಂಟ್‌ನ ಹೆಸರನ್ನು ಬದಲಿಸಿಕೊಂಡಿದ್ದು ಅಲ್ಲೂ ಸಹ ಕೊರೋನಾ ವಾರಿಯರ್ಸ್‌ ಹೆಸರನ್ನು ಹಾಕಿಕೊಂಡಿದ್ದಾರೆ. ಈಗಾಗಲೇ ಎಬಿಡಿ ಮತ್ತು ವಿರಾಟ್‌ ತಮ್ಮ ಟ್ವೀಟರ್‌ ಖಾತೆಯ ಹೆಸರನ್ನು ಬದಲಾಯಿಸಿಕೊಂಡಿದ್ದು ವಿರಾಟ್‌ ಕೊಹ್ಲಿ ಸಿಂಮ್ರಾನ್‌ಜಿತ್‌ ಸಿಂಗ್‌ ಎಂಬುವವರ ಹೆಸರನ್ನು ತಮ್ಮ ಟ್ವೀಟರ್‌ ಮತ್ತು ಜೆರ್ಸಿಯಲ್ಲಿ ಹಾಕಿಕೊಂಡು ಮೈದಾನಕ್ಕೆ ಇಳಿಯಲಿದ್ದಾರೆ. ಆ ಮೂಲಕ ಆರ್‌ಸಿಬಿ ಆಟಗಾರರು ಕೊರೋನಾ ವಾರಿಯರ್ಸ್‌ಗೆ ಮೈದಾನದಲ್ಲಿ ನಮನವನ್ನು ಸಲ್ಲಿಸಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top