ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮಿಸ್ಟರ್‌ ನ್ಯಾಗ್ಸ್‌

ದಾನೀಶ್‌ ಸೇಠ್‌ ಆರ್‌ಸಿಬಿ ತಂಡದಲ್ಲಿ ಮಿಸ್ಟರ್‌ ನ್ಯಾಗ್ಸ್‌ ಆಗಿ ಎಲ್ಲರಿಗೂ ಪರಿಚಯ, ಆರ್‌ಸಿಬಿಯಲ್ಲಿ ತಂಡದ ಆಟಗಾರರು ಎಷ್ಟು ಅಭಿಮಾನಿಗಳನ್ನು ಹೊಂದಿದ್ದಾರೋ ಅಷ್ಟೇ ಅಭಿಮಾನಿಗಳನ್ನು ಮಿಸ್ಟರ್‌ ನ್ಯಾಗ್ಸ್‌ ಕೂಡ ಹೊಂದಿದ್ದಾರೆ. ಆರ್‌ಸಿಬಿ ತಂಡದ ಇನ್‌ಸೈಡರ್‌ ಆಗಿ ಕಾರ್ಯನಿರ್ವಹಿಸುತ್ತಿರೋ ದಾನೀಶ್‌ ಸೇಠ್‌ ಆರ್‌ಸಿಬಿ ತಂಡದಲ್ಲಿ ತಂಡದ ಆಟಗಾರರಿಗೆ ಒಂದುಷ್ಟು ತರಲೇ ಒಂದಿಷ್ಟು ತಮಾಷೆಗಳನ್ನು ಮಾಡುವ ಮೂಲಕ ಅವರಿಗೆ ಆಟದ ಜೊತೆಯಲ್ಲಿ ಎಂಟರ್‌ಟೈನ್ಮೆಂಟ್‌ ನೀಡ್ತಾನೆ ಬರುತ್ತಿದ್ದಾರೆ. ಇನ್ನು ಇವರ ತಮಾಷೆ, ತರಲೆಗೆ ಸಾಕಷ್ಟು ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ, ಇನ್ನು ಇವರ ತಮಾಷೆಯ ವಿಡಿಯೋಗಳನ್ನು ಸಖತ್‌ ಎಂಜಾಯ್‌ ಮಾಡಿಕೊಂಡು ನೋಡ್ತಾರೆ.. ತಂಡ ಸೋಲಲಿ ಗೆಲ್ಲಲಿ ತಾವು ಮಾಡುವ ತಮಾಷೆಗಳು ಸೋಲನ್ನು ಸಹ ಮರೆಸಿ ನಗುವನ್ನು ತರಿಸುತ್ತದೆ. ಇಂತಹ ಮಿಸ್ಟರ್‌ ನ್ಯಾಗ್ಸ್‌ ಇದೀಗ ಸಿಂಗಲ್‌ನಿಂದ ಮಿಂಗಲ್‌ ಆಗ್ತಿದ್ದಾರೆ. ಹೌದು ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಚಾರವಾಗಿ ಶೇರ್‌ ಮಾಡಿಕೊಂಡಿದ್ದು ʻಆಕೆ ಯೆಸ್‌ ಅಂತ ಹೇಳಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ, ನೀವೂ ನನ್ನ ಜೊತೆಗೆ ಜೀವನವನ್ನು ಕಳೆಯನ್ನು ತೀರ್ಮಾನಿಸಿದ್ದಕ್ಕೆ ಧನ್ಯವಾದಗಳು ಅಂತ ಹೇಳಿ ತಾವೂ ಜೋಡಿಯನ್ನು ಹುಡುಕಿಕೊಂಡಿರ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ದಾನೀಶ್‌ ಸೇಠ್‌ ಬಾಳ ಸಂಗಾತಿಯಾಗುತ್ತಿರೋ ಹುಡುಗಿಯ ಹೆಸರು ಅನ್ಯ ರಂಗಸ್ವಾಮಿಯಾಗಿದ್ದು, ಇವರು ಕೂಡ ಬೆಂಗಳೂರು ಮೂಲದವರೇ, ಸದ್ಯ ಮುಂಬೈನಲ್ಲಿ ಗ್ರಾಫಿಕ್ಸ್‌ ಡಿಸೈನರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ತರಲೆ,ತಮಾಷೆಯ ಮಾತುಗಳಿಂದಲೇ ಎಲ್ಲರನ್ನು ನಗುವಿನ ಅಲೆಯಲ್ಲಿ ತೇಲುಸಿದ್ದ ದಾನೀಶ್‌ ಸೇಠ್‌ ಬಾಳಲ್ಲಿ ಇದೀಗ ಅನ್ಯ ರಂಗಸ್ವಾಮಿ ಇನ್ನಷ್ಟು ಖುಷಿಯನ್ನು ನೀಡಲು ಬರ್ತಾ ಇದ್ದಾರೆ.

ಸದ್ಯ ದಾನೀಶ್‌ ಸೇಠ್‌ ಆರ್‌ಸಿಬಿಯಲ್ಲಿ ಮಿಸ್ಟ್‌ ನ್ಯಾಗ್ಸ್‌ ಆಗಿ ನಗಿಸುವ ಜೊತೆಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಹಂಬಲ್‌ ಪೊಲಿಟೀಶಿಯನ್‌ ನೋಗರಾಜ್‌ ಆಗಿ ಕನ್ನಡ ಸಿನಿ ರಸಿಕರಿಗೆ ಫ್ರೆಂಚ್‌ ಬಿರಿಯಾನಿಯನ್ನು ಸಹ ತಿನ್ನಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಟಿ 20 ಸರಣಿ ಗೆದ್ದ ನಂತರ ಇದೀಗ ಕ್ರಿಕೆಟ್‌ ಅಭಿಮಾನಿಗಳು ಟೆಸ್ಟ್‌ನತ್ತ ಚಿತ್ರ ಹರಿಸಿದ್ದಾರೆ. ಟೆಸ್ಟ್‌ ತಂಡದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳಾಗಿದ್ದು, ತಂಡದಲ್ಲಿ ಹಾರ್ಧಿಕ್‌ ಪಾಂಡ್ಯ ಸ್ಥಾನಪಡೆಯ ಬೇಕಿತ್ತು ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಏಕದಿನ ಮತ್ತು ಟಿ 20ಯಲ್ಲಿ ಭರ್ಜರಿ ಪ್ರದರ್ಶನ ನೀಡಿರೋ ಪಾಂಡ್ಯ ಟೆಸ್ಟ್‌ ಟೀಂ ನಲ್ಲಿ ಇಲ್ಲದಿರುವುದು ತಂಡಕ್ಕೆ ಅನುಭವಾಗಲಿದೆ ಅಂತ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ. ಪಾಂಡ್ಯ ಟೆಸ್ಟ್‌ ಸರಣಿಯಲ್ಲಿ ಅವರ ಅನುಪಸ್ಥಿತಿ ಟೀಂ ಇಂಡಿಯಾಕ್ಕೆ ಅನುಭವಕ್ಕೆ ಬರಲಿದೆ ಎಂದಿದ್ದಾರೆ.

ಹಾರ್ದಿಕ್‌ ಪಾಂಡ್ಯಗೆ ಬೆನ್ನುನೋವಿನ ಸಮಸ್ಯೆಯಿಂದಾಗಿ ಅವರು ಬೌಲಿಂಗ್‌ ಮಾಡಲು ಅಸಮರ್ಥರಾಗಿದ್ದಾರೆ. ಹೀಗಾಗಿ ವಿರಾಟ್‌ ಕೊಹ್ಲಿ ಆರನೇ ಬೌಲರ್‌ ಅತ್ತ ಮುಖಮಾಡಿದ್ದಾರೆ. ಇದಿರಿಂದಾಗಿ ಪಾಂಡ್ಯ ಅವರನ್ನು ಟೆಸ್ಟ್‌ ತಂಡದಿಂದ ಕೈ ಬಿಡಲಾಗಿದೆ, ಅವರ ಅನುಪಸ್ಥಿತಿ ಟೀಂ ಇಂಡಿಯಾಗೆ ನಷ್ಟವಾಗಲಿದೆ, ಅದು ತಂಡದ ಅನುಭವಕ್ಕೂ ಬರಲಿದೆ ಅಂತ ಸೆಹ್ವಾಗ್‌ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top